»   » ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ರಾಧಿಕಾ

ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ರಾಧಿಕಾ

By: ಜೀವನರಸಿಕ
Subscribe to Filmibeat Kannada

ಪೂಜಾಗಾಂಧಿ ದೂರದ ಉತ್ತರ ಪ್ರದೇಶದಲ್ಲಿ ಹುಟ್ಟಿ ಕನ್ನಡದಲ್ಲಿ ಮಳೆಹುಡುಗಿಯಾಗಿ ಕನ್ನಡಿಗರ ಮನೆಮಗಳಾದರು. ಆದರೆ ಪೂಜಾಗಾಂಧಿಯ ತಂಗಿ ರಾಧಿಕಾ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ರಾಧಿಕಾಗಾಂಧಿ ಎಲ್ಲಿ ಹೋದ್ರು ಅಂತ ಹುಡುಕ್ತಿದ್ದ ನಮಗೆ ರಾಧಿಕಾ ಗಾಂಧಿ ಇತ್ತೀಚೆಗೆ ಅಭಿನೇತ್ರಿ ಸಿನಿಮಾದಲ್ಲಿ ಸಿಕ್ಕಿದರು.

ಅಕ್ಕ ಪೂಜಾ ಗಾಂಧಿ ಅಭಿನೇತ್ರಿಯಾಗ್ತಿದ್ರೆ ತಂಗಿ ಮಾತ್ರ ಸಾಕಪ್ಪಾ ಸಾಕು ಅಭಿನಯದ ಸಹವಾಸ ನಾನು ಇಲ್ಲಿಗಂತೂ ಬರೋದಿಲ್ಲ ಅಂದ್ರು. ರಾಧಿಕಾ ಗಾಂಧಿ ಅನ್ನೋ ಹೆಸ್ರು ನಮ್ಗೆ ಗೊತ್ತಿಲ್ಲದ ಹಾಗೆ ಮರ್ತು ಹೋಗ್ತಾ ಇದೆ. ಆದ್ರೆ ಕನ್ನಡದಲ್ಲಿ ಅಕ್ಕ ಪೂಜಾ ಗಾಂಧಿಯ ಹಾದಿಯಲ್ಲೇ ಬೆಳೆದು ದೊಡ್ಡ ಹೀರೋಯಿನ್ ಆಗ್ತಾಳೆ ಅಂತ ಸ್ಯಾಂಡಲ್ವುಡ್ ಅಂದುಕೊಂಡಿತ್ತು.


ಆದ್ರೆ ರಾಧಿಕಾ ಗಾಂಧಿ ಮಾತ್ರ ಅಕ್ಕ ಅಭಿನೇತ್ರಿ ಅಗೋದನ್ನ ನೋಡ್ತೀನಿ ಆದ್ರೆ ನಾನು ಆಗಲ್ಲ ನಂಗ್ಯಾಕೋ ಈ ಫೀಲ್ಡ್ ಬೇಡ ಅಂತಿದ್ದಾರೆ. ಇತ್ತೀಚೆಗೆ ರಿಲೀಸಾದ ಹೊಸ 'ಪ್ರೇಮ ಪುರಾಣ' ಸಿನಿಮಾನೇ ರಾಧಿಕಾ ಗಾಂಧಿಯವರ ಕೊನೆಯ ಚಿತ್ರ.

ಅಕ್ಕಪಕ್ಕ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಮತ್ತು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಈ ಬ್ಯೂಟಿ ಈಗ ಬಾಂಬೆಯಲ್ಲಿ ಫ್ಯಾಷನ್ ಡಿಸೈನಿಂಗ್ ಸ್ಟಡಿ ಮುಗಿಸಿದ್ದಾರಂತೆ. ಅಕ್ಕನ ಸಿನಿಮಾದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಗಾಂಧಿ ಸಿನಿಮಾ ಬೇಡ ಅನ್ಕೊಂಡಿದ್ದಾರಂತೆ.

ಫ್ಯಾಷನ್ ಡಿಸೈನಿಂಗನ್ನೇ ಪ್ರೊಫೆಷನ್ ಮಾಡ್ಕೋತೀನಿ ಅಂತ ಮಾತನಾಡ್ತಾ ಮಾತನಾಡ್ತಾ ಮಾಯವಾದ ರಾಧಿಕಾ ಹೆಚ್ಚು ಮಾತಾಡೋದೇ ಇಲ್ಲ. ಸ್ವಲ್ಪ ದಪ್ಪ ಆಗಿದ್ದಾರೆ ಹಾಗಂತ ಮೊದ್ಲೇನೂ ಸ್ಲಿಮ್ ಇರ್ಲಿಲ್ಲ ಏನಿವೇ ಆಲ್ ದ ಬೆಸ್ಟ್ ರಾಧಿಕಾ ಗಾಂಧಿ.

English summary
Kannada actress Radhika Gandhi, who has acted in quite a few Kannada films including 'Akka Pakka', has decided to bid goodbye to films. Recently she has finished fashion design course.
Please Wait while comments are loading...