For Quick Alerts
  ALLOW NOTIFICATIONS  
  For Daily Alerts

  ನಟ ಅಜಯ್ ರಾವ್ ಪ್ರೇಮ ಕಥೆಗೆ ಮಂಜು ಸ್ವರಾಜ್ ಸಾಥ್!

  |

  'ಲವ್ ಯು ರಚ್ಚು' ಸಿನಿಮಾದ ನಂತರ ನಟ ಅಜಯ್ ರಾವ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಲವ್ ಯು ರಚ್ಚು ಸಿನಿಮಾದ ಮೂಲಕ ಅಜಯ್ ರಾವ್‌ ಅವರು ವಿಭಿನ್ನ ಪಾತ್ರ ಪ್ರಯೋಗ ಮಾಡಿದ್ದರು. ಕೊಂಚ ಸಟಲ್‌ ಆಗಿ ನಟನೆ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಇಷ್ಟ ಆಗಿದ್ದರು.

  ಆದರೆ ಲವ್‌ ಯು ರಚ್ಚು ಸಿನಿಮಾ ಅಂದು ಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಹಾಗಾಗಿ ಅಜಯ್ ರಾವ್‌ ಅವರ ಮುಂದಿನ ಸಿನಿಮಾ ಯಾವಾಗ ಎನ್ನುವ ಪ್ರಶ್ನೆಗೆ ಅವರ ಅಭಿಮಾನಿಗಳಲ್ಲಿ ಕಾಡುತ್ತಾ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಅಜಯ್ ರಾವ್‌ ಅವರ ಮುಂದಿನ ಸಿನಿಮಾ ಪ್ರಕಟ ಆಗಿದೆ.

  'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಅವರು, ಅಜಯ್ ಅವರ ಮುಂದಿನ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲೂ ಕೂಡ ಅಜಯ್ ರಾವ್‌ ಅವರು ಲವ್ವರ್ ಬಾಯ್‌ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

  ಮತ್ತೊಂದು ಲವ್ ಸ್ಟೋರಿಯಲ್ಲಿ ಅಜಯ್ ರಾವ್!

  ಮತ್ತೊಂದು ಲವ್ ಸ್ಟೋರಿಯಲ್ಲಿ ಅಜಯ್ ರಾವ್!

  ನಟ ಅಜಯ್ ರಾವ್‌ ಅವರು ಹೆಚ್ಚಾಗಿ ಲವ್‌ ಸ್ಟೋರಿ ಸಿನಿಮಾಗಳಲ್ಲಿಯೇ ಅಭಿನಯಿಸಿದ್ದಾರೆ. ಅವರ ಅಭಿಮಾನಿಗಳಿ ಕೂಡ ಅವರನ್ನು ಲವ್‌ ಸಿನಿಮಾಗಳಲ್ಲಿ ನೋಡಲು ಬಯಸುತ್ತಾರೆ. ಹಾಗಾಗಿ ಅಜಯ್ ರಾವ್‌ ಅವರು ಸಾಲು ಸಾಲಾಗಿ ಲವ್‌ ಸ್ಟೋರಿ ಇರುವ ಸಿನಿಮಾಗಳನ್ನೇ ಮಾಡುತ್ತಾರೆ. ಈಗ ಮತ್ತೊಂದು ಹೊಸ ಸಿನಿಮಾ ಮಾಡಲು ಮುಂದಾಗಿದ್ದು ಈ ಚಿತ್ರ ಕೂಡ ವಿಶಿಷ್ಟ ಪ್ರೇಮಕಥೆಯನ್ನು ಒಳಗೊಂಡಿರಲಿದೆಯಂತೆ.

  ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜಯ್ ರಾವ್!

  ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜಯ್ ರಾವ್!

  ನಿರ್ದೇಶಕ ಮಂಜು ಸ್ವರಾಜ್‌ ಈಗಾಗಲೇ ಕೆಲವು ಹಿಟ್‌ ಚಿತ್ರಗಳನ್ನು ಕೊಟ್ಟಿದ್ದಾರೆ. ಶ್ರಾವಣಿ ಸುಬ್ರಹ್ಮಣ್ಯ, ಶ್ರೀಕಂಠ, ಪಟಾಕಿ, ಮನೆ ಮಾರಾಟಕ್ಕಿದೆ ಚಿತ್ರಗಳೂ ನಿರ್ದೇಶಕ ಮಂಜು ಸ್ವರಾಜ್ ಅವರ ಸಿನಿಮಾ ಜರ್ನಿಯಲ್ಲಿ ಹಿಟ್ ಲಿಸ್ಟ್‌ ಸೇರಿರುವ ಚಿತ್ರಗಳು. ಈಗ ಎರಡು ವರ್ಷಗಳ ಬಳಿಕ ಮತ್ತೆ ಮಂಜು ಸ್ವರಾಜ್‌ ನಿರ್ದೇಶನಕ್ಕಿಳಿದಿದ್ದಾರೆ. ವಿಶಿಷ್ಟವಾದ ಪ್ರೇಮ ಕಥೆಯೊಂದಿಗೆ, ಅಜಯ್ ರಾವ್‌ ಜೊತೆಗೆ ಕೈ ಜೋಡಿಸಿದ್ದಾರೆ.

  ಅಯವ್‌ ರಾವ್‌ಗಾಗಿ ನಾಯಕಿಯ ಹುಡುಕಾಟ ಶುರು!

  ಅಯವ್‌ ರಾವ್‌ಗಾಗಿ ನಾಯಕಿಯ ಹುಡುಕಾಟ ಶುರು!

  ನಟ ಅಜಯ್ ರಾವ್ ಸಿನಿಮಾ ಕತೆಯನ್ನು ಕೇಳಿ ಸದ್ಯಕ್ಕೆ ಓಕೆ ಮಾಡಿದ್ದಾರೆ. ಆದರೆ ಚಿತ್ರದ ನಾಯಕಿಯ ಹುಡುಕಾಟದಲ್ಲಿದೆ ಚಿತ್ರ ತಂಡ. ಜೊತೆಗೆ ಇನ್ನೂ ಬೇರೆ ಪಾತ್ರಗಳಿಗೆ ಕಲಾವಿದರ ಆಯ್ಕೆ ಅಂತಿಮ ಆಗಿಲ್ಲ. ಸದ್ಯ ಚಿತ್ರ ತಂಡ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಸ್ಕ್ರಿಪ್ಟ್ ಕೆಲಸ ಸಂಪೂರ್ಣವಾಗಿ ಮುಗಿದ ಮೇಲೆ, ಶೂಟಿಂಗ್ ದಿನಾಂಕವನ್ನು ಚಿತ್ರ ತಂಡ ಪ್ರಕಟ ಮಾಡಲಿದೆ.

  ಕುತೂಹಲ ಮೂಡಿಸಿದ ಅಜಯ್ ರಾವ್ ಮುಂದಿನ ಲವ್ ಸ್ಟೋರಿ!

  ಕುತೂಹಲ ಮೂಡಿಸಿದ ಅಜಯ್ ರಾವ್ ಮುಂದಿನ ಲವ್ ಸ್ಟೋರಿ!

  ಇದಕ್ಕೂ ಮುನ್ನ ನಟ ಅಜಯ್ ರಾವ್‌ ಅಭಿನಯದ 'ಲವ್‌ ಯು ರಚ್ಚು' ಚಿತ್ರ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ರಚ್ಚು ಪ್ರೇಮ್ ಕಹಾನಿ ಹಲವರಿಗೆ ಇಷ್ಟ ಆಗಿತ್ತು. ಈಗ ಅಜಯ್‌ ರಾವ್ ಮುಂದಿನ ಲವ್‌ ಕಹಾನಿ ಹೇಗೆ ಇರಲಿದೆ ಎನ್ನುವ ಬಗ್ಗೆ ಕುತೂಹಲಗಳು ಮೂಡಿವೆ. ಸದ್ಯದಲ್ಲಿಯೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದೆ.

  English summary
  After Love You Racchu Ajay Rao Choose Another Love Story: Manju Swaraj Is The Director
  Wednesday, January 19, 2022, 15:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X