For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್ ಒಂದು ರುಪಾಯಿ ಕೊಟ್ಟಿದ್ದ ಸರೋಜ್ ಖಾನ್

  |

  ಭಾರತೀಯ ಸಿನಿಮಾದ ದಂತಕತೆ ಅಮಿತಾಬ್ ಬಚ್ಚನ್ ಅವರಿಗೆ ಅದೆಷ್ಟೋ ಪ್ರಶಸ್ತಿಗಳು, ಬಿರುದುಗಳು ಬಂದಿವೆ. ಆದರೆ ಇಂದು ವಿಧಿವಶರಾದ ಸರೋಜ್ ಖಾನ್ ಒಂದು ರುಪಾಯಿ ನಾಣ್ಯವನ್ನು ಬಹುಮಾನವಾಗಿ ಕೊಟ್ಟಿದ್ದರಂತೆ.

  Shivarajkumar,ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ಈ ಬಾರಿ ಏನು ಮಾಡಲಿದ್ದಾರೆ ಗೊತ್ತೇ | Filmibeat Kannada

  ಹೌದು, ಇಂದು ಮೃತರಾಗಿರುವ ಖ್ಯಾತ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರು ಹಿಂದೊಮ್ಮೆ ಅಮಿತಾಬ್ ಬಚ್ಚನ್ ಅವರಿಗೆ ಒಂದು ರುಪಾಯಿ ನಾಣ್ಯ ಕೊಟ್ಟಿದ್ದರಂತೆ. ಅದೂ ಅಮಿತಾಬ್ ಬಚ್ಚನ್ ಅವರು ನನಗೆ ಸಿಕ್ಕ ದೊಡ್ಡ ಗೌರವಗಳಲ್ಲಿ ಒಂದು ಎಂದು ಕರೆದುಕೊಂಡಿದ್ದಾರೆ.

  'ಅಂಥ ದುಡುಕಿನ ನಿರ್ಧಾರ ಯಾಕೆ ತೆಗೆದು ಕೊಂಡಿರಿ ಸುಶಾಂತ್' ಎಂದು ಸರೋಜ್ ಖಾನ್ ಕೊನೆಯದಾಗಿ ಕೇಳಿದ್ದರು'ಅಂಥ ದುಡುಕಿನ ನಿರ್ಧಾರ ಯಾಕೆ ತೆಗೆದು ಕೊಂಡಿರಿ ಸುಶಾಂತ್' ಎಂದು ಸರೋಜ್ ಖಾನ್ ಕೊನೆಯದಾಗಿ ಕೇಳಿದ್ದರು

  ಸರೋಜ್ ಖಾನ್ ಬಗ್ಗೆ ಹಲವು ವಿಷಯಗಳನ್ನು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಅಮಿತಾಬ್ ಬಚ್ಚನ್, ಸರೋಜ್ ಖಾನ್ ಬಗ್ಗೆ ತಿಳಿಯದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

  ಗರ್ಭಿಣಿಯಾಗಿದ್ದನ್ನು ಮುಚ್ಚಿಟ್ಟು ನರ್ತಿಸಿದ್ದ ಸರೋಜ್ ಖಾನ್

  ಗರ್ಭಿಣಿಯಾಗಿದ್ದನ್ನು ಮುಚ್ಚಿಟ್ಟು ನರ್ತಿಸಿದ್ದ ಸರೋಜ್ ಖಾನ್

  ಅಮಿತಾಬ್ ಬಚ್ಚನ್ ಹೊಸದಾಗಿ ನಟನೆ ಆರಂಭ ಮಾಡಿದಾಗ ಸರೋಜ್ ಖಾನ್ ಹಿನ್ನೆಯಲ್ಲಿ ನರ್ತಿಸುವ ನೃತ್ಯಗಾರ್ತಿ ಆಗಿದ್ದರಂತೆ. ಅಮಿತಾಬ್ ಅವರ ಬಂದೇ ಹಾತ್ ಸಿನಿಮಾದಲ್ಲಿ ಹಾಡಿನಲ್ಲಿ ಸರೋಜ್ ಖಾನ್ ಹಿನ್ನೆಲೆಯಲ್ಲಿ ಡಾನ್ಸ್‌ ಮಾಡುವವರಲ್ಲಿ ಒಬ್ಬರಾಗಿದ್ದರಂತೆ.

  ಸರೋಜ್ ಖಾನ್ ಬಗ್ಗೆ ಅಮಿತಾಬ್

  ಸರೋಜ್ ಖಾನ್ ಬಗ್ಗೆ ಅಮಿತಾಬ್

  ಬಂದೇ ಹಾತ್ (1973) ಸಿನಿಮಾಕ್ಕಾಗಿ ಸರೋಜ್ ಖಾನ್ ಡಾನ್ಸ್ ಮಾಡುವಾಗ ಆಕೆ ಗರ್ಭಿಣಿಯಾಗಿದ್ದರಂತೆ. ಆದರೆ ಅದನ್ನು ಬಚ್ಚಿಟ್ಟು, ಹೊಟ್ಟೆ ಯಾರಿಗೂ ಕಾಣದಂತೆ ಬಟ್ಟೆಗಳನ್ನು ಕಟ್ಟಿಕೊಂಡು ಶೂಟಿಂಗ್‌ನಲ್ಲಿ ಭಾಗವಹಿಸಿದ್ದರಂತೆ ಸರೋಜ್ ಖಾನ್.

  ಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

  ಒಂದು ರುಪಾಯಿ ನೀಡುತ್ತಿದ್ದರಂತೆ ಸರೋಜ್

  ಒಂದು ರುಪಾಯಿ ನೀಡುತ್ತಿದ್ದರಂತೆ ಸರೋಜ್

  ಯಾರೇ ನಟ-ನಟಿಯರು ಚೆನ್ನಾಗಿ ನರ್ತಿಸಿದರೆ, ಚೆನ್ನಾಗಿ ಅಭಿನಯಿಸಿದರೆ, ಮುಖ ಭಾವ ಪ್ರದರ್ಶಿಸಿದರೆ ಅಂಥಹವರನ್ನು ಪಕ್ಕಕ್ಕೆ ಕರೆದು ಒಂದು ರುಪಾಯಿ ನಾಣ್ಯವನ್ನು ಸರೋಜ್ ಖಾನ್ ನೀಡುತ್ತಿದ್ದರಂತೆ. ಅಮಿತಾಬ್ ಬಚ್ಚನ್ ಅವರಿಗೂ ಸಹ ಹೀಗೆ ನಾಣ್ಯ ನೀಡಿದ್ದರಂತೆ ಸರೋಜ್ ಖಾನ್. ಆ ನಾಣ್ಯ ನನ್ನ ಪಾಲಿಗೆ ದೊಡ್ಡ ಪ್ರಶಸ್ತಿ ಎಂದಿದ್ದಾರೆ ಅಮಿತಾಬ್.

  ಡಾನ್ ಸಿನಿಮಾ ಹಾಡು ಮೆಚ್ಚಿದ್ದ ಸರೋಜ್ ಖಾನ್

  ಡಾನ್ ಸಿನಿಮಾ ಹಾಡು ಮೆಚ್ಚಿದ್ದ ಸರೋಜ್ ಖಾನ್

  ಅಮಿತಾಬ್ ಬಚ್ಚನ್ ಅವರ ಡಾನ್ ಸಿನಿಮಾದ 'ಕೈಕೆ ಪಾನ್ ಬನಾ ರಸವಾಲಾ' ಹಾಡನ್ನು ಹಲವು ಬಾರಿ ನೋಡಿದ್ದರಂತೆ ಸರೋಜ್ ಖಾನ್. ಆ ಹಾಡನ್ನು ನೋಡಿ ಚಿತ್ರಮಂದಿರದಿಂದ ಹೊರಗೆ ಬಂದುಬಿಡುತ್ತಿದ್ದರಂತೆ ಸರೋಜ್ ಖಾನ್. ಡಾನ್ಸ್‌ ಬಗ್ಗೆ ಸಾಕಷ್ಟು ಹೊಗಳಿದ್ದರಂತೆ ಸರೋಜ್ ಖಾನ್.

  English summary
  Actor Amithab Bachan shares interesting things about Saroj Khan. He said she use to give me one rupee coins.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X