For Quick Alerts
  ALLOW NOTIFICATIONS  
  For Daily Alerts

  ಅಂಬಿ ಇಲ್ಲದ ವಿವಾಹ ವಾರ್ಷಿಕೋತ್ಸವ : ಚೂರಾಗಿದೆ ಸುಮಲತಾ ಹೃದಯ

  |
  ಅಂಬರೀಶ್ ಸುಮಲತಾ 28ನೇ ಮದುವೆ ವಾರ್ಷಿಕೋತ್ಸವ | ಸುಮಾ ಮನದಾಳದ ಮಾತುಗಳಿವು

  ನಟ ಅಂಬರೀಶ್ ಅಗಲಿ 14 ದಿನ ಕಳೆದಿದೆ. ಆದರೆ, ಈ ದಿನ ಅಂಬರೀಶ್ ಇದ್ದಿದ್ದರೆ ಅದೆಷ್ಟೂ ಖುಷಿ ಪಡುತ್ತಿದ್ದರೋ. ಅಂಬಿ ಮಾತ್ರವಲ್ಲ ಇಡೀ ಕುಟುಂಬ ಈ ದಿನ ಸಂತೋಷದಲ್ಲಿ ಇರುತ್ತಿತ್ತು.

  ಡಿಸೆಂಬರ್ 8, ಅಂಬರೀಶ್ ಮತ್ತು ಸುಮಲತಾ ದಂಪತಿ ಮದುವೆಯಾದ ದಿನ. ಈ ದಿನವನ್ನು ಕಳೆದ 27 ವರ್ಷಗಳಿಂದ ಅಂಬರೀಶ್ ಆಚರಿಸಿಕೊಂಡು ಬರುತ್ತಿದ್ದರು. ಅದೇನೇ ಕೆಲಸ ಇದ್ದರೂ, ರಜಾ ಹಾಕಿ ಸುಮಲತಾ ಹಾಗೂ ಮಗ ಅಭಿಷೇಕ್ ಜೊತೆಗೆ ಇರುತ್ತಿದ್ದರು.

  ಆದರೆ, ಈ ವರ್ಷ ಮಾತ್ರ ಅಂಬರೀಶ್ ಇಲ್ಲದ ಮನೆ ಬಿಕೋ ಎನ್ನುತ್ತಿದೆ. ಸಂತಸ ಬದಲು ಸಂಕಟ ಸುಮಲತಾ ಮನದಲ್ಲಿ ತುಂಬಿದೆ. ಅಷ್ಟೊಂದು ನೋವು ಇದ್ದರೂ, ಸುಮಲತಾ ತಮ್ಮ ವಿವಾಹ ವಾರ್ಷಿಕೋತ್ಸವದ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ಅಂಬರೀಶ್-ಸುಮಲತಾ ನಡುವೆ ಪ್ರೀತಿ ಮೂಡಿದ್ಹೇಗೆ.? 'ರೆಬೆಲ್ ಇನ್ ಟ್ರಬಲ್' ಕಥೆ ಇಲ್ಲಿದೆ.. ಅಂಬರೀಶ್-ಸುಮಲತಾ ನಡುವೆ ಪ್ರೀತಿ ಮೂಡಿದ್ಹೇಗೆ.? 'ರೆಬೆಲ್ ಇನ್ ಟ್ರಬಲ್' ಕಥೆ ಇಲ್ಲಿದೆ..

  ಅಂಬರೀಶ್ ಇಲ್ಲದ ಮೊದಲ ವಿವಾಹ ವಾರ್ಷಿಕೋತ್ಸವದಂದು ಸುಮಲತಾ ಒಂದು ಪತ್ರ ಪರೆದು ಅಂಬಿಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ. ಅವರ ಬರಹ ಓದುತ್ತಿದ್ದರೆ ಎಂತಹವರಿಗೆ ಒಮ್ಮೆ ದುಃಖವಾಗುತ್ತದೆ. ಮುಂದೆ ಓದಿ..

  8 ಡಿಸೆಂಬರ್ 1991 ರಂದು ಮದುವೆ

  8 ಡಿಸೆಂಬರ್ 1991 ರಂದು ಮದುವೆ

  8 ಡಿಸೆಂಬರ್ 1991 ರಂದು ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಮದುವೆ ನೆರವೇರಿತ್ತು. ಆದರೆ, ಅಂಬರೀಶ್ ನವೆಂಬರ್ 24 ರಂದು ಇಹಲೋಕ ತ್ಯಜಿಸಿದ್ದಾರೆ. 14 ದಿನ ಕಳೆದಿದ್ದರೆ ಅವರ ಮನೆಯಲ್ಲಿ ಸಂಭ್ರಮ ಇರುತ್ತಿತ್ತು. ಆದರೆ, ಮದುವೆ ವಾರ್ಷಿಕೋತ್ಸವ ನಡೆಯುವ ಮುನ್ನ ವಿಧಿಯ ಆಟ ನಡೆದು ಹೋಗಿತ್ತು. ಈ ದಿನ ಅಂಬರೀಶ್ ಅವರ ಬಗ್ಗೆ ಸುಮಲತಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  14 ದಿನ ಇದ್ದಿದ್ದರೇ ಅಂಬಿ ಮನೆಯಲ್ಲಿ ನಡೆಯುತ್ತಿತ್ತು ಸಂಭ್ರಮ 14 ದಿನ ಇದ್ದಿದ್ದರೇ ಅಂಬಿ ಮನೆಯಲ್ಲಿ ನಡೆಯುತ್ತಿತ್ತು ಸಂಭ್ರಮ

  ಸುಮಲತಾ ಪ್ರೀತಿಯ ಮಾತುಗಳು

  ಸುಮಲತಾ ಪ್ರೀತಿಯ ಮಾತುಗಳು

  ''ಡಿಸೆಂಬರ್ 8, 27 ವರ್ಷಗಳಲ್ಲಿ ಈ ದಿನ ಮೊದಲ ಬಾರಿಗೆ ನೀವು ನನ್ನ ಜೊತೆಗೆ ಇಲ್ಲ. ನೀವು ನನ್ನ ಪ್ರಪಂಚದ ಕೇಂದ್ರ ಬಿಂದು ಆಗಿರಲಿಲ್ಲ. ನೀವೇ ನನ್ನ ಪ್ರಪಂಚ ಆಗಿದ್ರಿ. ಆ ಕೈ ನನ್ನನ್ನು ಹಿಡಿದಿತ್ತು. ಆ ಹೃದಯದಲ್ಲಿ ಮಿಲಿಯನ್ ಜನರನ್ನು ಮುಟ್ಟುವ ಪ್ರೀತಿ ಇತ್ತು. ನಾನು ಅಲ್ಲಿ ಆರಾಮಾಗಿ ಇದ್ದೆ.'' - ಸುಮಲತಾ, ನಟಿ

  ಈ ನಂಬರ್ ನಿಂದ ಕರೆ ಬಂದರೆ ಅಂಬಿ ರಿಸೀವ್ ಮಾಡದೇ ಇರ್ತಿರಲಿಲ್ಲ ಈ ನಂಬರ್ ನಿಂದ ಕರೆ ಬಂದರೆ ಅಂಬಿ ರಿಸೀವ್ ಮಾಡದೇ ಇರ್ತಿರಲಿಲ್ಲ

  ನಿಮ್ಮ ಪ್ರೀತಿ ನನ್ನನ್ನು ರಕ್ಷಣೆ ಮಾಡಿತ್ತು

  ನಿಮ್ಮ ಪ್ರೀತಿ ನನ್ನನ್ನು ರಕ್ಷಣೆ ಮಾಡಿತ್ತು

  ''27 ವರ್ಷ ಆಯಿತೇ..? ನನ್ನ ಜೀವನ ಶುರು ಆಗಿದ್ದು, ನೀವು ನನ್ನನ್ನು ಪ್ರೀತಿಸಲು ಶುರು ಮಾಡಿದಾಗ. ನಿಮ್ಮ ಪ್ರೀತಿ ನನ್ನನ್ನು ರಕ್ಷಣೆ ಮಾಡಿತ್ತು. ಚಳಿಗೆ ಹೊತ್ತುಕೊಂಡ ಹೊದಿಕೆಯಂತೆ ನಿಮ್ಮ ಪ್ರೀತಿ ಇತ್ತು. ಮಳೆ ಮತ್ತು ಬಿಸಿಲಿನಲ್ಲಿ ಹಿಡಿದ ದೊಡ್ಡ ಛತ್ರಿಯಂತೆ ಅದು ನನ್ನನ್ನು ಕಾಪಾಡಿತ್ತು.'' - ಸುಮಲತಾ, ನಟಿ

  ಎಲ್ಲಿಯೇ ಇದ್ದರೂ ನನ್ನನ್ನು ನೋಡುತ್ತಿದ್ದೀರಿ

  ಎಲ್ಲಿಯೇ ಇದ್ದರೂ ನನ್ನನ್ನು ನೋಡುತ್ತಿದ್ದೀರಿ

  ''ನೀವು ಈಗ ಎಲ್ಲಿಯೇ ಇದ್ದರೂ ನೀವು ನನ್ನನ್ನು ನೋಡುತ್ತಿದ್ದೀರಿ. ನೀವು ನಿಮ್ಮ ಮಗನ ಬಗ್ಗೆ ಯೋಚನೆ ಮಾಡುತ್ತಿದ್ದೀರಿ. ನೀನು ಈಗಲೂ ನಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿದ್ದೀರಿ. ನಾನು ನಿಮ್ಮ ಪ್ರೀತಿಯನ್ನು ನಮ್ಮ ಸುತ್ತ ಮುತ್ತಲಿನ ಅನೇಕ ಕಣ್ಣುಗಳಲ್ಲಿ ಕಾಣುತ್ತಿದ್ದೇನೆ. ಅವು ನನ್ನನ್ನು ಮತ್ತು ಅಭಿಯನ್ನು ಆಶೀರ್ವಾದ ಮಾಡುತ್ತಿವೆ. - ಸುಮಲತಾ, ನಟಿ

  ನನ್ನ ಚೂರಾದ ಹೃದಯ

  ''ನನ್ನ ಚೂರಾದ ಹೃದಯ ಮುಂದಕ್ಕೆ ಹೋಗಲು ನನಗೆ ನಿಮ್ಮ ಶಕ್ತಿಯ ಅಗತ್ಯವಿದೆ. ನಾವು ನಿಮ್ಮ ಮಾತು ಹಾಗೂ ನಿಮ್ಮ ಯೋಚನೆಗಳನ್ನ ಮರೆಯಾಗಲು ಬಿಡುವುದಿಲ್ಲ. ನಾನು ಬದುಕುಲು ನಿಮ್ಮ ಪ್ರೀತಿ ಬೇಕು. ನಿಮ್ಮ ಸ್ಫೂರ್ತಿಯಿಂದ ನಾನು ಮುಂದಕ್ಕೆ ಹೋಗುತ್ತೇನೆ. ನಿಮ್ಮಂತ ಅಧ್ಬುತ ವ್ಯಕ್ತಿಯ ಜೊತೆಗೆ 27 ವರ್ಷ ಕಳೆಯುವ ಅವಕಾಶ ನಾನು ಪಡೆದೆ. ಯಾವಾಗಲೂ ನಮ್ಮೊಂದಿಗೆ ನೀವು ಇರೀ. ಯಾವಾಗಲೂ ಹೊಳೆಯುತ್ತಿರಿ..'' - ಸುಮಲತಾ, ನಟಿ

  ಲವ್ ಮ್ಯಾರೇಜ್

  ಲವ್ ಮ್ಯಾರೇಜ್

  ಅಂಬಿ - ಸುಮಲತಾ ಇಬ್ಬರೂ ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯಾಗಿ ಬೆಳೆದಿದ್ದರು. ಪರಸ್ಪರ ಪ್ರೀತಿಸಿ ಸಪ್ತಪದಿ ತುಳಿದಿದ್ದರು. ಅಂಬರೀಶ್ ಅವರ ಗುಣ ಸುಮಲತಾ ಅವರಿಗೆ ಬಹಳ ಮೆಚ್ಚುಗೆ ಆಗಿತ್ತು. ಸುಮಲತಾ ಸೌಂದರ್ಯಕ್ಕೆ ಅಂಬಿಯನ್ನು ಪ್ರೇಮಿಯನ್ನಾಗಿ ಮಾಡಿತ್ತು. ಅಂಬಿಯೇ ಮೊದಲು ತಮ್ಮ ಪ್ರೇಮ ನಿವೇದನೆ ಮಾಡಿದ್ದರು.

  English summary
  Actor Ambareesh and Sumalatha's wedding anniversary. Sumalatha's emotional words about her wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X