»   » 'ಅಮರ್' ಅಂತ್ಯಕ್ರಿಯೆಯಲ್ಲಿ ಕಣ್ಣೀರು ಹಾಕಿದ 'ಅಕ್ಬರ್', 'ಅಂತೋನಿ'!

'ಅಮರ್' ಅಂತ್ಯಕ್ರಿಯೆಯಲ್ಲಿ ಕಣ್ಣೀರು ಹಾಕಿದ 'ಅಕ್ಬರ್', 'ಅಂತೋನಿ'!

Posted By:
Subscribe to Filmibeat Kannada

ಮುಂಬೈ, ಏಪ್ರಿಲ್ 28: ಗುರುವಾರ ನಿಧನರಾದ ಬಾಲಿವುಡ್ ನ ಹಿರಿಯ ನಟ ವಿನೋದ್ ಖನ್ನಾ ಅವರ ಅಂತ್ಯಕ್ರಿಯೆಯು ಅಂದೇ ಸಂಜೆ ಮುಂಬೈನಲ್ಲಿ ನೆರವೇರಿತು.

ಈ ಅಂತ್ಯಕ್ರಿಯೆಗೆ ಜನಪ್ರಿಯ ಹಿರಿಯ ನಟರ ಪೈಕಿ ಅಮಿತಾಭ್ ಬಚ್ಚನ್ ಹಾಗೂ ರಿಷಿ ಕಪೂರ್ ಬಿಟ್ಟರೆ ಮಿಕ್ಕವರಾರೂ ಅಲ್ಲಿ ಕಾಣಲಿಲ್ಲ. ಇನ್ನು ಅವರ ನಂತರದ ತಲೆಮಾರಿನ ನಾಯಕ ನಟರಲ್ಲಿ ಜಾಕಿಶ್ರಾಫ್, ಚುಂಕಿ ಪಾಂಡೆ ಬಂದಿದ್ದರು. ಇನ್ನು, ಇತ್ತೀಚೆಗಿನ ನಟರಲ್ಲಿ ಅಭಿಷೇಕ್ ಬಚ್ಚನ್, ರಣದೀಪ್ ಹೂಡಾ ಬಂದಿದ್ದರು.

Akbar, Anthony present at Amar's funeral

ಇವರಲ್ಲಿ ಗಮನ ಸೆಳೆದಿದ್ದು ರಿಷಿ ಕಪೂರ್ ಹಾಗೂ ಅಮಿತಾಭ್ ಬಚ್ಚನ್. ಈ ಮೂವರು ಒಟ್ಟಿಗೇ ಅಭಿನಯಿಸಿದ್ದ ಅಮರ್ ಅಕ್ಬರ್ ಅಂತೋನಿ ಚಿತ್ರವನ್ನು ಯಾರು ಮರೆಯಲು ಸಾಧ್ಯ?[ವಿನೋದ್ ಖನ್ನಾ ಅಗಲಿಕೆಗೆ ಕಂಬಿನಿ ಮಿಡಿದ ಬಾಲಿವುಡ್ ಮತ್ತು ಕ್ರಿಕೆಟಿಗರು]

ಆ ಸೂಪರ್ ಹಿಟ್ ಚಿತ್ರದ ಒಂದು ನೆನಪು ಈ ಹೊತ್ತಿನಲ್ಲಿ...

ನೆನಪಿನಂಗಳದಲ್ಲಿ ಹಿರಿಯರು

ನೋದ್ ಖನ್ನಾ, ರಿಷಿ ಕಪೂರ್ ಹಾಗೂ ಅಮಿತಾಭ್ ಬಚ್ಚನ್ - ಈ ಮೂವರೂ 1977ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಚಲನಚಿತ್ರ 'ಅಮರ್, ಅಕ್ಬರ್, ಅಂತೋನಿ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಮನಮೋಹನ್ ದೇಸಾಯಿ ಈ ಚಿತ್ರದ ನಿರ್ದೇಶಕರು.[ಬಾಲಿವುಡ್ ಮೇರು ನಟ ವಿನೋದ್ ಖನ್ನಾ ಹೆಜ್ಜೆ ಗುರುತು]

ಮರೆಯಲಾಗದ ಹಾಡುಗಳು

ಈ ಚಿತ್ರದಲ್ಲಿ ವಿನೋದ್ ಖನ್ನಾ 'ಅಮರ್' ಪಾತ್ರ ಮಾಡಿದ್ದರೆ, ರಿಷಿ ಕಪೂರ್ 'ಅಕ್ಬರ್' ಹಾಗೂ ಅಮಿತಾಭ್ 'ಅಂತೋನಿ' ಪಾತ್ರ ನಿರ್ವಹಿಸಿದ್ದರು.

ಈ ಚಿತ್ರದ 'ಅಮರ್... ಅಕ್ಬರ್... ಆಂತೋನಿ...' ಹಾಗೂ 'ಮೈ ನೇಮ್ ಈಸ್ ಅಂತೋನಿ ಗುನ್ಸಾಲ್ವೆಸ್' ಹಾಡುಗಳು ಇಂದಿಗೂ ಹಿಂದಿ ಚಿತ್ರಗೀತೆ ಪ್ರೇಮಿಗಳಿಗೆ ಅಚ್ಚುಮೆಚ್ಚು.

ತಮಿಳು, ತೆಲುಗು, ಮಲಯಾಳಂನಲ್ಲೂ ಚಿತ್ರ

ಧಾರ್ಮಿಕ ಸಹಿಷ್ಣುತೆಯ ಪ್ರತೀಕವಾಗಿದ್ದ ಈ ಚಿತ್ರ ಅಂದಿನ ಮಟ್ಟಿಗೆ ಬಾಲಿವುಡ್ ನಲ್ಲಿ ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತಲ್ಲದೆ, ಬಾಲಿವುಡ್ ಮಾದರಿಯ ಹೊಸ ರೀತಿಯ ಮಸಾಲೆ ಚಿತ್ರಗಳಿಗೆ ನಾಂದಿ ಹಾಡಿತು. ಅಲ್ಲದೆ, ಅನೇಕ ಭಾಷೆಗಳಿಗೆ ರೀಮೇಕ್ ಆಯಿತು. ತಮಿಳಿನಲ್ಲಿ 'ಶಂಕರ್ ಸಲೀಂ ಸೈಮನ್' (1978), ತೆಲುಗಿನಲ್ಲಿ 'ರಾಮ್ ರಾಬರ್ಟ್ ರಹೀಂ' (1980) ಹಾಗೂ ಮಲಯಾಳಂನಲ್ಲಿ 'ಜಾನ್ ಜಾಫರ್ ಜನಾರ್ಧನ್' (1982)

ಕಥೆ ಮಾತ್ರ ಬೇರೆ ಬೇರೆ

ಅಷ್ಟೇ ಅಲ್ಲ, ದಶಕಗಳೇ ಉರುಳಿದರೂ, ಆ ಚಿತ್ರದ ಟೈಟಲ್ ಇಟ್ಟುಕೊಂಡು ಕೆಲವು ಚಿತ್ರಗಳು ಬಂದವು. 1998ರಲ್ಲಿ ಕನ್ನಡದಲ್ಲಿ ಥ್ರಿಲ್ಲರ್ ಮಂಜು ಅವರ ಅಭಿನಯದಲ್ಲಿ , 2015ರಲ್ಲಿ ಮಲಯಾಳಂನಲ್ಲಿ ಇದೇ ಹೆಸರಿನ ಚಿತ್ರಗಳು ಬಂದವು. ಆದರೆ, ಇವುಗಳ ಕಥೆ ಬೇರೆಯದ್ದೇ ಆಗಿದ್ದವು.

ನೆನಪುಗಳು ಕಣ್ಣೀರಾದಾಗ

ಆ ಚಿತ್ರವೂ ಈ ಮೂವರ ವೃತ್ತಿಜೀವನದಲ್ಲಿ ಒಂದು ಮರೆಯಲಾಗದ ಚಿತ್ರವಾಗಿ ನಿಂತಿದೆ. ಬಹುಶಃ ಅದನ್ನು ನೆನೆಯುತ್ತಲೋ ಏನೋ, ಅಮಿತಾಭ್ ಹಾಗೂ ರಿಷಿ ಕಪೂರ್ ಕಣ್ಣಾಲಿಗಳು ತೇವವಾಗಿದ್ದವು.

English summary
Mr Bachchan and Mr Kapoor were among the mourners at Vinod Khanna's funeral, as well as Jackie Shroff, Mr Bachchan's son Abhishek, Chunky Pandey and Randeep Hooda. Mr Khanna, 70, died after a battle with cancer of the bladder on April 27, 2017. 'ಅಮರ್' ಅಂತ್ಯಕ್ರಿಯೆಯಲ್ಲಿ 'ಅಕ್ಬರ್', 'ಅಂತೋನಿ'!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada