For Quick Alerts
  ALLOW NOTIFICATIONS  
  For Daily Alerts

  ಅವರು ನೀಡುತ್ತಿರುವ ಬೆಂಬಲವೇ ನನಗೆ ದಾರಿ; ಅಪ್ಪು ಪುಣ್ಯ ಸ್ಮರಣೆಯಂದು ನೆನಪಿನ ಸಾಗರದಲ್ಲಿ ಅಶ್ವಿನಿ

  |

  ಪುನೀತ್ ರಾಜ್ ಕುಮಾರ್ ತಮ್ಮ ಪ್ರೀತಿಯ ಕುಟುಂಬ ಹಾಗೂ ಕೋಟ್ಯಂತರ ಅಭಿಮಾನಿ ದೇವರುಗಳನ್ನು ಅಗಲಿ ಇಂದಿಗೆ ( ಅಕ್ಟೋಬರ್ 29 ) ವರ್ಷ ಕಳೆದಿದೆ. ಹೀಗೆ ವರ್ಷ ಕಳೆದರೂ ಸಹ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಹಾಗೂ ಹಲವಾರು ಸಿನಿ ರಸಿಕರು ಅಪ್ಪು ಇಲ್ಲ ಎಂಬ ವಿಷಯವನ್ನು ಒಪ್ಪಲು ತಯಾರಿಲ್ಲ.

  ಅಣ್ಣಾವ್ರ ಮಗನಾಗಿ, ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಸ್ಟರ್ ಲೋಹಿತ್ ಅಪ್ಪು ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಆಗಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಮೇರುನಟನ ಪುತ್ರನಾಗಿದ್ದರೂ ಸಹ ತನ್ನ ಸ್ವಂತ ಪ್ರತಿಭೆಯಿಂದ ಪುನೀತ್ ರಾಜ್ ಕುಮಾರ್ ಪವರ್ ಸ್ಟಾರ್, ಕನ್ನಡದ ರಾಜರತ್ನ ಆದರು. ಹೀಗೆ ಓರ್ವ ನಟನಾಗಿ ನೋಡಬೇಕಿದ್ದ ಎಲ್ಲಾ ಹಂತದ ಸಕ್ಸಸ್ ನೋಡಿದ್ದ ಪುನೀತ್ ರಾಜ್ ಕುಮಾರ್ ನಿಧನ ಹೊಂದಿದ ನಂತರ ದೇವರಾಗಿ ಬಿಟ್ಟಿದ್ದಾರೆ.

  'ಪುನೀತ್ ಆನಂದಗೂಡಿ'ನಲ್ಲಿ ಅಪ್ಪು ಸ್ಮರಣೆ, ಅನ್ನಸಂತರ್ಪಣೆ'ಪುನೀತ್ ಆನಂದಗೂಡಿ'ನಲ್ಲಿ ಅಪ್ಪು ಸ್ಮರಣೆ, ಅನ್ನಸಂತರ್ಪಣೆ

  ಅಪ್ಪು ಇಹಲೋಕ ತ್ಯಜಿಸಿದ ನಂತರ ಅವರು ಮಾಡುತ್ತಿದ್ದ ಸಮಾಜ ಸೇವೆಗಳು ಒಂದೊಂದೇ ಬೆಳಕಿಗೆ ಬಂದವು. ಅಪ್ಪು ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದ ಅದೆಷ್ಟೋ ನಿದರ್ಶನಗಳು ಬಹಿರಂಗವಾದ ಬಳಿಕ ಮನೆ ಮಗನಂತೆ ಕಾಣುತ್ತಿದ್ದ ಅಪ್ಪು ಅವರನ್ನು ಜನರು ದೇವರೆಂದು ಪೂಜಿಸಲು ಆರಂಭಿಸಿದರು. ಪ್ರತಿದಿನ ಆನ್ ಲೈನ್ ಆಗಲಿ ಅಥವಾ ಆಫ್‌ಲೈನ್ ಆಗಲಿ ಅಪ್ಪು ಅವರ ಕುರಿತು ಏನಾದರೊಂದು ಚರ್ಚೆ ಅಥವಾ ಯಾವುದಾದರೊಂದು ಸುದ್ದಿ ಇದ್ದೇ ಇರುತ್ತಿತ್ತು. ಹೀಗೆ ಜನಮಾನಸದಲ್ಲಿ ಬೆರೆತು ಹೋಗಿರುವ ಪುನೀತ್ ರಾಜ್ ಕುಮಾರ್ ಅವರ ಒಂದನೇ ವರ್ಷದ ಪುಣ್ಯಸ್ಮರಣೆಯಂದು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

   ನೆನಪಿನ ಸಾಗರದಲ್ಲಿ 1 ವರ್ಷ

  ನೆನಪಿನ ಸಾಗರದಲ್ಲಿ 1 ವರ್ಷ

  ಪುನೀತ್ ಒಂದನೇ ವರ್ಷದ ಪುಣ್ಯಸ್ಮರಣೆಯಂದು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನೆನಪಿನ ಸಾಗರದಲ್ಲಿ 1 ವರ್ಷ ಎಂಬ ವಿಶೇಷ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಬರೆದುಕೊಂಡಿದ್ದಾರೆ.

   ಬೆಂಬಲಕ್ಕೆ ಧನ್ಯವಾದ ತಿಳಿಸಿದ ಅಶ್ವಿನಿ

  ಬೆಂಬಲಕ್ಕೆ ಧನ್ಯವಾದ ತಿಳಿಸಿದ ಅಶ್ವಿನಿ

  ಇನ್ನು ಅಪ್ಪು ಅವರ ಕನಸು ಮತ್ತು ಮೌಲ್ಯಗಳನ್ನು ಸದಾ ಜೀವಂತವಾಗಿಡಲು ಹಲವಾರು ಕುಟುಂಬ ಸದಸ್ಯರು, ಅಪ್ಪು ಅವರ ಸ್ನೇಹಿತರು ಹಾಗೂ ಅಪ್ಪು ಅವರ ಅಭಿಮಾನಿಗಳಿಂದ ತಾವು ಪಡೆದ ಬೆಂಬಲದ ಶಕ್ತಿಯೇ ದಾರಿ ಮಾಡಿಕೊಟ್ಟಿತು ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ. ಹಾಗೂ ಅಪ್ಪು ಅವರ ಮೇಲೆ ಇರುವ ಪ್ರೀತಿ ಮತ್ತು ಗೌರವದಿಂದ ಸದಾಕಾಲ ಅವರನ್ನು ಜೀವಂತವಾಗಿರಿಸಿದ ಎಲ್ಲರಿಗೂ ನನ್ನ ನಮನಗಳು ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಬರೆದುಕೊಂಡಿದ್ದಾರೆ.

   ಅಪ್ಪು ಸ್ಮರಿಸಿದ ತಾರೆಯರು, ರಾಜಕಾರಣಿಗಳು

  ಅಪ್ಪು ಸ್ಮರಿಸಿದ ತಾರೆಯರು, ರಾಜಕಾರಣಿಗಳು

  ಇನ್ನು ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಹಲವಾರು ಸಿನಿಮಾ ತಾರೆಯರು ಹಾಗೂ ರಾಜಕೀಯ ವ್ಯಕ್ತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ಖ್ಯಾತ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮತ್ತೊಮ್ಮೆ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ಅಭಿಮಾನಿಗಳು ನೆಚ್ಚಿನ ನಟನನ್ನು ಕಳೆದುಕೊಂಡು ವರ್ಷವಾಯಿತು ಎಂಬ ಬೇಸರವನ್ನು ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯಾಗಿ ಹೊರಹಾಕಿದ್ದಾರೆ.

  English summary
  Ashwini Puneethrajkumar thanked people who supported her on tough times. Read on
  Saturday, October 29, 2022, 15:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X