For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ಬಗ್ಗೆ ನೀವರಿಯದ ಸಂಗತಿಗಳು

  By ಜೀವನರಸಿಕ
  |

  ಸ್ಯಾಂಡಲ್ ವುಡ್ ಹ್ಯಾಂಡಸಮ್ ಹೀರೋ ಪ್ರಜ್ವಲ್ ದೇವರಾಜ್ ಗೆ ಇವತ್ತು ಬರ್ತಡೇ ಸಂಭ್ರಮ. 27ನೇ ವಸಂತಕ್ಕೆ ಕಾಲಿಡ್ತಿರೋ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಈ ವರ್ಷ ನಿಜಕ್ಕೂ ಗ್ರ್ಯಾಂಡಾಗಿರಲಿದೆ. ಪ್ರತಿ ವರ್ಷಕ್ಕಿಂತ ಈ ವರ್ಷದ ಹುಟ್ಟುಹಬ್ಬ ವೆರಿ ವೆರಿ ಸ್ಪೆಷಲ್.

  ಈ ವರ್ಷ ತಂದೆ ಡೈನಾಮಿಕ್ ಹೀರೋ ದೇವರಾಜ್ ಪ್ರೊಡಕ್ಷನ್ಸ್ ಮೊದಲ ಚಿತ್ರದಲ್ಲಿ ಪ್ರಜ್ವಲ್ ಅಭಿನಯಿಸ್ತಿದ್ದಾರೆ. ಅಭಿನಯದಲ್ಲಿ ಅಪ್ಪನನ್ನೇ ಗುರುವಾಗಿಸಿಕೊಂಡ ಪ್ರಜ್ವಲ್ 27ನೇ ವರ್ಷದ ಅಪ್ಪನ ಪ್ರೀತಿಯ ಗಿಫ್ಟಾಗಿ 'ನೀನಾದೆನಾ' ಚಿತ್ರವನ್ನ ಹೋಂ ಬ್ಯಾನರ್ನಿಂದ ಪಡ್ಕೋತಿದ್ದಾರೆ. [ನೀನಾದೆ ನಾ ನೀನೊಲಿದಾ ಈ ಕ್ಷಣ ಲವ್ಲಿ ಸಾಂಗ್]

  ಪ್ರಜ್ವಲ್ ಬಹಳ ಬೇಗ ನಟನೆ ಶುರುಮಾಡಿದ್ರು. ಪ್ರಜ್ವಲ್ ಅಂದುಕೊಂಡಿದ್ದು ವಿದೇಶದಲ್ಲಿ ಎಂಬಿಎ ಮಾಡ್ಬೇಕು ಅಂತ. ಆದರೆ ಒಂದು ಸಿನಿಮಾ ಮಾಡ್ಬೇಕು ಅನ್ನೋ ಆಸೆ ಪ್ರಜ್ವಲ್ ಎಂಬಿಎ ಕನಸನ್ನು ಅಲ್ಲಿಗೆ ನಿಲ್ಲಿಸ್ತು. ಈಗ ವರ್ಷಕ್ಕೆ ನಾಲ್ಕು ಸಿನಿಮಾ ಮಾಡೋ ಈ ಡೈನಾಮಿಕ್ ಪ್ರಿನ್ಸ್ ಬೇಡಿಕೆಯ ನಟ. ಈ ನಟನ ಹುಟ್ಟುಹಬ್ಬದ ದಿನ ಪ್ರಜ್ವಲ್ ದೇವರಾಜ್ ಬಗ್ಗೆ ನೀವರಿಯದ ಸಂಗತಿಗಳು ನಿಮಗಾಗಿ.

  ನಟ ಆಗಲ್ಲ ಅಂದುಕೊಂಡಿದ್ರು ಪ್ರಜ್ವಲ್

  ನಟ ಆಗಲ್ಲ ಅಂದುಕೊಂಡಿದ್ರು ಪ್ರಜ್ವಲ್

  ಪ್ರಜ್ವಲ್ ಈಗ ಸ್ಯಾಂಡಲ್ ವುಡ್ ನಲ್ಲಿ ಭಿನ್ನ, ವಿಭಿನ್ನ ಸಿನಿಮಾಗಳ ಮೂಲಕ ಪ್ರಜ್ವಲಿಸ್ತಾ ಇರೋ ನಟ. ಆದರೆ ಕಾಲೇಜು ಜೀವನದಲ್ಲಿ ನಾನು ನಟ ಆಗಲ್ಲ ಅಂದುಕೊಂಡಿದ್ರಂತೆ. ಅದಕ್ಕೆ ಕಾರಣ ನಾನು ಚೆನ್ನಾಗಿಲ್ಲ ಎಂಬ ಭಾವ ಅವರನ್ನು ಕಾಡುತ್ತಿತ್ತು. ಹಾಗೆ ನೋಡಿದ್ರೆ ಪ್ರಜ್ವಲ್ ಕನ್ನಡ ಚಿತ್ರರಂಗದ ಹ್ಯಾಂಡಸಮ್ ಹೀರೋಗಳಲ್ಲಿ ಒಬ್ಬರು.

  ಲಂಡನ್ ನಲ್ಲಿ ಎಂಬಿಎ ಮಾಡೋ ಆಸೆಯಿತ್ತು

  ಲಂಡನ್ ನಲ್ಲಿ ಎಂಬಿಎ ಮಾಡೋ ಆಸೆಯಿತ್ತು

  ಲಂಡನ್ ನಲ್ಲಿ ಎಂಬಿಎ ಮಾಡಿ ಮುಂದಿನ ಜಾಬ್ ಹುಡುಕೋಣ ಅಂತ ಯೋಚಿಸಿದ್ದ ಪ್ರಜ್ವಲ್ ಗೆ ಶಶಾಂಕ್ ಡೈರೆಕ್ಷನ್ ನಲ್ಲಿ ಸಿಕ್ಸರ್ ಹೊಡೆಯೋ ಅವಕಾಶ ಸಿಕ್ಕಿತ್ತು.

  ಸೋತ್ರೆ ಒಂದೇ ಸಿನಿಮಾ ಸಾಕು

  ಸೋತ್ರೆ ಒಂದೇ ಸಿನಿಮಾ ಸಾಕು

  ಮನೆಯಲ್ಲಿ ಎಲ್ಲರೂ ಕಲಾವಿದರೆ ಹಾಗಾಗಿ ನಾನೊಬ್ಬ ನಟಿಸದಿದ್ರೆ ಹೇಗೆ. ಒಂದು ಸಿನಿಮಾ ನಟಿಸೋಣ ಸೋತ್ರೆ ಓದು ಮುಂದುವರಿಸೋಣ ಅನ್ನೋ ನಿರ್ಧಾರಕ್ಕೆ ಬಂದ ಪ್ರಜ್ವಲ್ ಮೊದಲ ಸಿನಿಮಾ 'ಸಿಕ್ಸರ್'ನಲ್ಲೇ ಫಿಫ್ಟಿ ಬಾರಿಸಿದ್ರು. ಈಗ ಹಲವು ಸಿನಿಮಾಗಳ ಸರದಾರ.

  ಅಪ್ಪ ಮಗನ ಸಿನಿಮಾ

  ಅಪ್ಪ ಮಗನ ಸಿನಿಮಾ

  ಡೈನಾಮಿಕ್ ಹೀರೋ ಡೈನಾಮಿಕ್ ಪ್ರಿನ್ಸ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಅದು 'ಕ್ಷತ್ರಿಯ' ಅನ್ನೋ ಚಿತ್ರ. ಪಿ ಸಿ ಶೇಖರ್ ನಿರ್ದೇಶನದ ಸಿನಿಮಾದಲ್ಲಿ ದೇವರಾಜ್ ಪ್ರಜ್ವಲ್ ಅಭಿನಯಿಸಿರೋದು ಅಪ್ಪ ಮಗ ಒಟ್ಟಾಗಿರೋ ಮೊದಲ ಸಿನಿಮಾ. ಈ ಸಿನಿಮಾ ಕೂಡ ಸದ್ಯದಲ್ಲೇ ತೆರೆಗೆ ಬರಲಿದೆ.

  ತಂದೆಯೇ ಬೆಸ್ಟ್ ಫ್ರೆಂಡ್

  ತಂದೆಯೇ ಬೆಸ್ಟ್ ಫ್ರೆಂಡ್

  ಪ್ರಜ್ವಲ್ ದೇವರಾಜ್ ಗೆ ತಂದೆಯೇ ಬೆಸ್ಟ್ ಫ್ರೆಂಡ್. ಸಿನಿಮಾದ ಕಥೆಗಳನ್ನ ಆಯ್ಕೆ ಮಾಡೋದು ಕೂಡ ತಂದೆಯ ಜವಾಬ್ದಾರಿ. ತಂದೆಗೆ ಇಷ್ಟವಾದ್ರೆ ನನಗೂ ಇಷ್ಟ ಅಂತಾರೆ ಪ್ರಜ್ವಲ್ ದೇವರಾಜ್.

  ಪ್ರಜ್ವಲ್ ಮನೆಯಲ್ಲೇ ಕಲೀತಾರೆ

  ಪ್ರಜ್ವಲ್ ಮನೆಯಲ್ಲೇ ಕಲೀತಾರೆ

  ಡೈನಾಮಿಕ್ ಹೀರೋ ದೇವರಾಜ್ ಅಂಡ್ ಫ್ಯಾಮಿಲೀನೇ ಹಾಗೆ ಖಾಸಗಿ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಲ್ಲ. ಆದ್ರೆ ಪ್ರಜ್ವಲ್ ಗೆ ಮನೆಯೇ ಪಾಠಶಾಲೆ, ತಂದೆಯೇ ಗುರು, ಮಾರ್ಗದರ್ಶಕರಂತೆ.

  ಹ್ಯಾಪಿ ಬರ್ತಡೇ ಪ್ರಜ್ವಲ್

  ಹ್ಯಾಪಿ ಬರ್ತಡೇ ಪ್ರಜ್ವಲ್

  ಬರ್ತಡೇ ಬಾಯ್ ಪ್ರಜ್ವಲ್ ಗೆ ನಮ್ಮ ಕಡೆಯಿಂದ ಹ್ಯಾಪಿ ಬರ್ತಡೇ. ಅವ್ರು ಇನ್ನಷ್ಟು ಹ್ಯಾಂಡಸಮ್ ಸಿನಿಮಾಗಳನ್ನ ಕೊಡಲಿ ಅನ್ನೋದು ನಮ್ಮ ಹಾರೈಕೆ.

  English summary
  Wishing you very very Happy birthday to Dynamic Prince Prajwal Devraj. Here is an interesting facts about Prajwal. He completed his bachelor degree course from Shri Bhagwan Mahaveer Jain College, Center for Management Studies, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X