»   » ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್

ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್

Posted By:
Subscribe to Filmibeat Kannada

ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೆ ಮಾತಾಡುವುದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಫೇಮಸ್ಸು. ಹಾಗೇ, ಇದ್ದದ್ದನ್ನ ಇದ್ದ ಹಾಗೇ ಹೇಳುವುದರಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಹೆಸರುವಾಸಿ.

ಈ ಇಬ್ಬರು ನಟರು ಒಂದ್ಕಾಲದ ಕುಚ್ಚಿಕ್ಕು ಸ್ನೇಹಿತರು. ಹಾಗ್ನೋಡಿದ್ರೆ, ರಿಯಲ್ ಸ್ಟಾರ್ ಉಪೇಂದ್ರ ಮೊದಲು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಇದೇ ಜಗ್ಗೇಶ್ ಅಭಿನಯದ 'ತರ್ಲೆ ನನ್ ಮಗ' ಚಿತ್ರದಿಂದ.


'ತರ್ಲೆ ನನ್ ಮಗ' ಚಿತ್ರ, ಉಪೇಂದ್ರ ಅವರ ನಿರ್ದೇಶನದ ಕನಸನ್ನ ನನಸು ಮಾಡಿದ್ರೆ, ನಟ ಜಗ್ಗೇಶ್ ಕೆರಿಯರ್ ಗೆ ಬಿಗ್ ಬ್ರೇಕ್ ನೀಡಿದ್ದು ಕೂಡ ಇದೇ ಸಿನಿಮಾ. ಈ ಫ್ಲ್ಯಾಶ್ ಬ್ಯಾಕ್ ನ ಹೇಳುವುದಕ್ಕೆ ಕಾರಣ ಈಗ ಭುಗಿಲೆದ್ದಿರುವ ಹೊಸ ವಿವಾದ. [ಸ್ಯಾಂಡಲ್ ವುಡ್ 'ಸೂಪರ್ ಸ್ಟಾರ್'ಗಳನ್ನ ಬೆಂಡೆತ್ತಿ ಬ್ರೇಕ್ ಹಾಕಿದ ಉಪೇಂದ್ರ]


'ಉಪ್ಪಿ-2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ' ಹಾಡಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್ ವುಡ್ ನ ಕೆಲ ನಟರ ಕಾಲು ಎಳೆದಿದ್ದಾರೆ. ಇವರೇ ಅಂತ ಬೆಟ್ಟು ಮಾಡಿ ತೋರಿಸದೆ, ಕೆಲ ನಟರನ್ನ ಬೆಂಡಿತ್ತಿದ್ದಾರೆ. ಈ ಹಾಡನ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ನಟ ಜಗ್ಗೇಶ್, ಟ್ವಿಟ್ಟರ್ ನಲ್ಲಿ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಮುಂದೆ ಓದಿ....


ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್

ನಟ ಜಗ್ಗೇಶ್ ಕೊಂಚ ಗರಂ ಆಗಿದ್ದಾರೆ. 'ಉಪ್ಪಿ-2' ಚಿತ್ರದ ಹಾಡಿನ ಬಗ್ಗೆ ಟ್ವಿಟ್ಟರ್ ನಲ್ಲಿ ತಮಗಾದ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. 'ಉಪ್ಪಿ-2' ಚಿತ್ರ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅಂತ ನೇರವಾಗಿ ಎಲ್ಲೂ ಹೇಳಿಕೊಳ್ಳದ ಜಗ್ಗೇಶ್ ಪರೋಕ್ಷವಾಗಿ 'ಉಪ್ಪಿ-2' ಚಿತ್ರದ ಹಾಡಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. [ದಿನಪತ್ರಿಕೆ ಸಂಪಾದಕರನ್ನೇ ಕುಣಿಸಿದ 'ಉಪ್ಪಿ-2']


'ಉಪೇಂದ್ರ' ಮನಸ್ಸು ರೋಗಗ್ರಸ್ತ?

ತಾವೇ ರಚಿಸಿ ಹಾಡಿರುವ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಹಾಡಲ್ಲಿ ಉಪೇಂದ್ರ ವೃತ್ತಿಬದುಕಿನ ಕೆಲ ಸನ್ನಿವೇಶಗಳನ್ನ ಹೇಳಿಕೊಂಡು ಕೆಲ ನಟರ ಕಾಲು ಎಳೆದಿದ್ದಾರೆ. ಇದನ್ನ ಕೇಳಿದ ನಟ ಜಗ್ಗೇಶ್, ''ಹಳೆಯದ್ದನ್ನೆಲ್ಲಾ ಕೆದಕುತ್ತಾ ಉಪ್ಪಿ ಕೆಟ್ಟಿದ್ದಾಗಿ ಬರೆದಿದ್ದಾರೆ. ಅವರ ಮನಸ್ಸು ರೋಗಗ್ರಸ್ತ'' ಅಂತ ಟ್ವೀಟ್ ಮಾಡಿದ್ದಾರೆ.


ಅಪ್ಪಂಗ್ ಹುಟ್ಟಿದ ಮಗ!

''ಇದ್ದಿದ್ ಇದ್ದಂಗ್ ಹೇಳಿದ್ರೆ ಎದ್ ಬಂದ್ ಎದೆಗ್ ಒದ್ರಂತೆ'' ಅಂತವರ ಎದೆ ಮೇಲೆ ಕಾಲಿಟ್ಟು ಸತ್ಯ ಹೇಳೋನೇ ಅಪ್ಪಂಗ್ ಹುಟ್ಟಿದ ಮಗ ಅನ್ನೋದು ನನ್ ಗಾದೆ'' ಅಂತ ಜಗ್ಗೇಶ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.


ಇದು ಟ್ವಿಟ್ಟರ್ ಫಾಲೋವರ್ಸ್ ಗೆ ಮುಟ್ಟಿಸಿದ ಬಿಸಿ!

'ಉಪ್ಪಿ-2' ಹಾಡಿನ ಕುರಿತು ಜಗ್ಗೇಶ್ ಟ್ವೀಟ್ ಮಾಡುತ್ತಿದ್ದಂತೆ ಉಪೇಂದ್ರ ಅಭಿಮಾನಿಗಳು ರೊಚ್ಚಿಗೆದ್ದುಬಿಟ್ಟರು. ಜಗ್ಗೇಶ್ ವಿರುದ್ಧ ಸಮರ ಸಾರುವುದಕ್ಕೆ ನಿಂತರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ಹೊಸ ಗಾದೆಯನ್ನ ಸೃಷ್ಟಿಸಿ ಟ್ವೀಟ್ ಮಾಡಿದ್ದಾರೆ. ['ಉಪ್ಪಿ-2' ಆಡಿಯೋ ರಿಲೀಸ್ ಮಾಡಿದ್ದು ಯಾರು?]


ಉಪೇಂದ್ರ ಇಂದ ಬೆಳೆದ ಜಗ್ಗೇಶ್.!?

'ಉಪ್ಪಿ-2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಹಾಡಲ್ಲಿ ಒಂದು ಸಾಲಿದೆ - ''ಹಾಳೆಗಳ ಮೇಲಲ್ಲ, ಹಣೆ ಹಣೆಗಳ ಮೇಲೆ ಗೀಚಿದ್ದು. ಆ ಗೀಚಿದ್ದು ಈಗಲೂ ಟೀಚ್ ಮಾಡ್ಕೊಂಡು ಎಷ್ಟೋ ಜನ ಉಪ್ಪರಿಗೆ ರೀಚ್ ಆದರು''. ಈ ಸಾಲನ್ನ ಜಗ್ಗೇಶ್ ಸೀರಿಯಸ್ಸಾಗಿ ಪರಿಗಣಿಸಿದ್ದಾರಾ? ಗೊತ್ತಿಲ್ಲ. 'ತರ್ಲೆ ನನ್ ಮಗ' ಚಿತ್ರದಿಂದ ಜಗ್ಗೇಶ್ ಕೆರಿಯರ್ ಗೆ ಉಪೇಂದ್ರ ಹೊಸ ಟರ್ನ್ ನೀಡಿರಬಹುದು. ಆದ್ರೆ, ತಮ್ಮ ಹಿಸ್ಟ್ರಿ ಬಗ್ಗೆ ಜಗ್ಗೇಶ್ ಒಂದು ಟ್ವೀಟ್ ಮಾಡಿದ್ದಾರೆ. ಅದನ್ನ ನೋಡೋಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....


ಜಗ್ಗೇಶ್ ಇತಿಹಾಸ ಗೊತ್ತಾ?

1983ರಲ್ಲೇ ಕನ್ನಡ ಚಿತ್ರರಂಗಕ್ಕೆ ಜಗ್ಗೇಶ್ ಅಡಿಯಿಟ್ಟಿದ್ದರು. ಮೊದ ಮೊದಲು ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸುತ್ತಿದ್ದ ಜಗ್ಗೇಶ್, ನಾಯಕ ನಟನ ಪಟ್ಟಕ್ಕೇರಿದ್ದು 1992ರಲ್ಲಿ ತೆರೆಕಂಡ 'ಭಂಡ ನನ್ನ ಗಂಡ' ಚಿತ್ರದಿಂದ. ಇದೇ ವರ್ಷ ಉಪ್ಪಿ ನಿರ್ದೇಶನದ 'ತರ್ಲೆ ನನ್ ಮಗ' ಚಿತ್ರದಲ್ಲಿ ಜಗ್ಗೇಶ್ ನಟಿಸಿದರು. 90ರ ದಶಕದ ಹೊತ್ತಿನಲ್ಲೇ 69 ಸಿನಿಮಾ ಪೂರೈಸಿದ ಜಗ್ಗೇಶ್, ಉಪೇಂದ್ರ ಅವರಿಂದ ಅವಕಾಶ ಪಡೆದಿದ್ದಲ್ಲ ಅಂತ ನೇರವಾಗಿ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಾರೆ.


ಟ್ವಿಟ್ಟರ್ ನಲ್ಲಿ ಸಮರ

ಜಗ್ಗೇಶ್ ಅವರ ಪ್ರತಿಕ್ರಿಯೆಗೆ ಟ್ವಿಟ್ಟರ್ ನಲ್ಲಿ ದೊಡ್ಡ ಸಮರ ಶುರುವಾಗಿದೆ. ಉಪೇಂದ್ರ ಅವರ ಅಭಿಮಾನಿಗಳು ಜಗ್ಗೇಶ್ ವಿರುದ್ಧ ತಿರುಗಿ ಬಿದಿದ್ದಾರೆ.


English summary
Kannada Actor Upendra directorial 'Uppi-2' audio has hit the market. In a song 'No Excuse me Please', Upendra is said to have taunted Sandalwood Star Heroes. Listening to this song Kannada Actor Jaggesh has reacted on twitter. Check out what Jaggesh spoke about Upendra.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X