For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ಅರ್ಜುನ್ ಸರ್ಜಾ ಪುತ್ರಿ

  |

  ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅರ್ಜುನ್ ಸರ್ಜಾ ಅವರ ಪುತ್ರಿ, ನಟಿ ಐಶ್ವರ್ಯಾ ಸರ್ಜಾ ಅವರು ಕೋವಿಡ್ 19ರಿಂದ ಚೇತರಿಸಿಕೊಂಡಿದ್ದಾರೆ.

  ಸುಧಾರಾಣಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಅಪೋಲೋ ಆಸ್ಪತ್ರೆ.

  ತಮಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಕುರಿತು ಐಶ್ವರ್ಯಾ ಅರ್ಜುನ್, ಜುಲೈ 20ರಂದು ಮಾಹಿತಿ ನೀಡಿದ್ದರು. ಈಗ ಅದರಿಂದ ಚೇತರಿಸಿಕೊಂಡಿದ್ದು, ಪುನಃ ಮಾಡಿರುವ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂಬ ಖುಷಿಯನ್ನು ಹಂಚಿಕೊಂಡಿದ್ದಾರೆ.

  ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾಗೂ ಕೊರೊನಾ ಪಾಸಿಟಿವ್

  ನನ್ನ ಎಲ್ಲ ಹಿತೈಷಿಗಳಿಗೆ ಹೇಳಲು ಬಯಸುವುದೇನೆಂದರೆ ದೇವರ ದಯೆಯಿಂದ ನಾನು ಈಗ ಕೊರೊನಾ ವೈರಸ್‌ ತಪಾಸಣೆಯಲ್ಲಿ ನೆಗೆಟಿವ್ ವರದಿ ಪಡೆದಿದ್ದೇನೆ. ನನ್ನ ಕುರಿತು ಯೋಚಿಸಿದ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಈ ಪಿಡುಗು ಇನ್ನೂ ದೂರವಾಗಿಲ್ಲ. ಹೀಗಾಗಿ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಿ. ಸುರಕ್ಷಿತರಾಗಿರಿ ಎಂದು ಐಶ್ವರ್ಯಾ ಹೇಳಿದ್ದಾರೆ.

  ಧ್ರುವ ಸರ್ಜಾ ದಂಪತಿಗೆ ಕೊರೊನಾ ನೆಗೆಟಿವ್: ಅಣ್ಣನ ಆಶೀರ್ವಾದ ಎಂದ ನಟ

  ಇತ್ತೀಚಿಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದೆ. ಕೊರೊನಾ ಪಾಸಿಟಿವ್ ಬಂದಿದೆ. ನಾನೀಗ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಐಶ್ವರ್ಯಾ ತಮ್ಮ ವರದಿ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

  English summary
  Arjuna Sarja's daughter Aishwarya Sarja tested negative for coronavirus. She was tested positive for covid 19 on July 20.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X