»   » ನೊಂದ ನಿರ್ಮಾಪಕರಿಂದ ಅಂಬರೀಶ್ ಗೆ ಮಹಾ ಮಂಗಳಾರತಿ

ನೊಂದ ನಿರ್ಮಾಪಕರಿಂದ ಅಂಬರೀಶ್ ಗೆ ಮಹಾ ಮಂಗಳಾರತಿ

Posted By:
Subscribe to Filmibeat Kannada

''Beggars have no choice. You are not a chooser. You cant choose.'' ಅಂತ ರೆಬೆಲ್ ಸ್ಟಾರ್ ಅಂಬರೀಶ್ ಆಡಿರುವ ಮಾತು ಸ್ಯಾಂಡಲ್ ವುಡ್ ನಲ್ಲಿ ವಿವಾದಕ್ಕೆ ಕಾರಣವಾಗಿದೆ.

ಅಂಬರೀಶ್ ನೀಡಿರುವ ಈ ಹೇಳಿಕೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗದ್ದಲದ ವಾತಾವರಣ ಉಂಟಾಗಿದೆ. ಕಳೆದ 17 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನಿರ್ಮಾಪಕರು, ಅಂಬರೀಶ್ ನೀಡಿರುವ ಹೇಳಿಕೆ ವಿರುದ್ಧ ರೊಚ್ಚಿಗೆದ್ದಿದ್ದಾರೆ. [''ನಿರ್ಮಾಪಕರು ಭಿಕ್ಷುಕರು'' - ಮಂಡ್ಯದ ಗಂಡು ಅಂಬರೀಶ್]

ನಿರ್ಮಾಪಕರನ್ನ 'ಭಿಕ್ಷುಕರು' ಅಂತ ಅವಹೇಳನ ಮಾಡಿರುವ ಅಂಬರೀಶ್ ಅವರ ಹೇಳಿಕೆಯನ್ನ ಅನೇಕ ನಿರ್ಮಾಪಕರು ಖಂಡಿಸಿದ್ದಾರೆ. ಅಂಬಿ ವಿರುದ್ಧ ಯಾವ್ಯಾವ ನಿರ್ಮಾಪಕರು ಏನೇನು ಹೇಳಿದ್ದಾರೆ ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ...

ನಿರ್ಮಾಪಕ ಎನ್.ಎಂ.ಸುರೇಶ್

''ಅಂಬರೀಶ್ ಅವರ ಮೇಲೆ ನಂಬಿಕೆ, ವಿಶ್ವಾಸ, ಗೌರವ ಇತ್ತು. ಡಾ.ರಾಜ್ ಕುಮಾರ್ ಅವರು ನಿರ್ಮಾಪಕರನ್ನ ಅನ್ನದಾತರು ಅಂತ ಹೇಳುತ್ತಿದ್ದರು. ಆ ಮಾತನ್ನ ಅವರು ಮರೆತಿದ್ದಾರೆ ಅನ್ಸುತ್ತೆ. ಅವತ್ತು ಚೇಂಬರ್ ಗೆ ಬಂದಾಗ ಅವರಿಗೆ ಧಿಕ್ಕಾರ ಕೂಗಿದಾಗ, ನಾನೇ ಎಲ್ಲರನ್ನೂ ಸುಮ್ಮನೆ ಇರಿಸಿದ್ದೆ. ಡಾ.ರಾಜ್ ಕುಮಾರ್ ನಂತ್ರ ನಾವೆಲ್ಲರೂ ಅವರಿಗೆ ಗೌರವ ಕೊಟ್ಟಿದ್ದೀವಿ. 'ಬೆಗ್ಗರ್ಸ್' ಅಂತ ಹೇಳಿರುವುದು ತುಂಬಾ ನೋವಾಗಿದೆ. ಇಂತಹ ಮಾತು ಅವರ ಬಾಯಿಂದ ಬಂದಿರುವುದು ಕನ್ನಡ ಚಿತ್ರರಂಗದ ದೊಡ್ಡ ದುರಂತ. ನಿರ್ಮಾಪಕರಿಂದಲೇ ಅವರು ನಟನಾಗಿ, ಶಾಸಕನಾಗಿ ಇವತ್ತು ಈ ಮಟ್ಟಕ್ಕೆ ಬೆಳೆದಿರುವುದು. ಅದನ್ನ ಅವರು ಮರೆಯಬಾರದು. ಎಲ್ಲಾ ನಿರ್ಮಾಪಕರಿಗೂ ನೋವಾಗಿದೆ.'' - ಎನ್.ಎಂ.ಸುರೇಶ್ [ಫಿಲ್ಮ್ ಚೇಂಬರ್ ನಲ್ಲಿ ಕೂಗಾಟ-ಕಿತ್ತಾಟ-ರಂಪಾಟ]

ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ

''ಅಂಬರೀಶ್ ಹೇಳಿರೋದನ್ನ ನಾವೆಲ್ಲಾ ಸಂಪೂರ್ಣವಾಗಿ ಗಮನಿಸಬೇಕು. ಚಿತ್ರರಂಗ ನನ್ನನ್ನ ಬೆಳೆಸಿದೆ. ಇವತ್ತು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಅಂದ್ರೆ ಅದಕ್ಕೆ ಚಿತ್ರರಂಗ ಕಾರಣ. ಚಿತ್ರರಂಗದ ಋಣದಲ್ಲಿ ನಾನಿದ್ದೇನೆ ಅಂತ ಹೇಳಿದ್ರು. 'ಭಿಕ್ಷುಕ' ಅಂತ ಹೇಳಿರೋದನ್ನ ತಪ್ಪು ಅರ್ಥ ಮಾಡಿಕೊಳ್ಳಬಾರದು. 'ಭಿಕ್ಷುಕ' ಪದ ಮುಂಚೆ ಮತ್ತು ಆದ್ಮೇಲೆ ಏನು ಹೇಳಿದರು ಅಂತ ಯಾರೂ ಕೇಳುತ್ತಿಲ್ಲ. ಇಲ್ಲಿ ಯಾರು ದೊಡ್ಡೋರು, ಚಿಕ್ಕವರು ಅಂತಿಲ್ಲ. ಎಲ್ಲರೂ ಒಳ್ಳೆ ಸಿನಿಮಾ ಮಾಡ್ಬೇಕು ಅನ್ನೋದರ ಬಗ್ಗೆ ಯೋಚನೆ ಮಾಡಬೇಕು.'' - ಮುನಿರತ್ನ ['ಡೆತ್ ನೋಟ್' ಬರೆದಿಟ್ಟು ಆಸ್ಪತ್ರೆ ಸೇರಿದ ನಿರ್ಮಾಪಕ]

ನಿರ್ಮಾಪಕ ಕೆ.ಮಂಜು

''ಅವರು ನಿರ್ಮಾಪಕರಿಗೆ ಬೆಗ್ಗರ್ಸ್ ಅಂತ ಹೇಳ್ಲಿಲ್ಲ. ಭಿಕ್ಷುಕರಿಗೆ ಆಯ್ಕೆ ಇರಲ್ಲ. ಮುಂಚೆ 1 ರೂಪಾಯಿ ಹಾಕಿದರೂ ತೆಗೆದುಕೊಳ್ಳುತ್ತಿದ್ದರು, ಈಗ ಅವರಿಗೆ ಹತ್ತು ರೂಪಾಯಿ ಹಾಕ್ಬೇಕು. ನಿರ್ಮಾಪಕರಿಗೆ ತಾಳ್ಮೆ ಇರಬೇಕು ಅನ್ನುವ ಅರ್ಥದಲ್ಲಿ ಹೇಳಿದರು. ಆದ್ರೆ, 'ಬೆಗ್ಗರ್ಸ್' ಅಂತ ಪದ ಯಾಕೆ ಬಳಸಿದರು ಅನ್ನೋದು ನನಗೆ ಅರ್ಥ ಆಗ್ಲಿಲ್ಲ'' - ಕೆ.ಮಂಜು [ರೆಬೆಲ್ ಸ್ಟಾರ್ ಅಂಬರೀಶ್ ತಂಟೆಗೆ ಬಂದ್ರೆ...ಹುಷಾರ್..!]

ಟೇಶಿ ವೆಂಕಟೇಶ್, ನಿರ್ಮಾಪಕರು

''ಅಂಬರೀಶ್ ಅವರ ಹೇಳಿಕೆ ದುರ್ಧೈವದ್ದು. ನೋವಿನ ಹೇಳಿಕೆ. ಪಲಾಯನ ಹೇಳಿಕೆ ನೀಡಿರುವಂಥದ್ದು. ದಯವಿಟ್ಟು, ಅಂಬರೀಶ್ ಅವರೇ ನಿಮ್ಮ ಸಿನಿಮಾಗಳನ್ನ ನೋಡಿಕೊಂಡು ನಾವು ಇಂಡಸ್ಟ್ರಿಗೆ ಬಂದಿದ್ದೇವೆ. ನಮ್ಮ ಜೀವವನ್ನ ಒತ್ತೆ ಇತ್ತು ಚಿತ್ರರಂಗಕ್ಕೆ ಬಂದಿದ್ದೇವೆ. ನಮಗೆ ಹತ್ತಿಕ್ಕುವ, ಅವಮಾನ ಮಾಡುವ ಕೆಲಸ ಮಾಡಬೇಡಿ. ಇವತ್ತು ನಾವು ಬೆಗ್ಗರ್ಸ್ ಆಗಿದ್ದೀವಿ ಅಂದ್ರೆ, ಅದು ನಿಮ್ಮ ಕಲಾವಿದರು, ಒಕ್ಕೂಟದವರಿಗೆ ದುಡ್ಡು ಕೊಟ್ಟು ಬೆಗ್ಗರ್ ಆಗಿದ್ದೇವೆ. ರಾಜ್ಯದ ನಾಯಕನಾಗಿ ಎಚ್ಚರಿಕೆಯಿಂದ ಹೇಳಿಕೆ ಕೊಡಿ'' - ಟೇಶಿ ವೆಂಕಟೇಶ್ [ನಿರ್ಮಾಪಕರ ಉಪವಾಸ ಸತ್ಯಾಗ್ರಹ ; ಅಂಬರೀಶ್ ಹೊಸ ವರಸೆ]

ಕೇಶವ್, ನಿರ್ಮಾಪಕರು

''ನಿರ್ಮಾಪಕರು ಒಬ್ಬ ಆರ್ಟಿಸ್ಟ್, ಡೈರೆಕ್ಟರ್ ನ ಕ್ರಿಯೇಟ್ ಮಾಡ್ತಾರೆ. ಅವರನ್ನ ಬೆಗ್ಗರ್ಸ್ ಅನ್ನೋದು ಸರಿಯಲ್ಲ. ಅಂತಹ ದೊಡ್ಡ ವ್ಯಕ್ತಿ ಬಗ್ಗೆ ನಾನು ಹೇಳೋಕೆ ಸಾಧ್ಯ ಇಲ್ಲ.'' - ಕೇಶವ್

ಅಂಶಿ, ನಿರ್ಮಾಪಕರು

''ಇದು ಉದ್ದಟತನದ ಮಾತು, ಅವರ ಪ್ರತಿಕ್ರಿಯೆಯನ್ನ ನಾನು ಖಂಡಿಸುತ್ತೇನೆ. ಅವರ ಬಾಯಲ್ಲಿ ಈ ತರಹದ ಮಾತುಗಳು ಬರಬಾರದು. 'ನಾಗರಹಾವು' ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಈ ತರಹ ಮಾತನಾಡಬಾರದು'' - ಅಂಶಿ

ಹಿರಿಯ ನಟಿ ಜಯಮಾಲಾ

''ಅದು ಆಂಗ್ಲ ಭಾಷೆಯ ಗಾದೆ. ಅದನ್ನ ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತ ನಾನು ಕೇಳಿಲ್ಲ. ಆದ್ರೆ, ಅಂಬರೀಶ್ ಅವರು ನಿರ್ಮಾಪಕರನ್ನ ಬೆಗ್ಗರ್ಸ್ ಅಂತ ಹೇಳುವುದಕ್ಕೆ ಚಾನ್ಸ್ ಇಲ್ಲ. ಯಾಕಂದ್ರೆ ಪ್ರತಿ ಹಂತದಲ್ಲೂ ಚಿತ್ರರಂಗದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಸಮಸ್ಯೆ ಇದೆ. ಅದನ್ನ ಇಷ್ಟು ಘೋರವಾಗಿ ಹೋಗುವ ಅವಶ್ಯಕತೆ ಇಲ್ಲ. ಕೂತು ಬಗೆಹರಿಸಿಕೊಳ್ಳಬೇಕು.'' - ಜಯಮಾಲಾ [ಹಿರಿಯ ನಟಿ ಜಯಮಾಲಾ ಮಾತಿಗೆ ಬೆಲೆಯಿಲ್ಲ!]

English summary
Kannada Film producers have criticized Rebel Star Ambareesh's statement in which he referred Producers as 'Beggars'. Here is collection of few producers reaction.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada