For Quick Alerts
  ALLOW NOTIFICATIONS  
  For Daily Alerts

  ರಾಜೇಶ್ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇತರೆ ಮಾಹಿತಿ

  |

  ಕನ್ನಡ ಚಿತ್ರರಂಗದ ಹಿರಿಯ ನಟ 'ಕಲಾತಪಸ್ವಿ' ರಾಜೇಶ್ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ಕಾರ್ಯವು ಮೇಡಿ ಅಗ್ರಹಾರ ಲಕ್ಷ್ಮಿಪುರದಲ್ಲಿ ಮಧ್ಯಾಹ್ನ 3:30ರ ಬಳಿಕ ನಡೆಯಲಿದೆ. ಸಾರ್ವಜನಿಕರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆಯಬಹುದು.

  ರಾಜೇಶ್‌ ಅವರಿಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜೇಶ್ ಅವರ ಅಳಿಯ ನಟ ಅರ್ಜುನ್ ಸರ್ಜಾ, ''ಕಳೆದ ಹತ್ತು ದಿನಗಳಿಂದಲೂ ಅವರು ಆಸ್ಪತ್ರೆಯಲ್ಲಿದ್ದರು. ಮೊದಲಿಗೆ ಅವರಿಗೆ ಪ್ರೋ ಕೋವಿಡ್ ಆಗಿತ್ತು. ಬಳಿಕ ಸಿಕೆಡಿ (ಕ್ರಾನಿಕಲ್ ಕಿಡ್ನಿ ಡಿಸೀಸ್) ಆಯ್ತು. ಬಹಳ ಸುಸ್ತು ಎಂದು ಇತ್ತೀಚೆಗೆ ಹೇಳುತ್ತಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಇನ್ನಷ್ಟು ಸುಸ್ತಾಗಿದ್ದರು. ನಾವು ಬಹಳ ಪ್ರಯತ್ನ ಪಟ್ಟೆವು. ಆದರೆ ಉಳಿಸಿಕೊಳ್ಳಲು ಆಗಲಿಲ್ಲ. ಶನಿವಾರ ಬೆಳಗಿನ ಜಾವ 2:20 ಕ್ಕೆ ರಾಜೇಶ್ ಅವರು ಪ್ರಾಣತ್ಯಾಗ ಮಾಡಿದರು'' ಎಂದು ಮಾಹಿತಿ ನೀಡಿದ್ದಾರೆ.

  ''ರಾಜೇಶ್ ಅವರು ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದಾರೆ. ರಾಜೇಶ್ ಅವರು ಅಣ್ಣಾವ್ರ ಸಮಕಾಲೀನರು. ಅವರ ಅಗಲಿಕೆಯಿಂದ ಮನಸ್ಸಿಗೆ ಬಹಳ ವ್ಯಥೆಯಾಗಿದೆ'' ಎಂದು ರಾಜೇಶ್ ಹೇಳಿದರು.

  English summary
  Senior actor Rajesh passed away on February 19. His body will kept in Ravindra Kalakshetra for fans to see him one last time. his final rituals will be performed today only.
  Saturday, February 19, 2022, 16:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X