For Quick Alerts
  ALLOW NOTIFICATIONS  
  For Daily Alerts

  ಮೊದಲ ಸಲ ವೋಟ್ ಮಾಡಿದ ನಿವೇದಿತಾ: 'ಗೊಂಬೆ'ಗೆ ಡಬಲ್ ಖುಷಿ

  By Bharath Kumar
  |
  ನಿವೇದಿತಾ ಗೌಡ ಗೆ ಇಂದು ಡಬಲ್ ಖುಷಿ !!! | Filmibeat Kannada

  ಬಿಗ್ ಬಾಸ್ ಕನ್ನಡ ಸೀಸನ್ 5 ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಮೊದಲ ಸಲ ಮತ ಚಲಾಯಿಸಿದ್ದಾರೆ. ಮೈಸೂರು ನಗರದ ದಟ್ಟಗಳ್ಳಿ ಕನಕದಾಸ ನಗರದಲ್ಲಿ ತಮ್ಮ ಫಸ್ಟ್ ವೋಟ್ ಹಾಕಿದ್ದಾರೆ.

  ವಿಶೇಷ ಅಂದ್ರೆ, ನಿವೇದಿತಾ ಗೌಡ ಅವರು ಮೈಸೂರು ನಗರದ ಚುನಾವಣೆ ರಾಯಭಾರಿ ಕೂಡ ಆಗಿದ್ದಾರೆ. ಹೀಗಾಗಿ, ತಮ್ಮ ಮತದಾನದ ಕರ್ತವ್ಯವನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

  ಮೊದಲ ಮತದಾನ ಮಾಡಿದ ರಮೇಶ್ ಅರವಿಂದ್ ಮಗಳುಮೊದಲ ಮತದಾನ ಮಾಡಿದ ರಮೇಶ್ ಅರವಿಂದ್ ಮಗಳು

  ಅಂದ್ಹಾಗೆ, ನಿವೇದಿತಾ ಗೌಡ ಅವರಿಗೆ ಈ ದಿನ ಡಬಲ್ ಖುಷಿ ಅಂತಾನೇ ಹೇಳ್ಬಹುದು. ಯಾಕಂದ್ರೆ, ಮೇ 12 ನಿವೇದಿತಾ ಅವರ ಹುಟ್ಟುಹಬ್ಬ ಕೂಡ ಇದೆ.

  ಮೇ 12, 2000 ದಲ್ಲಿ ಹುಟ್ಟಿರುವ ನಿವೇದಿತಾಗೆ ಈಗ ವಯಸ್ಸು 18. ಹೀಗಾಗಿ, ಇಂದು ಮೊದಲ ಮತದಾನ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

  ವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರು ವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರು

  ಇಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ರಾಜ್ಯದ 222 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮೇ 15 ರಂದು ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.

  English summary
  Bigg boss kannada season 5 contestant niveditha gowda voted first time. she voted in mysore .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X