For Quick Alerts
  ALLOW NOTIFICATIONS  
  For Daily Alerts

  ಉಪ್ಪಿನ ಅಖಾಡಕ್ಕಿಳಿಸಿದ ಯೋಗರಾಜ್‌ ಭಟ್ರು: ಗೋಲ್ಡನ್ ಫ್ಯಾನ್ಸ್ ಕಾಯ್ತಾ ಇರಿ!

  |

  ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್‌ ಗಣೇಶ್ ಕ್ರೇಜಿ ಕಾಂಬಿನೇಷನ್‌ನ ಸಿನಿಮಾ 'ಗಾಳಿಪಟ- 2' ಆಗಸ್ಟ್‌ ಎರಡನೇ ವಾರ ರಿಲೀಸ್ ಆಗ್ತಿದೆ. ಚಿತ್ರದ ಒಂದೊಂದೇ ಸಾಂಗ್ ರಿಲೀಸ್ ಮಾಡಿ ನಿರ್ದೇಶಕರು ಹೈಪ್ ಕ್ರಿಯೇಟ್ ಮಾಡ್ತಿದ್ದಾರೆ. ಚಿತ್ರದಲ್ಲಿ ಗಣಿ ಜೊತೆಗೆ ದೂದ್ ಪೇಡಾ ದಿಗಂತ್ ಹಾಗೂ ಲೂಸಿಯಾ ಪವನ್ ಕುಮಾರ್‌ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ 'ಗಾಳಿಪಟ' ಟೈಟಲ್‌ನಲ್ಲಿ ಹೊಸ ಕಥೆ ಹೇಳಿ ಪ್ರೇಕ್ಷಕರನ್ನು ರಂಜಿಸಲು ಯೋಗರಾಜ್‌ ಭಟ್ರು ಮುಂದಾಗಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ 'ಗಾಳಿಪಟ- 2' ಚಿತ್ರಕ್ಕೆ ಸಾಥ್ ಕೊಡ್ತಿದ್ದಾರೆ.

  ರಮೇಶ್ ರೆಡ್ಡಿ ನಿರ್ಮಾಣದ 'ಗಾಳಿಪಟ- 2' ಚಿತ್ರದಲ್ಲಿ ವೈಭವಿ ಶಾಂಡಿಲ್ಯಾ, ಸಂಯುಕ್ತಾ ಮೆನನ್, ಶರ್ಮಿಳಾ ಮಾಂಡ್ರೆ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್‌ನಲ್ಲಿ ಯೋಗರಾಜ್ ಭಟ್‌ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯದ ಹಾಡುಗಳು ಸಿನಿರಸಿಕರಿಗೆ ಗುಂಗು ಹಿಡಿಸಿದೆ. ರಿಪೀಟ್ ಮೋಡ್‌ನಲ್ಲಿ ಅಭಿಮಾನಿಗಳು 'ಗಾಳಿಪಟ- 2' ಹಾಡುಗಳನ್ನು ಕೇಳುತ್ತಿದ್ದಾರೆ. ರಿಲೀಸ್ ಡೇಟ್ ಹತ್ತಿರ ಬರ್ತಿದ್ದಂತೆ ತಂಡ ಹೊಸ ಟೀಸರ್ ರಿಲೀಸ್‌ಗೆ ಸಿದ್ಧತೆ ನಡೆಸಿದೆ.

  9 ತಿಂಗಳ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿ ಕ್ಲ್ಯಾಶ್: 'ಗಾಳಿಪಟ'ಕ್ಕೆ ರವಿ ಬೋಪ್ಪಣ್ಣ ಡಿಕ್ಕಿ!9 ತಿಂಗಳ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿ ಕ್ಲ್ಯಾಶ್: 'ಗಾಳಿಪಟ'ಕ್ಕೆ ರವಿ ಬೋಪ್ಪಣ್ಣ ಡಿಕ್ಕಿ!

  'ಗಾಳಿಪಟ- 2' ಸಿನಿಮಾ ಕಥೆ ಬಗ್ಗೆ ಕುತೂಹಲವಿದೆ. ಯೋಗರಾಜ್ ಭಟ್‌ರ ಸಿನಿಮಾ ಅಂದರೆ ವಿಭಿನ್ನ ನಿರೂಪಣೆ, ಹಾಸ್ಯಮಿಶ್ರಿತ ಸಂಭಾಷಣೆ ಇದ್ದೇ ಇರುತ್ತೆ. ಈ ಚಿತ್ರದಲ್ಲೂ ಅದು ಮುಂದುವರೆಯಲಿದ್ದು, ಈ ಭಾರಿ ಕರ್ನಾಟಕದಿಂದ ವಿದೇಶದವರೆಗೆ 'ಗಾಳಿಪಟ' ಹಾರಲಿದೆ. ಮೋಷನ್ ಪೋಸ್ಟರ್ಸ್, ಸಾಂಗ್ಸ್‌ ಬಿಟ್ರೆ ಸಿನಿಮಾದ ವಿಡಿಯೋ ರಿಲೀಸ್ ಆಗಿಲ್ಲ. ಇದೀಗ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ ಪಾತ್ರ ಪರಿಚಯಿಸುವ ಸ್ಪೆಷಲ್ ಟೀಸರ್‌ ರಿಲೀಸ್ ಮಾಡುವ ಸಮಯ ಬಂದಿದೆ.

  ಗಾಳಿಪಟ 2: ಎಗ್ಸಾಮ್‌ನಲ್ಲಿ ಫೇಲ್, ಗಾಳಿಪಟ ಬಿಟ್ಟ ಗಣೇಶ್, ದಿಗಂತ್, ಪವನ್ ಗಾಳಿಪಟ 2: ಎಗ್ಸಾಮ್‌ನಲ್ಲಿ ಫೇಲ್, ಗಾಳಿಪಟ ಬಿಟ್ಟ ಗಣೇಶ್, ದಿಗಂತ್, ಪವನ್

  'ಗಾಳಿಪಟ- 2' ಟೀಸರ್ ನೋಡಿ ಉಪೇಂದ್ರ ಮೆಚ್ಚುಗೆ

  ಹೌದು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗಾಳಿಪಟ- 2'ನ ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ನೋಡಿ ಮೆಚ್ಚಿಕೊಂಡಿರೋ ರಿಯಲ್ ಸ್ಟಾರ್ ಈ ಬಾರಿ ಗಾಳಿಪಟ ಮತ್ತಷ್ಟು ಎತ್ತರಕ್ಕೆ ಹಾರಲಿ ಎಂದು ಶುಭ ಹಾರೈಸಿದ್ದಾರೆ. ನಾಳೆ (ಜುಲೈ. 26) ಸಂಜೆ 5 ಗಂಟೆ 2 ನಿಮಿಷಕ್ಕೆ 'ಗಾಳಿಪಟ- 2'ಚಿತ್ರದಲ್ಲಿ ಗಣಿ ಪಾತ್ರ ಹೇಗಿರುತ್ತೆ ಅನ್ನುವುದರ ಝಲಕ್ ನೋಡಬಹುದು.

   'ಗಾಳಿಪಟ- 2' ಸಾಂಗ್ಸ್ ಸೂಪರ್ ಹಿಟ್

  'ಗಾಳಿಪಟ- 2' ಸಾಂಗ್ಸ್ ಸೂಪರ್ ಹಿಟ್

  ಮೂರು ತಿಂಗಳ ಹಿಂದೆ ಚಿತ್ರದ 'ಎಕ್ಸಾಂ' ಸಾಂಗ್ ರಿಲೀಸ್ ಆಗಿತ್ತು. ಗಣಿ, ದಿಗ್ಗಿ, ಪವನ್ ಎಕ್ಸಾಂ ರಗಳೆ ಏನು ಅನ್ನೋದನ್ನು ಹಾಡಿ ಹೇಳಿದ್ದ ಸಾಂಗ್ ಹಿಟ್ ಆಗಿತ್ತು. ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ನಾನಾಡದ ಮಾತೆಲ್ಲವಾ ಕದ್ದಾಲಿಸು' ಅನ್ನುವ ಹಾಡು ರಿಲೀಸ್ ಆಗಿ ಗಮನ ಸೆಳೆದಿತ್ತು. ನಂತರ 'ದೇವ್ಲೆ ದೇವ್ಲೆ' ಅನ್ನುವ ಎಣ್ಣೆ ಸಾಂಗ್, ಈಗ ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಜೋಡಿಯ 'ನೀನು ಬಗೆಹರಿಯದ ಹಾಡು' ರಿಲೀಸ್ ಆಗಿ ಸದ್ದು ಮಾಡುತ್ತಿದೆ. 'ಗಾಳಿಪಟ- 2' ಆಲ್ಬಮ್ ಹಿಟ್ ಆಗಿದ್ದು, ಪ್ರೇಕ್ಷಕರು ಚಿತ್ರಕ್ಕಾಗಿ ಕಾಯುವಂತಾಗಿದೆ.

   'ಗಾಳಿಪಟ- 2' vs 'ರವಿ ಬೋಪಣ್ಣ' ಬಾಕ್ಸಾಫೀಸ್ ಕ್ಲ್ಯಾಶ್

  'ಗಾಳಿಪಟ- 2' vs 'ರವಿ ಬೋಪಣ್ಣ' ಬಾಕ್ಸಾಫೀಸ್ ಕ್ಲ್ಯಾಶ್

  ಆಗಸ್ಟ್ 12ಕ್ಕೆ ಯೋಗರಾಜ್ ಭಟ್‌ರ 'ಗಾಳಿಪಟ-2' ಜೊತೆಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಿರ್ದೇಶಿಸಿ ನಟಿಸಿರೋ 'ರವಿ ಬೋಪಣ್ಣ' ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಎರಡೂ ದೊಡ್ಡ ಸಿನಿಮಾಗಳು ಆಗಿರುವುದರಿಂದ ಸಹಜವಾಗಿಯೇ ಬಾಕ್ಸಾಫೀಸ್‌ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ.

   ಮುಂದಿನ ವಾರ 'ಗಾಳಿಪಟ- 2' ಟ್ರೈಲರ್

  ಮುಂದಿನ ವಾರ 'ಗಾಳಿಪಟ- 2' ಟ್ರೈಲರ್

  'ಗಾಳಿಪಟ- 2' ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಸದ್ಯ ಸಾಂಗ್ಸ್‌ ಮಾತ್ರ ರಿಲೀಸ್ ಆಗಿದ್ದು, ಸದ್ಯ ಗಣೇಶ್‌ ಪಾತ್ರ ಪರಿಚಯಿಸುವ ಟೀಸರ್‌ ರಿಲೀಸ್‌ಗೆ ವೇದಿಕೆ ಸಿದ್ಧವಾಗ್ತಿದೆ. ಆದರೆ ಟ್ರೈಲರ್ ರಿಲೀಸ್ ಯಾವಾಗ ಅನ್ನುವ ಅನುಮಾನ ಮೂಡುವುದು ಸಹಜ. ಸಿನಿಮಾ ರಿಲೀಸ್‌ಗೆ ಒಂದು ವಾರ ಬಾಕಿ ಇರುವಾಗ ಟ್ರೈಲರ್ ರಿಲೀಸ್ ಮಾಡಿ ಬಜ್ ಕ್ರಿಯೇಟ್ ಮಾಡುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.

  English summary
  Actor Upendra To Release The Ganesh Character Teaser Of Gaalipata 2 Movie. Know More.
  Monday, July 25, 2022, 21:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X