For Quick Alerts
  ALLOW NOTIFICATIONS  
  For Daily Alerts

  ಕನ್ನಡ ನಟಿ ರೇಖಾ ಸಾವಿನ ಸುದ್ದಿ ಸುಳ್ಳು: ರೇಖಾ ಎಲ್ಲಿದ್ದಾರೆ?

  By Bharath Kumar
  |

  ರಸ್ತೆ ಅಪಘಾತದಲ್ಲಿ ಕನ್ನಡ ನಟಿ ರೇಖಾ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಗಳು ಬೆಳಿಗ್ಗೆಯಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ರೆ, ಅಪಘಾತದಲ್ಲಿ ಸಾವುಗೀಡಾಗಿದ್ದು ಯಾವ ರೇಖಾ ಎಂಬುದು ಹಲವು ಗೊಂದಲಗಳನ್ನ ಉಂಟು ಮಾಡಿತ್ತು.

  ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ರೇಖಾ ಕುಮಾರಿ ಅವರೇ ಈ ಅಪಘಾತದಲ್ಲಿ ಮರಣ ಹೊಂದಿದ್ದಾರೆ ಎಂಬ ಅಂತೆ-ಕಂತೆಗಳು ಹರಿದಾಡಿದ್ವು. ಆದ್ರೆ, ಈ ಸುದ್ದಿ ಸುಳ್ಳು ಎಂದು ಸ್ವತಃ ರೇಖಾ ಕುಮಾರಿ ಅವರೇ ಖಚಿತ ಪಡಿಸಿದ್ದಾರೆ.[ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ ರೂಪದರ್ಶಿ ರೇಗಾ ಸಿಂಧು]

  ಹಾಗಾದ್ರೆ, ಅಪಘಾತಕ್ಕೆ ಒಳಗಾದ ರೇಖಾ ಯಾರು? ಚಿತ್ರ ನಟಿ ರೇಖಾ ಕುಮಾರಿ ಎಲ್ಲಿದ್ದಾರೆ ಎಂಬ ಮಾಹಿತಿ ಮುಂದೆ ಓದಿ.....

  ಅಪಘಾತವಾಗಿದ್ದು ರೇಖಾ ಕುಮಾರಿಗಲ್ಲ!

  ಅಪಘಾತವಾಗಿದ್ದು ರೇಖಾ ಕುಮಾರಿಗಲ್ಲ!

  ಚೆನ್ನೈನಲ್ಲಿ ರಸ್ತೆ ಅಪಘಾತವಾಗಿದ್ದು, ನಟಿ ರೇಖಾ ಕುಮಾರಿಗಲ್ಲ. ಅವರು ರೇಗಾ ಸಿಂಧು. ಮೂಲಗಳ ಪ್ರಕಾರ ರೇಗಾ ಸಿಂಧು ಅವರು ರೂಪದರ್ಶಿ ಆಗಿದ್ದಾರೆ.[ಕಾರು ಅಪಘಾತ: ಕನ್ನಡ ನಟಿ ರೇಗಾ ಸಿಂಧು ದುರ್ಮರಣ]

  ರೇಖಾ ಸಾವಿನ ಸುದ್ದಿ ವದಂತಿ!

  ರೇಖಾ ಸಾವಿನ ಸುದ್ದಿ ವದಂತಿ!

  ಕನ್ನಡ ನಟಿ ರೇಖಾ ಅವರ ಸಾವಿನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ಸ್ವತಃ ನಟಿ ರೇಖಾ ಕುಮಾರಿ ಅವರೇ ಸ್ವಷ್ಟಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.

  ಹಾಗಾದ್ರೆ ರೇಖಾ ಕುಮಾರಿ ಎಲ್ಲಿದ್ದಾರೆ?

  ಹಾಗಾದ್ರೆ ರೇಖಾ ಕುಮಾರಿ ಎಲ್ಲಿದ್ದಾರೆ?

  ಚಿತ್ರ ನಟಿ ರೇಖಾ ಕುಮಾರಿ ಅವರು ಶೃಂಗೇರಿಯ ಶಾರದ ಪೀಠ ದೇವಸ್ಥಾನದಲ್ಲಿದ್ದಾರೆ.[ನಟಿ ರೇಖಾ ಅವರು ಪೋಸ್ಟ್ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ]

  ಘಟನೆ ಬಗ್ಗೆ ಮಾಹಿತಿ

  ಘಟನೆ ಬಗ್ಗೆ ಮಾಹಿತಿ

  ವೆಲ್ಲೂರು ಪೊಲೀಸ್ ಮಾಹಿತಿಗಳ ಪ್ರಕಾರ, ಕಾರಿನಲ್ಲಿ ರೇಗಾ ಸಿಂಧು ಸೇರಿದಂತೆ ಒಟ್ಟು ಆರು ಜನ ಇದ್ದರು. ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ದುರಂತ ಸಂಭವಿಸಿದ ಸ್ಥಳದಲ್ಲಿಯೇ ರೇಗಾ ಸಿಂಧು ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನ ಆಸ್ಪತ್ರೆಗೆ ಸೇರಿಸಲಾಗಿದೆ.

  English summary
  Actress Rekha Krishnappa clarified the news around her death saying that she is alive and fine. Rekha posted a video on the social media and said that there were reports of her death but she is sound and is in Sharada Petta temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X