»   » ಈ ವರ್ಷ ಅತಿ ಹೆಚ್ಚು ಸೌಂಡ್ ಮಾಡಿದ ಡೈಲಾಗ್ ಯಾವುದು?

ಈ ವರ್ಷ ಅತಿ ಹೆಚ್ಚು ಸೌಂಡ್ ಮಾಡಿದ ಡೈಲಾಗ್ ಯಾವುದು?

Posted By:
Subscribe to Filmibeat Kannada

ಡೈಲಾಗ್ಸ್, ಕೌಂಟರ್ ಡೈಲಾಗ್ ಗಳಿಗೆ ಕನ್ನಡ ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಇದೆ. ಒಂದಕ್ಕಿಂತ ಒಂದು ಮಾಸ್ ಡೈಲಾಗ್ ಗಳನ್ನ ಸ್ಟಾರ್ ನಟರ ಬಾಯಲ್ಲಿ ಕೇಳಿ ಅಭಿಮಾನಿಗಳು ಖುಷಿ ಪಡ್ತಾರೆ.

ಇತ್ತೀಚಿನ ಸಿನಿಮಾಗಳಲ್ಲಂತೂ ಮಾಸ್ ಡೈಲಾಗ್, ಪಂಚಿಂಗ್ ಡೈಲಾಗ್ ಗಳು ಇರಲೇಬೇಕು. ಅವುಗಳಲ್ಲಿ ಕೆಲವೊಂದು ಕೌಂಟರ್ ಡೈಲಾಗ್ ಗಳು ಇರುತ್ತೆ. ಅಂದ್ರೆ, ಒಬ್ಬ ನಟ ಹೇಳಿದ್ದ ಡೈಲಾಗ್ ಗೆ ಪ್ರತಿಯಾಗಿ ಈ ಡೈಲಾಗ್ ಹೇಳಿರುವಂತೆ ಭಾಸವಾಗುತ್ತೆ.

ಈ ವರ್ಷದಲ್ಲಿ ನಡೆದ 23 ವಿವಾದಗಳನ್ನ ಯಾರೂ ಮರೆಯಲ್ಲ

ದರ್ಶನ್, ಸುದೀಪ್, ಪುನೀತ್, ಯಶ್ ಸಿನಿಮಾಗಳಂತೂ ಈ ರೀತಿಯ ಪಂಚಿಂಗ್ ಡೈಲಾಗ್ ಗಳು ಸಾಮಾನ್ಯ. ಹಾಗಿದ್ರೆ, ಈ ವರ್ಷ ಹೆಚ್ಚು ಸುದ್ದಿಯಾದ ಡೈಲಾಗ್ ಗಳ ಕಡೆ ಒಂದು ಕಣ್ಣಾಯಿಸಿ ಬರೋಣ. ಯಾವೆಲ್ಲಾ ಖಡಕ್ ಡೈಲಾಗ್ ಗಳು ವೈರಲ್ ಆಯ್ತು? ಎಂಬ ಪಟ್ಟಿ ಇಲ್ಲಿದೆ. ನಿಮಗೆ ಯಾವ ಡೈಲಾಗ್ ಇಷ್ಟವೆಂದು ಕಾಮೆಂಟ್ ಮಾಡಿ ತಿಳಿಸಿ. ಮುಂದೆ ಓದಿ....

ರಾಜಕುಮಾರ ಡೈಲಾಗ್

ಡೈಲಾಗ್ 1: ನಮ್ಮ ತಂದೆ ಯಾವಾಗಲು ಹೇಳೋರು ಜನರನ್ನ ಆಳೋರಿಗೆ ಪೊಲಿಟಿಕಲ್ ಪವರ್ ಬೇಕು ಅಂತ. ನಾವು ಜನರನ್ನ ಪ್ರೀತಿಸೋರು ನಮಗೆ ವಿಲ್ ಪವರ್ ಇದ್ರೆ ಸಾಕು.

ಡೈಲಾಗ್ 2: ನಾನು ಹೊಡೆದ್ರೆ ನಾಳೆ ಪೇಪರ್ ನಲ್ಲಿ ಅದೇ ಹೆಡ್ ಲೈನ್ಸ್

ಈ ವರ್ಷ ಕನ್ನಡದ 'ಸ್ಟಾರ್' ನಟಿಯ ಪಟ್ಟ ಯಾರಿಗೆ?

ಹೆಬ್ಬುಲಿ ಡೈಲಾಗ್

''ಹುಲಿ ಸೈಲಾಂಟ್ ಆಗಿದೆ ಅಂದ ಮಾತ್ರಕ್ಕೆ ಸುಸ್ತಾಗಿದೆ ಅಂತ ಅರ್ಥ ಅಲ್ಲ, ಬೇಟೆ ಆಡೋಕೆ ರೆಡಿಯಾಗಿದೆ ಅಂತ ಅರ್ಥ''

ತಾರಕ್ ಡೈಲಾಗ್

''ಉಸಿರಾಡೋ ಗಾಳಿ ಬೇರೆ ಆದ್ರು, ಮೈಯಲ್ಲಿ ಹರಿಯುತ್ತಿರೋದು ಕನ್ನಡ ರಕ್ತ ತಾನೆ'' ಮತ್ತು ''ನೋ ಡಿಸ್ಕಷನ್ಸ್, ಒನ್ಲಿ ಆಕ್ಷನ್''

ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಡೈಲಾಗ್

''ಶಿವ ಅಂದ್ರೆ ಭಕ್ತಿ ಇರ್ಬೇಕು. ರಾಜ ಶಕ್ತಿ ಇರ್ಬೇಕು. ಇವೆರೆಡು ಇರೋ ನನ್ನ ಎದುರಾಕ್ಕೋಳ್ಳೆಕೆ ಎರಡು ಗುಂಡಿಗೆ ಇರ್ಬೇಕು''

2017ರಲ್ಲಿ ಹವಾ ಸೃಷ್ಟಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟರು

ಭರ್ಜರಿ ಡೈಲಾಗ್

''ಚಿರತೆ ಬಂದ್ರೆ ವೇಗ ಇರುತ್ತೆ, ಹುಲಿ ಬಂದ್ರೆ ಗಾಂಭೀರ್ಯ, ಸಿಂಹ ಬಂದ್ರೆ ಘರ್ಜನೆ ಇರುತ್ತೆ. ಈ ಸೂರ್ಯ ಬಂದ್ರೆ ಈ ಮೂರು ಇರುತ್ತೆ''

'ಭರ್ಜರಿ' ಡೈಲಾಗ್ 2

''ಬೇಡ ಈ ಹೊಡೆದಾಟ ಬೇಡ ಈ ಜಗಳ ನಿಲ್ಲಿಸು, ಈ ದ್ವೇಷ ಸಾಕು ಅಂತೀನಿ. ಇಲ್ಲ ಬಿಡಲ್ಲ, ಹೊಡೆದಾಡ್ಬೇಕು ನಂದೇ ಹವಾ, ನಂದೇ ಹವಾ ಅಂತೀರಾ. ಇಲ್ಲೆ, ಈಗಲೇ, ಇವಗಲೇ ಡಿಸೈಡ್ ಮಾಡೋಣ, ಯುದ್ಧ ನಿಲ್ಲಿಸೋಕೆ ಯುದ್ಧನೇ ಮಾಡ್ಬೇಕು ಅಂದ್ರೆ ಯುದ್ಧನೇ ಮಾಡೋಣ ಬಾ....''

'ಪಟಾಕಿ' ಡೈಲಾಗ್

''ಪಟಾಕಿ ಬಿಸಿನೆಸ್ ಮಾಡ್ಕೊಂಡೇ ಫಿಲ್ಡ್ ಗೆ ಎಂಟ್ರಿ ಕೊಟ್ದಿದ್ದು ನಾನು. ಪಟಾಕಿನೂ ನಂದೇ, ಸೌಂಡ್ ನಂದೇ''

2017ರಲ್ಲಿ ಒಂದಾದ ಮತ್ತು ಬೇರ್ಪಟ್ಟ ಸಿನಿಮಾ ತಾರೆಯರು

ಅಂಜನಿಪುತ್ರ ಡೈಲಾಗ್

''ಹಾರನಾ... ಜೈಕಾರನಾ... ನಮಗೆ ನಾವೇ ಹಾಕಿಸ್ಕೋಬಾರದು. ಜನ ಅರಿಸಿದ್ರೆ ಬೆಳವಣಿಗೆ, ಜನ ಮೆರಸಿದ್ರೆ ಮೆರವಣಿಗೆ''

'ಮಫ್ತಿ' ಡೈಲಾಗ್

''ಸುತ್ತ ಸಮುದ್ರ, ಮಧ್ಯದಲ್ಲಿ ಕಾಡು. ಅಲ್ಲಿ ಒಬ್ಬನಿಗೆ ಹತ್ತು ತಲೆಗಳು. ಅವನ್ನ ರಾವಣ ಅಂತ ಕರೀತಾರೆ. ಸುತ್ತ ಬೆಟ್ಟಗಳು ಮಳೆಗಿಂತ ಜಾಸ್ತಿ ರಕ್ತದಲ್ಲೆ ಒದ್ದೆಯಾಗಿರೋ ಭೂಮಿ. ಅಲ್ಲಿ ಒಬ್ಬನಿಗೆ ಒಂದೇ ತಲೆ. ಅವನ್ನ ರಣಗಲ್ಲು ಅಂತಾರೆ''

ಮಫ್ತಿ ಡೈಲಾಗ್

''ಇವನ್ಯಾರೋ ನಿನ್ ಜೊತೆ ಕೈ ಮಿಲಸಾಯಿದ್ನಂತೆ, ಯಾವ ಕೈ ಅಂತ ಕ್ಲಾರಿಟಿ ಇಲ್ದೆ ಹುಡುಗ್ರು ಎರಡು ಕೈ ತಂದಿದ್ದಾರೆ''

English summary
Best-known dialogues in Kannada films in this year.. Listed some Best Dialogues throughout the year 2017. What's your favorite dialogue?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X