For Quick Alerts
  ALLOW NOTIFICATIONS  
  For Daily Alerts

  ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಪ್ರಥಮ್, ಕಾರಣವೇನು?

  |
  ಯಡಿಯೂರಪ್ಪ ಭೇಟಿ ಮಾಡಿದ ಬಿಗ್​​ಬಾಸ್ ಪ್ರಥಮ್..! | FILMIBEAT KANNADA

  ರಾಜ್ಯ ರಾಜಕೀಯದಲ್ಲಿ ಸದ್ಯ 'ಆಪರೇಷನ್' ಭೀತಿ ಹೆಚ್ಚಾಗಿದೆ. ಯಾವಾಗ ಏನಾಗುತ್ತೋ ಎಂಬ ಆತಂಕ ಕಾಡ್ತಿದೆ. ಹೀಗಿರುವಾಗ ರಾಜಕೀಯ ನಾಯಕರನ್ನ ಯಾರೇ ಭೇಟಿ ಮಾಡಿದ್ರು ಅದು ವಿಶೇಷವಾಗಿಯೇ ಕಾಣಿಸುತ್ತೆ. ಇದೀಗ, ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪನ್ನ ಅವರನ್ನ ಭೇಟಿ ಮಾಡಿದ್ದಾರೆ.

  ನಿನ್ನೆ ಸಂಜೆ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಬಂದ ಪ್ರಥಮ್​ ಬಿಎಸ್​ವೈ ಅವರನ್ನು ಭೇಟಿ ಮಾಡಿದರು. ಪ್ರಥಮ್​ ಮೊದಲ ಬಾರಿಗೆ ನಿರ್ದೇಶನ ಹಾಗೂ ನಟನೆ ಮಾಡಿರುವ 'ನಟ ಭಯಂಕರ' ಚಿತ್ರದ ಟೀಸರ್ ತೋರಿಸಿದರು. ಟೀಸರ್ ನೋಡಿದ ಯಡಿಯೂರಪ್ಪ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಫಿನಾಲೆ ಗ್ಯಾಪ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಗ್ರಾಂಡ್ ಪಾರ್ಟಿ ಕೊಟ್ಟ ಕಿಚ್ಚ ಸುದೀಪ್

  ಟೀಸರ್ ನೋಡಿದ ಬಳಿಕ ಮಾತನಾಡಿದ ಯಡಿಯೂರಪ್ಪ ಪ್ರಥಮ್ ಬಹಳ ಶಿಸ್ತಿನಿಂದ ಸಿನಿಮಾ ಮಾಡ್ತಾ ಇದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ನಟಭಯಂಕರ ಚಿತ್ರದಲ್ಲಿ ಸಾಯಿಕುಮಾರ್ ಕೂಡ ಅಭಿನಯಿಸಿದ್ದು, ಪ್ರಥಮ್ ಹಾಗೂ ಸಾಯಿ ಕುಮಾರ್ ಜೋಡಿ ಬಗ್ಗೆಯೂ ಬಿಎಸ್ ವೈ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  'ಬಿಗ್ ಬಾಸ್' ಮನೆಯಿಂದ ಧನರಾಜ್ ಹೊರಬಂದಿದ್ದಕ್ಕೆ ಪ್ರಥಮ್ ಬೇಸರ.!

  ಈಗಾಗಲೇ ಪ್ರಥಮ್ ಅಭಿನಯಿಸಿದ್ದ​ ದೇವರಂತ ಮನುಷ್ಯ, ಎಂಎಲ್ಎ ಚಿತ್ರಗಳು ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ, 'ನಟ ಭಯಂಕರ' ಚಿತ್ರದ ಮೂಲಕ ಮತ್ತೆ ಬರ್ತಿದ್ದಾರೆ. ಪ್ರಥಮ್ ಜೊತೆ ಸಾಯಿಕುಮಾರ್, ಶಂಕರ್ ಅಶ್ವಥ್ ಹಾಗೂ ಕುರಿ ಪ್ರತಾಪ್, ರನ್ ಆಂಟನಿ ಖ್ಯಾತಿಯ ಸುಶ್ಮಿತಾ ಜೋಷಿ, ನಿಹಾರಿಕಾ ಶೆಣೈ ಕೂಡ ನಟಿಸಿದ್ದಾರೆ.

  ಮೊದಲು ನಟಭಯಂಕರ ಚಿತ್ರದ ಪೋಸ್ಟರ್ ಬರುತ್ತೆ, ಅದಾದ ಬಳಿಕ ತಕ್ಷಣವೇ ಟೀಸರ್ ಕೂಡ ಬರುತ್ತೆ ಎಂದು ಸ್ವತಃ ಪ್ರಥಮ್ ತಿಳಿಸಿದ್ದಾರೆ.

  English summary
  Big Boss Pratham has meet former chief minister BS Yeddyurappa. pratham visited BS Yeddyurappa's Dollars colony residence yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X