»   » 'ಲಕ್ಷ್ಮಣ' ಹವಾ: ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್

'ಲಕ್ಷ್ಮಣ' ಹವಾ: ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್

Posted By: Sony
Subscribe to Filmibeat Kannada

ಮೇಘನಾ ರಾಜ್ ಮತ್ತು ಅನೂಪ್ ರೇವಣ್ಣ ಅವರು ಮೊಟ್ಟ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಲಕ್ಷ್ಮಣ' ನಾಳೆ (ಜೂನ್ 24) ಅದ್ದೂರಿಯಾಗಿ ತೆರೆ ಕಾಣುತ್ತಿದ್ದು, ಚೊಚ್ಚಲ ಚಿತ್ರದಲ್ಲಿಯೇ ಅನೂಪ್ ಅವರು ಸಾಕಷ್ಟು ಹವಾ ಹುಟ್ಟು ಹಾಕಿದ್ದಾರೆ.

ನಿರ್ದೇಶಕ ಆರ್.ಚಂದ್ರು ಆಕ್ಷನ್-ಕಟ್ ಹೇಳಿರುವ 'ಲಕ್ಷ್ಮಣ' ಚಿತ್ರ ಸುಮಾರು 200 ಪ್ಲಸ್ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ನಾಳೆ ಬೆಳಗ್ಗಿನ ಶೋಗಳ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ.[ಯಶಸ್ಸು ಅಂದ್ರೆ 6 ತಿಂಗಳಿಗೊಂದು ಸಿನಿಮಾ ಮಾಡೋದಲ್ಲ: ಮೇಘನಾ]


Anup starrer 'Lakshmana' to release in 200 plus theaters

ನಿನ್ನೆ ತಾನೆ 'ಲಕ್ಷ್ಮಣ' ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದ ನಿರ್ದೇಶಕ ಆರ್.ಚಂದ್ರು ಅವರು ಟ್ರೈಲರ್ ಮೂಲಕ ಮತ್ತಷ್ಟು ಕುತೂಹಲ ಹುಟ್ಟಿಸಿದ್ದಾರೆ. ಟ್ರೈಲರ್ ನೋಡುತ್ತಿದ್ದರೆ, ನಟ ಅನೂಪ್ ರೇವಣ್ಣ ಅವರು ಅಕ್ಷರಶಃ ಮಾಸ್ ಹೀರೋ ಆಗಿ ಹೊರಹೊಮ್ಮಿದ್ದಾರೆ ಅಂತ್ಹೆನಿಸುತ್ತಿದೆ.


Anup starrer 'Lakshmana' to release in 200 plus theaters

ಸ್ಯಾಂಡಲ್ ವುಡ್ ಗೆ ನಟ ಅನೂಪ್ ರೇವಣ್ಣ ಅವರು ಹೊಸ ಹುಡುಗ ಆಗಿರೋದ್ರಿಂದ ಗಾಂಧಿನಗರದಲ್ಲಿ ಅವರ ಬಗ್ಗೆ ಈಗಾಗಲೇ ಹೈಪ್ ಕ್ರಿಯೇಟ್ ಆಗಿದೆ. ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಎಸ್ ನಾರಾಯಣ್ ಅವರ 'ಪಂಟ' ಚಿತ್ರಕ್ಕೆ ಅನೂಪ್ ಅವರು ಬುಕ್ ಆಗಿದ್ದಾರೆ ಅನ್ನೋದು ಇನ್ನೊಂದು ಖುಷಿಯ ವಿಚಾರ.


ವಿಶೇಷವಾಗಿ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಖಡಕ್ ಖಾಕಿ ಖದರ್ ತೋರಿದ್ದಾರೆ. ನಟಿ ಶ್ರೀದೇವಿ ಅವರು ಮತ್ತೆ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಆಗಿದ್ದು, ಬಾಹುಬಲಿ ಖ್ಯಾತಿಯ ಖಳನಟ ಎಂ ಪ್ರಭಾಕರ್, ಬಹುಭಾಷಾ ನಟ ಪ್ರದೀಪ್ ರಾವತ್, ಕಾಮಿಡಿ ನಟರಾದ ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಮುಂತಾದ ಬಹುದೊಡ್ಡ ತಾರಾಗಣ ಇರುವ 'ಲಕ್ಷ್ಮಣ' ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.[ಅಚ್ಚರಿ.! 'ಲಕ್ಷ್ಮಣ' ಸೆಟ್ ನಲ್ಲಿ ಶ್ರೀದೇವಿ ಮತ್ತು ಬಾಹುಬಲಿ ವಿಲನ್ ಪ್ರತ್ಯಕ್ಷ]


Anup starrer 'Lakshmana' to release in 200 plus theaters

ಬೆಂಗಳೂರಿನ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ 'ಲಕ್ಷ್ಮಣ' ಸಿನಿಮಾ ತೆರೆ ಕಾಣುತ್ತಿದ್ದು, ಇಡೀ ಕರ್ನಾಟಕದಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಅಂದಹಾಗೆ ತುಂಬಾ ನಿರೀಕ್ಷೆ ಹುಟ್ಟು ಹಾಕಿರುವ 'ಲಕ್ಷ್ಮಣ' ಚಿತ್ರಕ್ಕೆ ಇನ್ನೂ ಟಿಕೆಟ್ ಬುಕ್ ಮಾಡಿಸದೇ ಇದ್ದವರು ಈಗಲೇ ಟಿಕೆಟ್ ಬುಕ್ ಮಾಡಿಸಿಕೊಳ್ಳಿ.

English summary
Kannada Actor Anup, Kannada Actress Meghana Raj starrer Kannada movie 'Lakshmana' is all set to release in 200 plus theaters across Karnataka. The movie is directed by R.Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada