Don't Miss!
- Sports
Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Automobiles
ಭಾರತದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್
- News
Breaking; ಪದ್ಮವಿಭೂಷಣ ಎಸ್ಎಂ ಕೃಷ್ಣ ಸನ್ಮಾನಿಸಿದ ಮುಖ್ಯಮಂತ್ರಿಗಳು
- Lifestyle
Horoscope Today 27 Jan 2023: ಶುಕ್ರವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ಅಕುಲ್, ಸಂತೋಷ್ ಗೆ ಆರೋಪಿ ವೈಭವ್ ಜೊತೆಗಿರುವ ನಂಟು ಎಂಥಹುದು?
ಡ್ರಗ್ಸ್ ಜಾಲದೊಂದಿಗೆ ನಂಟು ಪ್ರಕರಣದಲ್ಲಿ ನಟ ಅಕುಲ್ ಬಾಲಾಜಿ, ಸಂತೋಶ್ ಅವರುಗಳನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ.
ನಿನ್ನೆ ನಟ ಅಕುಲ್, ಸಂತೋಶ್ ಹಾಗೂ ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಗೆ ಸಿಸಿಬಿ ನೊಟೀಸ್ ನೀಡುತ್ತು. ಅಂತೆಯೇ ಅಕುಲ್ ಮತ್ತು ಸಂತೋಷ್ ಇಂದು ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಹೈದರಾಬಾದ್‌ನಲ್ಲಿದ್ದ ಅಕುಲ್ ಬಾಲಾಜಿ, ಇಂದು ಬೆಳಿಗ್ಗೆ ವಿಚಾರಣೆಗೆ ಹಾಜರಾಗಿದ್ದಾರೆ. ನಟ ಸಂತೋಷ್ ಹಾಗೂ ಯುವರಾಜ್ ಸಹ ವಿಚಾರಣೆ ಎದುರಿಸುತ್ತಿದ್ದಾರೆ. ವಿಚಾರಣೆಗೆ ತೆರಳುವ ಮುನ್ನಾ ಇಬ್ಬರೂ ನಟರು ಮಾಧ್ಯಮಗಳಿಗೆ ಅಭಿಪ್ರಾಯ ತಿಳಿಸಿದ್ದಾರೆ.

ವೈಭವ್ ಜೊತೆಗೆ ಹಾಯ್-ಬಾಯ್ ಸ್ನೇಹವಷ್ಟೆ: ಅಕುಲ್
ಆರೋಪಿ ವೈಭವ್ ಜೈನ್ ಜೊತೆಗೆ ಕೇವಲ ಹಾಯ್, ಬಾಯ್ ಸ್ನೇಹವನ್ನು ಹೊಂದಿದ್ದೇನೆ. ಸಿಸಿಬಿ ಬಗ್ಗೆ ಗೌರವವಿದೆ, ಅವರು ಏನು ಪ್ರಶ್ನೆ ಕೇಳುತ್ತಾರೋ ಅದಕ್ಕೆಲ್ಲಾ ಉತ್ತರ ಕೊಡುತ್ತೇನೆ. ತಪ್ಪು ಮಾಡಿಲ್ಲ ಹಾಗಾಗಿ ಯಾವುದಕ್ಕೂ ಸಹ ಹೆದರುವುದಿಲ್ಲ ಎಂದಿದ್ದಾರೆ ಅಕುಲ್.

ನನ್ನ ವಿಲ್ಲಾವನ್ನು ವೈಭವ್ ನೋಡಿಕೊಳ್ಳುತ್ತಿದ್ದ: ಸಂತೋಷ್
ಇನ್ನು ನಟ ಸಂತೋಷ್ ಮಾತನಾಡಿ, ಯಲಹಂಕದ ಜೆಡಿ ಗಾರ್ಡನ್ ಬಳಿ ನನ್ನದೊಂದು ವಿಲ್ಲಾ ಇತ್ತು ಅದರ ಉಸ್ತುವಾರಿಯನ್ನು ವೈಭವ್ ಜೈನ್ ನೋಡಿಕೊಳ್ಳುತ್ತಿದ್ದ. ನಾನು ಎಲೈಟ್ ಹಾಸ್ಪಿಟಾಲಿಟಿ ಎಂಬ ಸಂಸ್ಥೆ ನಡೆಸುತ್ತಿದ್ದ ಕಾರಣ ವೈಭವ್ ಜೈನ್ ಗೆ ಉಸ್ತುವಾರಿ ವಹಿಸಿದ್ದೆ. ನಂತರ ನಾನು ವಿಲ್ಲಾವನ್ನು ಮಾರಿದೆ ಎಂದಿದ್ದಾರೆ ಸಂತೋಷ್.

ಅನುಮಾನದಿಂದ ಸಿಸಿಬಿ ನೊಟೀಸ್ ನೀಡಿರಬಹುದು: ಸಂತೋಷ್
ನನ್ನ ಸಂಸ್ಥೆಯೊಂದಿಗೆ ವೈಭವ್ ಜೈನ್ ಗೆ ಸಂಬಂಧ ಇದೆ ಎಂಬ ಅನುಮಾನದಲ್ಲಿ ಸಿಸಿಬಿ ಯವರು ನನ್ನನ್ನು ವಿಚಾರಣೆಗೆ ಕರೆದಿರುವ ಸಾಧ್ಯತೆ ಇದೆ. ನಾನು ಡ್ರಗ್ ಪೆಡ್ಲರ್ ಅಲ್ಲ, ಡ್ರಗ್ ವ್ಯಸನಿಯೂ ಅಲ್ಲ, ಸಿಸಿಬಿ ಕೇಳಿದ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರಗಳನ್ನು ಕೊಡುತ್ತೇನೆ ಎಂದಿದ್ದಾರೆ ಸಂತೋಷ್.
Recommended Video

ಐಂದ್ರಿತಾ-ದಿಗಂತ್ ಕೊಟ್ಟ ಮಾಹಿತಿ?
ನಟ ಸಂತೋಶ್ ಆರ್ಯನ್ ಗೆ ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್, ಅಕುಲ್ ಬಾಲಾಜಿಗೆ ಅಂಜುಮಾಲಾ ಹಾಗೂ ಮಲ್ಲೇಶ್ ಬೋಳೆತ್ತಿನ್, ಯುವರಾಜ್ ಗೆ ಪ್ರಶಾಂತ್ ಪ್ರಶ್ನೆಗಳನ್ನು ಕೇಳಿದ್ದಾರೆ. ದಿಗಂತ್ ಹಾಗೂ ಐಂದ್ರಿತಾ ಕೊಟ್ಟ ಮಾಹಿತಿಯಿಂದ ಇವರುಗಳನ್ನು ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗುತ್ತಿದೆ.