For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ನಲ್ಲಿ ಒಂದಾದ ಅನಂತ್ ಹಾಗೂ ಮಾಳವಿಕ

  By Pavithra
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾ ಆರಂಭವಾಗಿ ವರ್ಷವೇ ಕಳೆದರೂ ಚಿತ್ರ ಮಾತ್ರ ಬಿಡುಗಡೆ ಆಗಿಲ್ಲ ಅಂತ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

  ಸಾಕಷ್ಟು ಕಾರಣಗಳಿಂದ ಚಿತ್ರೀಕರಣ ತಡವಾಗಿರುವುದಾಗಿ ಖುದ್ದು ಯಶ್ ತಿಳಿಸಿದ್ದರು. ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿ ಆಗಿದ್ದು, ಸಿನಿಮಾದಲ್ಲಿ ನಟಿ ಮಾಳವಿಕ ಹಾಗೂ ಹಿರಿಯ ನಟ ಅನಂತ್ ನಾಗ ಅಭಿನಯ ಮಾಡುತ್ತಿದ್ದಾರೆ.

  ಯಶ್-ಸುದೀಪ್-ದರ್ಶನ್ ಪ್ರಚಾರ ಮಾಡಿದವರ ಕಥೆ ಏನಾಯ್ತು.?ಯಶ್-ಸುದೀಪ್-ದರ್ಶನ್ ಪ್ರಚಾರ ಮಾಡಿದವರ ಕಥೆ ಏನಾಯ್ತು.?

  ಚಿತ್ರೀಕರಣದಲ್ಲಿ ಭಾಗಿ ಆಗಿರುವ ನಟಿ ಮಾಳವಿಕ, ಅನಂತ್ ನಾಗ್ ಅವರ ಜೊತೆಗಿನ ಪೋಟೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಎರಡು ಪೊಟೋಗಳನ್ನು ಅಪ್ಲೋಡ್ ಮಾಡಿರುವ ಮಾಳವಿಕ, ಅನಂತ್ ನಾಗ್ ಅವರ ಜೊತೆ ಅಭಿನಯ ಮಾಡಿದ್ದು ಖುಷಿ ಕೊಟ್ಟಿದೆ ಎಂಬುದನ್ನು ತಿಳಿಸಿದ್ದಾರೆ.

  ಮಾಳವಿಕ ಅವರ ಮತ್ತೊಂದು ಫೋಟೋದಲ್ಲಿ ನಿರ್ದೇಶಕ, ನಟ ನಾಗಭರಣ ಕಾಣಿಸಿಕೊಂಡಿದ್ದು ಅವರು ಕೂಡ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ ಎಂದು ತಿಳಿಯುತ್ತಿದೆ. ಸದ್ಯ ಕೊನೆಯ ಹಂತದ ಚಿತ್ರೀಕರಣ ಮಾಡುತ್ತಿರುವ ಕೆ ಜಿ ಎಫ್ ತಂಡ ಆದಷ್ಟು ಬೇಗ ಸಿನಿಮಾ ಜೊತೆಯಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.

  English summary
  Kannada artist Ananth Nag, TS Nagabharana and Malavika are acting in Kannada Yash starrer KGF movie,Prasanth Neal directed the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X