For Quick Alerts
  ALLOW NOTIFICATIONS  
  For Daily Alerts

  ನನಗೆ ಬಾಡಿಗೆ ಮನೆ ಕೊಡಲಿಲ್ಲ: ನೋವು ಹಂಚಿಕೊಂಡ ಸ್ಟಾರ್ ನಟಿ

  |

  ಬೋಲ್ಡ್ ಮತ್ತು ಕಾನ್ಫಿಡೆಂಟ್ ವ್ಯಕ್ತಿತ್ವ ಮೂಲಕ ಸಿನಿ ಜಗತ್ತಿನ ಗಮನ ಸೆಳೆದಿರುವ ನಟಿ ತಾಪ್ಸಿ ಪನ್ನು ಈಗ ಬಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಒಂದು ಸಮಯದಲ್ಲಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ತಾಪ್ಸಿ ನಟಿಸುತ್ತಿದ್ದರು. ಆದ್ರೀಗ, ಸೌತ್ ಇಂಡಸ್ಟ್ರಿಗಿಂತ ಹೆಚ್ಚು ಬಿಟೌನ್ ಕಡೆ ಮುಖ ಮಾಡಿದ್ದಾರೆ.

  ಬೇಬಿ, ಪಿಂಕ್, ಬದ್ಲಾ, ನಾಮ್ ಶಬಾನಾ ಅಂತಹ ವಿಭಿನ್ನ ಪಾತ್ರಗಳ ಮೂಲಕ ಬಿಟೌನ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಬ್ಯಾಗ್ರೌಂಡ್ ನಲ್ಲಿ ಯಾರೂ ಇಲ್ಲದೆ ಒಬ್ಬಂಟಿಯಾಗಿ ಇಂಡಸ್ಟ್ರಿಗೆ ಬಂದ ತಾಪ್ಸಿ ಆರಂಭದಲ್ಲಿ ಬಹಳ ಕಷ್ಟದ ಸಂದರ್ಭಗಳನ್ನ ನೋಡಿದ್ದಾರೆ.

  ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಟ್ರೋಲ್ ಆದ 'ಕೆಜಿಎಫ್' ನಟಿ

  ಈ ಬಗ್ಗೆ ಮಾತನಾಡುತ್ತಾ ''ಜನರು ನಮ್ಮನ್ನ ನೋಡಲು 500 ರೂಪಾಯಿ ನೀಡಿ ಚಿತ್ರಮಂದಿರಕ್ಕೆ ಬರ್ತಾರೆ, ಕಾರ್ಯಕ್ರಮಗಳಿಗೆ ಬರ್ತಾರೆ. ಆದರೆ ನಾವು ಅವರ ಮಧ್ಯೆ ಜೀವನ ಮಾಡ್ತೀವಿ ಅಂದ್ರೆ ಮಾತ್ರ ಒಪ್ಪುವುದಿಲ್ಲ. ನಮ್ಮನ್ನು ಅವರು ನೋಡುವ ದೃಷ್ಠಿಯೇ ಬೇರೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಮೂಲತಃ ಉತ್ತರ ಭಾರತದ ಹುಡುಗಿಯಾಗಿದ್ದ ತಾಪ್ಸಿ ಆರಂಭದಲ್ಲಿ ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ನಟಿಸಿದರು. ಆಗ ಎಲ್ಲವೂ ಕೂಲ್ ಆಗಿಯೇ ಇತ್ತು. ಆದರೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಸಲುವಾಗಿ ಮುಂಬೈಗೆ ಹೋದಾಗ ವಾಸ ಮಾಡಲು ಮನೆ ಬಾಡಿಗೆಗೆ ನೀಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.

  ''ದೆಹಲಿ ಮತ್ತು ಹೈದ್ರಾಬಾದ್ ಎರಡೂ ಒಂದೇ ರೀತಿ ಸ್ಥಳ. ಆದರೆ ಮುಂಬೈ ಆಗಲ್ಲ. ಹೆಚ್ಚು ಜನರು ಇರುವ ಸ್ಥಳ. ನಾನು ಒಂಟಿಯಾಗಿದ್ದ ಕಾರಣ ಯಾರೊಬ್ಬರರು ನನಗೆ ಮನೆ ಬಾಡಿಗೆ ಕೊಡಲಿಲ್ಲ. ಈಗ ಸ್ವಂತ ಮನೆ ಇದೆ. ಸಹೋದರಿ ಜೊತೆ ಖುಷಿಯಾಗಿದ್ದೇನೆ. ತಂದೆ-ತಾಯಿ ದೆಹಲಿಯಲ್ಲಿದ್ದಾರೆ'' ಎಂದು ಹಳೆ ದಿನಗಳನ್ನ ನೆನಪಿಸಿಕೊಂಡರು.

  ಸದ್ಯ ತಾಪ್ಸಿ ಅವರು ಹಿಂದಿ ಸಿನಿಮಾ ತಡ್ಕಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಯಲ್ಲಿ ಗೇಮ್ ಓವರ್, ಮಿಷನ್ ಮಂಗಲ್, ಸಾಂದ್ ಕಿ ಆಂಖ್ ಸಿನಿಮಾಗಳಲಿಯೂ ಅಭಿನಯಿಸುತ್ತಿದ್ದಾರೆ.

  English summary
  Actress taapsee shares her struggle days. no one did gives to rent an apartment to her, when she moved to mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X