For Quick Alerts
  ALLOW NOTIFICATIONS  
  For Daily Alerts

  ಪ್ಲಾಸ್ಟಿಕ್ ಸರ್ಜರಿ ನಂತರ ಶ್ರುತಿ ಹಾಸನ್ ಮುಖ ಹೀಗಾಗಿದೆ ನೋಡಿ

  |

  ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಆದರೆ ದಕ್ಷಿಣ ಭಾರತದ ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದು ಬಹು ವಿರಳ ಆದರೆ ಕಮಲ್ ಹಾಸನ್ ಪುತ್ರಿ, ಖ್ಯಾತ ನಟಿ ಶ್ರುತಿ ಹಾಸನ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

  ಹಲವು ನಟಿಯರು ತಾವು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮುಖದ ಅಂದ ಹೆಚ್ಚಿಸಿಕೊಂಡಿದ್ದನ್ನು ಗುಟ್ಟಾಗಿದ್ದಾರೆ ಆದರೆ ಶ್ರುತಿ ಹಾಸನ್ ಹೀಗೆ ಮಾಡಿಲ್ಲ, ಬದಲಿಗೆ ಸರ್ಜರಿಗೆ ಮುನ್ನಾ ಮತ್ತು ಸರ್ಜರಿಯ ನಂತರ ತೆಗೆದ ತಮ್ಮ ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಸರ್ಜರಿ ಬಗ್ಗೆ ಉದ್ದದ ಪೋಸ್ಟ್ ಸಹ ಬರೆದುಕೊಂಡಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಶ್ರುತಿ ಹಾಸನ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ತಮ್ಮ ದಪ್ಪಗಾಗಿದ್ದ ಕೆನ್ನೆಯನ್ನು ತೆಳುವಾಗಿಸಿಕೊಂಡು ಮುಖವನ್ನು ತ್ರಿಭುಜಾಕಾರಕ್ಕೆ ವೈದ್ಯರಿಂದ ತಿದ್ದಿಸಿಕೊಂಡಿದ್ದಾರೆ.

  ಪ್ಲಾಸ್ಟಿಕ್ ಸರ್ಜರಿ ಮುಂಚೆ ಹೀಗಿದ್ದರು

  ಪ್ಲಾಸ್ಟಿಕ್ ಸರ್ಜರಿ ಮುಂಚೆ ಹೀಗಿದ್ದರು

  ಪ್ಲಾಸ್ಟಿಕ್ ಸರ್ಜರಿಗೆ ಮುನ್ನಾ ಶ್ರುತಿ ಹಾಸನ್ ಕೆನ್ನೆ ಸ್ವಲ್ಪ ಉಬ್ಬಿಂದಂತಿತ್ತು. ಅವರು ಸ್ವಲ್ಪವೂ ಆಗಿದ್ದರು. ಆದರೆ ಸರ್ಜರಿ ನಂತರ ಶ್ರುತಿ ಸಪೂರವಾದಂತೆ ಕಾಣುತ್ತಿದ್ದಾರೆ. ತಮ್ಮ ದೇಹದ ಬಗ್ಗೆ ಪದೇ-ಪದೇ ಕಮೆಂಟ್ ಮಾಡುತ್ತಿದ್ದವರಿಗಾಗಿಯೇ ಅವರು ತಮ್ಮ ಬಿಫೋರ್-ಆಫ್ಟರ್ ಚಿತ್ರಗಳನ್ನು ಪ್ರಕಟಿಸಿದ್ದಾರೆ.

  ಈಗ ಹೀಗಾಗಿದ್ದಾರೆ ಶ್ರುತಿ ಹಾಸನ್

  ಈಗ ಹೀಗಾಗಿದ್ದಾರೆ ಶ್ರುತಿ ಹಾಸನ್

  ಸರ್ಜರಿ ನಂತರ 34 ವರ್ಷದ ಶ್ರುತಿ ಹಾಸನ್ ಸಣ್ಣ ವಯಸ್ಸಿನ ನಟಿಯಂತೆ ಕಾಣುತ್ತಿದ್ದಾರೆ. ಅವರ ಮುಖ ಮುಂಚಿಗಿಂತಲೂ ಸಣ್ಣದಾಗಿ, ಸುಂದರವಾಗಿ ಕಾಣುತ್ತಿದೆ. 'ಇದು ನನ್ನ ದೇಹ, ನನ್ನ ದೇಹದ ಮೇಲೆ ನನಗೆ ಪ್ರೀತಿ ಇದೆ, ಸರ್ಜರಿ ಮಾಡಿಸಿಕೊಳ್ಳುವುದು, ಮಾಡಿಸಿಕೊಳ್ಳದೇ ಇರುವುದು ನನ್ನ ಆಯ್ಕೆ' ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

  ಎರಡನೇ ಬಾರಿ ಸರ್ಜರಿ ಮಾಡಿಸಿಕೊಂಡರೇ ಶ್ರುತಿ ಹಾಸನ್?

  ಎರಡನೇ ಬಾರಿ ಸರ್ಜರಿ ಮಾಡಿಸಿಕೊಂಡರೇ ಶ್ರುತಿ ಹಾಸನ್?

  ಶ್ರುತಿ ಹಾಸನ್ ಎರಡನೇಯ ಬಾರಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆಯೇ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರವನ್ನು ಇತ್ತೀಚೆಗೆ ತೆಗೆದಿರಬಹುದು ಆದರೆ ಈ ಮೊದಲು ಸಹ ಅವರೊಮ್ಮೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು ಎನ್ನಲಾಗುತ್ತಿದೆ.

  ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡವರಲ್ಲಿ ಶ್ರುತಿ ಮೊದಲಿಗರಲ್ಲ

  ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡವರಲ್ಲಿ ಶ್ರುತಿ ಮೊದಲಿಗರಲ್ಲ

  ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟೀಮಣಿಯರಲ್ಲಿ ಶ್ರುತಿ ಹಾಸನ್ ಮೊದಲಿಗರೇನಲ್ಲ. ಬಾಲಿವುಡ್ ಸಾಲು-ಸಾಲು ನಟಿಯರು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಕೆಲವು ನಟರೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

  English summary
  Actress Shruti Haasan gone under plastic surgery and posted before surgery and after surgery photo of her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X