For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಶಹಬ್ಬಾಶ್‌ಗಿರಿ: ಕುಂತಲ್ಲೇ ಕುಣಿದಾಡಿದ ಕಿರಿಕ್ ಬೆಡಗಿ ರಶ್ಮಿಕಾ!

  |

  ಸ್ಯಾಂಡಲ್‌ವುಡ್ ಪದ್ಮಾವತಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಫೋಟೊ, ವೀಡಿಯೋ ಶೇರ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಮತ್ತೊಂದ್ಕಡೆ ಒಂದು ಕಾಲದ ಸ್ಯಾಂಡಲ್‌ವುಡ್ ಕ್ವೀನ್ ಮತ್ತೆ ಚಿತ್ರರಂಗದಲ್ಲಿ ರಾಜ್ಯಭಾರ ಮಾಡೋದು ಯಾವಾಗ ಅನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.

  ರಮ್ಯಾ ಸಿನಿಮಾಗಳಲ್ಲಿ ನಟಿಸಲಿ, ನಟಿಸದೇ ಇರಲಿ ಆಕೆಯ ಕ್ರೇಜ್ ಕಮ್ಮಿ ಆಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಒರ್ಮಾಕ್ಸ್ ಜೂನ್ ತಿಂಗಳ ಸಮೀಕ್ಷೆಯಲ್ಲಿ ಕನ್ನಡದ ಟಾಪ್​ 5 ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಮ್ಯಾ ಸ್ಥಾನ ಗಳಿಸಿದ್ದಾರೆ. ಪದ್ಮಾವತಿ 4ನೇ ಸ್ಥಾನ ಪಡೆದಿದ್ರೆ, 3ನೇ ಸ್ಥಾನದಲ್ಲಿ ರಾಧಿಕಾ ಪಂಡಿತ್, 2ನೇ ಸ್ಥಾನದಲ್ಲಿ ರಚಿತಾ ರಾಮ್ ಹಾಗೂ ಮೊದಲ ಸ್ಥಾನ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ. ಇದನ್ನು ನೋಡಿ ರಮ್ಯಾ ಅಭಿಮಾನಿಗಳು ಬೇಗ ಸಿನಿಮಾದಲ್ಲಿ ಅಭಿನಯಿಸಿ, ಅವತ್ತಿಗೂ ಇವತ್ತಿಗೂ ನೀವೇ ನಮ್ಮ ಫೇವರಿಟ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

  ನಟಿ ರಮ್ಯಾ 'ಡ್ರಾಮಾ ಕ್ವೀನ್'; ಹೀಗೆಂದು ಹೇಳಿದ್ದು ಯಾರು ಗೊತ್ತಾ?ನಟಿ ರಮ್ಯಾ 'ಡ್ರಾಮಾ ಕ್ವೀನ್'; ಹೀಗೆಂದು ಹೇಳಿದ್ದು ಯಾರು ಗೊತ್ತಾ?

  ಅಭಿಮಾನಿಗಳ ಪ್ರೀತಿ ಕಂಡು ಪ್ರತಿಕ್ರಿಯಿಸಿರುವ ನಟಿ ರಮ್ಯಾ '8 ವರ್ಷಗಳಿಂದ ನಾನು ಚಿತ್ರರಂಗದಿಂದ ದೂರ ಉಳಿದರೂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ರಚಿತಾ ರಾಮ್​, ಆಶಿಕಾ ರಂಗನಾಥ್​, ರಶ್ಮಿಕಾ ಮಂದಣ್ಣ, ರಾಧಿಕಾ ಪಂಡಿತ್​ ಜೊತೆ ಈ ಪಟ್ಟಿಯಲ್ಲಿ ನಾನು ಕೂಡ ಸ್ಥಾನ ಪಡೆದಿರುವುದಕ್ಕೆ ಸಂತಸವಾಗುತ್ತಿದೆ' ಪೋಸ್ಟ್ ಮಾಡಿದ್ದಾರೆ. ರಮ್ಯಾ ಮಾಡಿರೋ ಪೋಸ್ಟ್ ವೈರಲ್‌ ಆಗಿದ್ದು, ರಶ್ಮಿಕಾ ಮಂದಣ್ಣ ಕಾಮೆಂಟ್‌ ಮಾಡಿ ಪ್ರತಿಕ್ರಿಯಿಸಿದ್ದಾರೆ.

  ಪದ್ಮಾವತಿ ಪೋಸ್ಟ್‌ಗೆ ಕರಗಿದ ರಶ್ಮಿಕಾ!

  ರಶ್ಮಿಕಾ ಜೊತೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಕ್ಕೆ ಖುಷಿಯಾಗಿದೆ ಎಂದು ಮೋಹಕ ತಾರೆ ಹೇಳಿದ್ದೆ ತಡ ಖುಷಿಯಾದ ಕೊಡಗಿನ ಚೆಲುವೆ 'ಮೇಡಂ.. ನೀವು ಹೇಳುತ್ತಿರುವುದು ಬಹಳ ದೊಡ್ಡ ವಿಚಾರ.. ಮೊದಲನೆಯದಾಗಿ ನಾನು ಇಂಡಸ್ಟ್ರಿಯಲ್ಲಿರುವುದು ಅದೃಷ್ಟ. ಜೊತೆಗೆ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಆಭಾರಿಯಾಗಿದ್ದೇನೆ. ನನ್ನ ಪ್ರೀತಿ ಮತ್ತು ನನ್ನ ಪ್ರೀತಿಯನ್ನಷ್ಟೇ ನಿಮಗೆ ನೀಡುತ್ತೇನೆ' ಎಂದು ಬರೆದಿದ್ದಾರೆ. ಆ ಕಾಮೆಂಟ್‌ ಅನ್ನು ರೀಟ್ವೀಟ್ ಮಾಡಿರುವ ರಮ್ಯಾ "ಇದು ತುಂಬಾ ಖುಷಿ ಕೊಟ್ಟಿದೆ. ನಿಮಗೆ ಹೃದಯದಿಂದ ಪ್ರೀತಿಯನ್ನು ರವಾನಿಸುತ್ತಿದ್ದೇನೆ. ರಶ್ಮಿಖಾ ಮಂದಣ್ಣ ನಿಮಗೆ ಶುಭವಾಗಲಿ."

   ಶೀಘ್ರದಲ್ಲೇ ಚಿತ್ರರಂಗಕ್ಕೆ ರಮ್ಯಾ ವಾಪಸ್!

  ಶೀಘ್ರದಲ್ಲೇ ಚಿತ್ರರಂಗಕ್ಕೆ ರಮ್ಯಾ ವಾಪಸ್!

  ರಾಜಕೀಯರಂಗದಿಂದ ಅಂತರ ಕಾಯ್ದುಕೊಂಡಿರುವ ರಮ್ಯಾ ಶೀಘ್ರದಲ್ಲೇ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಚಿತ್ರರಂಗದೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿರುವ ಪದ್ಮಾವತಿ, ಇತ್ತೀಚೆಗೆ 'ಹೊಯ್ಸಳ' ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದರು. ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ ನಟನೆಯ ಈ ಸಿನಿಮಾ ಸೆಟ್‌ನಲ್ಲಿ ರಮ್ಯಾ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್‌ ಆಗಿತ್ತು.

   ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ರಮ್ಯಾ?

  ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ರಮ್ಯಾ?

  ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸದ್ದು ಮಾಡುತ್ತಿದೆ. ಸಾಲು ಸಾಲು ಸಿನಿಮಾಗಳನ್ನು ನಿರ್ಮಿಸುತ್ತಿರುವ ಸಂಸ್ಥೆ ರಮ್ಯಾ ಅವರನ್ನೂ ರೀಲಾಂಚ್ ಮಾಡುತ್ತೆ ಅನ್ನುವ ಗುಸುಗುಸು ಗಾಂಧಿನಗರದಲ್ಲಿ ಶುರುವಾಗಿದೆ. 'ಹೊಯ್ಸಳ' ಸಿನಿಮಾ ಸೆಟ್‌ಗೆ ರಮ್ಯಾ ಭೇಟಿ ನೀಡಿದ್ದು, ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.

   ಪಂಚ ಭಾಷೆ ತಾರೆಯಾಗಿ ರಶ್ಮಿಕಾ ಹವಾ

  ಪಂಚ ಭಾಷೆ ತಾರೆಯಾಗಿ ರಶ್ಮಿಕಾ ಹವಾ

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಪಂಚಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಈಗಾಗಲೇ ನಟಿಸಿ ಗೆದ್ದಿರುವ ಕಿರಿಕ್ ಬೆಡಗಿ ಬಾಲಿವುಡ್‌ನಲ್ಲಿ 'ಮಿಷನ್ ಮಜ್ನು', 'ಗುಡ್‌ಬೈ' ಸಿನಿಮಾಗಳ ಶೂಟಿಂಗ್ ಮುಗಿಸಿ 'ಅನಿಮಲ್' ಚಿತ್ರದಲ್ಲಿ ರಣ್‌ಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಮಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಡಲಿದ್ದಾರೆ.

  English summary
  Actress Ramya And Rashmika Mandanna Twitter Conversation Goes Viral. Know More.
  Wednesday, July 27, 2022, 18:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X