For Quick Alerts
  ALLOW NOTIFICATIONS  
  For Daily Alerts

  'ಯಾರ್ಯಾರೊ ಹೀರೋಗಳಾಗುತ್ತಿದ್ದಾರೆ' ಎಂದ ಜಗ್ಗೇಶ್‌ ಮಾತಿಗೆ ಸಚಿವ ಬಿಸಿ ಪಾಟೀಲ್ ಆಕ್ಷೇಪ

  |

  ಕೆಲವು ದಿನಗಳ ಹಿಂದೆ ಬಿಜೆಪಿ ವತಿಯಿಂದ ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ 'ಮಾಧ್ಯಮ-ಮಂಥನ' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಗ್ಗೇಶ್ ಅವರು, 'ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ. ಯುವಕರು ಹೆಚ್ಚು ಸಿನಿಮಾ ನೋಡಬೇಡಿ' ಎಂದಿದ್ದರು. ಜಗ್ಗೇಶ್ ಅವರ ಈ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು.

  ಅಪಾರ್ಥ ಮಾಡಿಕೊಂಡ ಬಿಸಿ ಪಾಟೀಲ್ ಗೆ ಜಗ್ಗೇಶ್ ಅರ್ಥ ಮಾಡಿಸಿದ್ದು ಹೇಗೆ? | Filmibeat Kannada

  ಜಗ್ಗೇಶ್ ಅವರ ಈ ಹೇಳಿಕೆಗೆ ಸ್ವಪಕ್ಷದವರೇ ಆದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಜಗ್ಗೇಶ್‌ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಸಹ ಮಾಡಿದ್ದಾರೆ.

  ಗ್ರಾಮೀಣ ಪ್ರದೇಶದಿಂದ ಬಂದಂತಹ ನಮ್ಮ ನಿಮ್ಮಂತಹವರು ಚಿತ್ರರಂಗಕ್ಕೆ ಹೊಸ ಪೀಳಿಗೆ ಬರಬೇಕು. ಹೊಸ ತಲೆಮಾರಿನ ಪ್ರತಿಭೆಗಳನ್ನು ಹೊಸಬರನ್ನು ಹಾಗೂ ಅವರ ಕಲೆಯನ್ನು ಪ್ರೋತ್ಸಾಹಿಸಬೇಕು, ಅವರನ್ನು ಬೆಳೆಸಬೇಕೇ ಹೊರತು ಹೊಸ ಪ್ರತಿಭೆಗಳನ್ನು ನಿರುತ್ಸಾಹಗೊಳಿಸಬಾರದು. ಆದರೆ ನೀವು "ಯಾರ್ಯಾರೋ ಹೀರೋಗಳು ಬರ್ತಾರೆ, ಅವರ ಸಿನಿಮಾ ನೋಡ್ಬೇಡಿ" ಎಂದು ಹೇಳಿರುವುದು ತಪ್ಪು. ಹಳೆಯ ಚಿಗುರು ಹೋಗದೇ ಹೊಸ ಚಿಗುರು ಬರಲು ಸಾಧ್ಯವಿಲ್ಲ. ಅದರಂತೆಯೇ ಚಿತ್ರರಂಗಕ್ಕೆ ಬರುವ ಹೊಸಬರನ್ನು ನಾವು ಪ್ರೋತ್ಸಾಹಿಸಲೇಬೇಕು. ಅವರನ್ನು ತಿರಸ್ಕರಿಸುವುದಾಗಲೀ ನಿರುತ್ಸಾಹಗೊಳಿಸುವುದಾಗಲೀ ಮಾಡಬಾರದು. ಅದರಲ್ಲಿಯೂ ಗ್ರಾಮೀಣ ಪ್ರದೇಶದಿಂದ ಬಂದಂತವರು'' ಎಂದಿದ್ದಾರೆ ಬಿಸಿ ಪಾಟೀಲ್.

  ನಿರುತ್ಸಾಹಗೊಳಿಸುವ ಹೇಳಿಕೆ ಕೊಡಬೇಡಿ: ಜಗ್ಗೇಶ್‌ಗೆ ಬಿಸಿ ಪಾಟೀಲ್ ಮನವಿ

  ನಿರುತ್ಸಾಹಗೊಳಿಸುವ ಹೇಳಿಕೆ ಕೊಡಬೇಡಿ: ಜಗ್ಗೇಶ್‌ಗೆ ಬಿಸಿ ಪಾಟೀಲ್ ಮನವಿ

  ಮುಂದುವರೆದು, ''ಜಗ್ಗೇಶ್ ಅವರೇ ದಯವಿಟ್ಟು ಇಂತಹ ನಿರುತ್ಸಾಹಗೊಳಿಸುವ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ನೀಡಬೇಡಿ. ನಾನೊಬ್ಬ ಪುಟ್ಟ ಕಲಾವಿದನಾಗಿ ನಿಮ್ಮೊಂದಿಗೆ ಬೆಳೆದವನಾದ್ದರಿಂದ ನಿಮಗೆ ಈ ವಿಷಯವನ್ನು ಗಮನಕ್ಕೆ ತರುತ್ತಿದ್ದೇನೆ' ಎಂದಿದ್ದಾರೆ ಬಿಸಿ ಪಾಟೀಲ್.

  ನಮ್ಮ ನಿಮ್ಮ ಮಕ್ಕಳು ಚಿತ್ರರಂಗಕ್ಕೆ ಬರಬೇಕು: ಬಿಸಿ ಪಾಟೀಲ್

  ನಮ್ಮ ನಿಮ್ಮ ಮಕ್ಕಳು ಚಿತ್ರರಂಗಕ್ಕೆ ಬರಬೇಕು: ಬಿಸಿ ಪಾಟೀಲ್

  ''ನಮ್ಮ ನಿಮ್ಮ ಮಕ್ಕಳು ಸಹ ಚಿತ್ರರಂಗಕ್ಕೆ ಬರಬೇಕು. ಯುವಕರನ್ನು ಹೊಸಬರನ್ನು ಪ್ರೋತ್ಸಾಹಿಸಬೇಕೇ ಹೊರತು ಈ ರೀತಿ ಹೊಸ ಪ್ರತಿಭೆಗಳನ್ನು, ಹೊಸ ಕಲಾವಿದರನ್ನು ನಿರುತ್ಸಾಹಗೊಳಿಸುವಂತಹ ಹೇಳಿಕೆಗಳನ್ನು ನೀಡಬಾರದು ಎಂಬುದು ನನ್ನ ವಿನಂತಿ'' ಎಂದಿದ್ದಾರೆ ಬಿ.ಸಿ.ಪಾಟೀಲ್.

  ದರ್ಶನ್ ಅಭಿಮಾನಿಗಳು-ಜಗ್ಗೇಶ್ ನಡುವೆ ತಿಕ್ಕಾಟ

  ದರ್ಶನ್ ಅಭಿಮಾನಿಗಳು-ಜಗ್ಗೇಶ್ ನಡುವೆ ತಿಕ್ಕಾಟ

  ತಿಂಗಳ ಹಿಂದಷ್ಟೆ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ತಿಕ್ಕಾಟವಾಗಿತ್ತು. ಈಗ ಜಗ್ಗೇಶ್ ಅವರ 'ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ' ಎಂಬ ಹೇಳಿಕೆಯನ್ನು ಆ ಘಟನೆಯೊಂದಿಗೆ ಸಮೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪೋಸ್ಟ್‌ಗಳನ್ನು ಹಾಕಿದ್ದರು.

  ನಿನ್ನೆಯಷ್ಟೆ ಬಿ.ಸಿ.ಪಾಟೀಲ್ ಮತ್ತು ದರ್ಶನ್ ಭೇಟಿಯಾಗಿದ್ದರು

  ನಿನ್ನೆಯಷ್ಟೆ ಬಿ.ಸಿ.ಪಾಟೀಲ್ ಮತ್ತು ದರ್ಶನ್ ಭೇಟಿಯಾಗಿದ್ದರು

  ಸಚಿವ ಬಿ.ಸಿ.ಪಾಟೀಲ್ ಹಾಗೂ ನಟ ದರ್ಶನ್ ಅತ್ಯಾಪ್ತರು. ಅದೇ ಕಾರಣದಿಂದ ಬಿ.ಸಿ.ಪಾಟೀಲ್ ಜಗ್ಗೇಶ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿದ್ದಿರಬಹುದು ಎನ್ನುವ ಗುಮಾನಿಯನ್ನು ತಳ್ಳಿಹಾಕುವಂತಿಲ್ಲ. ವಿಶೇಷವೆಂದರೆ ನಿನ್ನೆಯಷ್ಟೆ ಬಿ.ಸಿ.ಪಾಟೀಲ್ ಹಾಗೂ ದರ್ಶನ್ ಪರಸ್ಪರ ಭೇಟಿ ಆಗಿದ್ದರು.

  English summary
  Minister and actor BC Patil disagreed with Jaggesh's statement on new heroes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X