ಕರ್ನಾಟಕದ ನೆರವಿಗೆ ನಿಂತ ಭೂಮಿ ಪಡ್ನೇಕರ್ ಮತ್ತು ಕಪಿಲ್ ಶರ್ಮ

ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಅನೇಕ ಸಿನಿ ಸೆಲೆಬ್ರಿಟಿಗಳು ನೆರವಿಗೆ ಧಾವಿಸಿದ್ದಾರೆ. ಆಕ್ಸಿಜನ್, ಬೆಡ್, ವೆಂಟಿಲೇಟರ್, ಆಹಾರ ಸೇರಿದಂತೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಮತ್ತು ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಒಟ್ಟಾಗಿ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ.

ಈಗಾಗಲೇ ದೇಶದಾದ್ಯಂತ ಕೊರೊನಾ ರೋಗಿಗಳ ಸಹಾಯ ನಿಂತಿರುವ ಭೂಮಿ ಮತ್ತು ಕಪಿಲ್ ಈಗ ಕರ್ನಾಟಕದ ಕಡೆ ಧಾವಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಕರ್ನಾಟಕದ ರೋಗಿಗಳ ನೆರವಿಗೆ ಬಂದಿದ್ದಾರೆ. ಇಬ್ಬರು ಶ್ರೀ ರವಿಶಂಕರ್ ಅವರ ಮಿಷನ್ ಜಿಂದಗಿ ಯೊಂದಿಗೆ ಕೈ ಜೋಡಿಸಿದ್ದು ಕರ್ನಾಟಕದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಳ ಸೇರಿದಂತೆ ಇನ್ನು ಕೆಲವು ಆಸ್ಪತ್ರೆಗಳಿಗೆ ಅಕ್ಸಿಜನ್ ಬಸ್ ಗಳನ್ನು ಕಳುಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಭೂಮಿ ಪಡ್ನೇಕರ್, 'ಮಾರಕ ಕೊರೊನಾ ಎರಡನೇ ಅಲೆ ಭಾರತದ ಹಳ್ಳಿಗಳಿಗೆ ನುಗ್ಗಿದೆ. ನೆರವು ಕೇವಲ ನಗರಗಳಿಗೆ ಸೀಮಿತವಾಗಬಾರದು. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗುತ್ತಿದೆ. ಈ ಸಮಯದಲ್ಲಿ ಆಮ್ಲಜನಕ ಒದಗಿಸುವುದು ಅವಶ್ಯಕವಾಗಿದೆ. ನಾವು ಗ್ರಾಮೀಣ ಭಾರತದತ್ತ ನಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದೇವೆ ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳೊಂದಿಗೆ ಪ್ರಾರಂಭಿಸುತ್ತಿದ್ದೇವೆ' ಎಂದಿದ್ದಾರೆ.

Bhumi Pednekar and Kapil Sharma supply oxygen for Karnataka

'ಬಸ್ ನಲ್ಲಿ ಆಮ್ಲಜನಕ ಸಾಂದ್ರಕವನ್ನು ಅಳವಿಸಿದ್ದೇವೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ರೋಗಿಗಳು ಆಸ್ಪತ್ರೆಯ ಬೆಡ್ ಗಾಗಿ ಹೊರಗೆ ಕಾಯುತ್ತಿರುವ ಸಂದರ್ಭದಲ್ಲಿ ನಮ್ಮ ಆಕ್ಸಿಜನ್ ಒದಗಿಸಲಾಗುತ್ತದೆ. ಪ್ರಕರಣಗಳು ಹೆಚ್ಚುತ್ತಿರುವ ಸಣ್ಣ ಪಟ್ಟಣಗಳಲ್ಲಿ ಆಸ್ಪತ್ರೆಯ ಭಾರ ಹಂಚಿಕೊಳ್ಳಲು ನಮ್ಮ ಬಸ್ ಸಹಾಯ ಮಾಡುತ್ತವೆ. ಕಪಿಲ್ ಜೊತೆ ನಾವು ಕೂಡ ಕೈ ಜೋಡಿಸಿದ್ದೇವೆ' ಎಂದಿದ್ದಾರೆ.

ಸದ್ಯ ಕರ್ನಾಟಕ ಜನರ ನೆರವಿಗೆ ನಿಂತಿದ್ದಾರೆ. ಈ ಸೇವೆ ಎಲ್ಲಾ ರಾಜ್ಯಗಳಿಗೂ ಮುಂದು ವರೆಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಭೂಮಿ ಪಡ್ನೇಕರ್ ಹೇಳಿದ್ದಾರೆ.

Recommended Video

ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada

More from Filmibeat

English summary
Bollywood stars Bhumi Pednekar and Kapil Sharma supply oxygen for Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X