For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಸ್ಪರ್ಧಿಗಳ ಹೊಸ ಸಿನಿಮಾ: ಆಕ್ಷನ್ ಕಟ್ ಹೇಳ್ತಾರಂತೆ ಚೈತ್ರಾ ಕೋಟೂರ್

  |

  ಬಿಗ್ ಬಾಸ್ ಮುಗಿದ ಬಳಿಕ ಮುಂದೇನು? ಬಿಗ್ ಬಾಸ್ ಮನೆಯಲ್ಲಿ ಆತ್ಮೀಯರಾಗುವ ಸ್ಪರ್ಧಿಗಳು ಒಂದಷ್ಟು ಸಮಯ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಬಳಿಕ ತಮ್ಮ ತಮ್ಮ ಕೆಲಸಗಳಿಗೆ ಮರಳುತ್ತಾರೆ. ಆದರೆ ಕನ್ನಡ ಬಿಗ್ ಬಾಸ್ 7 ಸ್ಪರ್ಧಿಗಳಲ್ಲಿ ಒಂದಷ್ಟು ಮಂದಿ ಹೊಸ ಆಲೋಚನೆ ಮಾಡಿದ್ದಾರೆ.

  ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ನಟಿ, ಬರಹಗಾರ್ತಿ ಚೈತ್ರಾ ಕೋಟೂರ್ ಬಣ್ಣದ ಬದುಕಿನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾದ ಸಿನಿಮಾಕ್ಕೆ ಚೈತ್ರಾ ಕಥೆ ಹೊಸೆಯುತ್ತಿದ್ದಾರೆ. ಕಥೆ, ಕವಿತೆಗಳ ಮೂಲಕ ಗಮನ ಸೆಳೆದಿರುವ ಅವರು ಕಥೆ, ಚಿತ್ರಕಥೆ ಪೂರ್ಣಗೊಂಡ ಬಳಿಕ ಹೊಸ ಅವತಾರ ತಾಳಲಿದ್ದಾರೆ. ನಿಜ. ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋಟೂರ್, ನಿರ್ದೇಶಕಿಯಾಗಲು ಹೊರಟಿದ್ದಾರೆ. ಕ್ಯಾಮೆರಾ ಹಿಂದೆಯೂ ಕೆಲಸ ಮಾಡಿದ ಅನುಭವ ಅವರಿಗಿದೆ. ಅದನ್ನು ಬಳಸಿಕೊಂಡು ಅವರು ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ.

  ಚೈತ್ರ ಕೋಟೂರುಗೆ ಸಿಕ್ತು ರವಿ ಬೆಳಗೆರೆಯಿಂದ 'ಬಿಗ್' ಆಫರ್.! ಏನು ಅಂತ ಗೊತ್ತಾ.?ಚೈತ್ರ ಕೋಟೂರುಗೆ ಸಿಕ್ತು ರವಿ ಬೆಳಗೆರೆಯಿಂದ 'ಬಿಗ್' ಆಫರ್.! ಏನು ಅಂತ ಗೊತ್ತಾ.?

  ಭೂಮಿ ಶೆಟ್ಟಿ, ಶೈನ್ ಶೆಟ್ಟಿ ಫಿಕ್ಸ್

  ಭೂಮಿ ಶೆಟ್ಟಿ, ಶೈನ್ ಶೆಟ್ಟಿ ಫಿಕ್ಸ್

  ಬಿಗ್ ಬಾಸ್‌ನಲ್ಲಿದ್ದ ಸ್ಪರ್ಧಿಗಳು ತಮ್ಮ ದೈನಂದಿನ ಬದುಕಿಗೆ ಹೊಂದಿಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವರು ಚೈತ್ರಾ ಕೋಟೂರ್ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. 'ಕಿನ್ನರಿ' ಭೂಮಿ ಶೆಟ್ಟಿ ಈಗಾಗಲೇ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಶೈನ್ ಶೆಟ್ಟಿ ನಟಿಸುವ ಸಾಧ್ಯತೆ ಇದೆ. ಅವರೊಂದಿಗೆ ಚೈತ್ರಾ ಮಾತುಕತೆ ನಡೆಸಿದ್ದಾರೆ.

  ಬಿಗ್ ಬಾಸ್ ಸ್ಪರ್ಧಿಗಳಲ್ಲೇ ಪಾತ್ರಧಾರಿಗಳು

  ಬಿಗ್ ಬಾಸ್ ಸ್ಪರ್ಧಿಗಳಲ್ಲೇ ಪಾತ್ರಧಾರಿಗಳು

  ಅಂದಹಾಗೆ ಅವರ ಈ ಸಿನಿಮಾ ಕಥೆ ಈಗ ಶುರುಮಾಡಿರುವುದೇನಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿಯೇ ಅವರು ಈ ಕಥೆ ಬಗ್ಗೆ ಭೂಮಿ ಶೆಟ್ಟಿಗೆ ಹೇಳಿದ್ದರಂತೆ. ಬಿಗ್‌ ಬಾಸ್‌ನ ಇತರೆ ಕೆಲವು ಸ್ಪರ್ಧಿಗಳು ಈ ಚಿತ್ರದಲ್ಲಿ ನಟಿಸಿದರೂ ಅಚ್ಚರಿಯಿಲ್ಲ. ಏಕೆಂದರೆ ಅವರ ಸಿನಿಮಾಕ್ಕೆ ಹೊಂದಾಣಿಕೆಯಾಗುವ ಪಾತ್ರಗಳನ್ನು ತಮ್ಮ ಸಹ ಸ್ಪರ್ಧಿಗಳಲ್ಲಿಯೇ ಅವರು ಕಂಡಿದ್ದಾರಂತೆ.

  ಮದ್ವೆ ಆಗಿದೆ ಅಂತ 'ಬಿಗ್' ಮನೆಯಲ್ಲಿ ಚೈತ್ರಾ ಕೋಟೂರ್ ಹೇಳಿದ್ದೇಕೆ?ಮದ್ವೆ ಆಗಿದೆ ಅಂತ 'ಬಿಗ್' ಮನೆಯಲ್ಲಿ ಚೈತ್ರಾ ಕೋಟೂರ್ ಹೇಳಿದ್ದೇಕೆ?

  ಸಮಾಜದ ಗಂಭೀರ ಸಂಗತಿಗಳು

  ಸಮಾಜದ ಗಂಭೀರ ಸಂಗತಿಗಳು

  ಮೌನೇಶ್ ಬಡಿಗೇರ್ ನಿರ್ದೇಶನದ 'ಸೂಜಿದಾರ' ಸಿನಿಮಾದಲ್ಲಿ ಚೈತ್ರಾ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆ ಅನುಭವದೊಂದಿಗೆ ಅವರು ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಸಾಮಾಜಿಕ ಸಮಸ್ಯೆಗಳ ಜತೆಗೆ ಹೆಚ್ಚು ಮುಖಾಮುಖಿಯಾಗುವ ಹಂಬಲ ಹೊಂದಿರುವ ಅವರು ಜಾತಿವಾದ, ದೀನದಲಿತರ ಸಮಸ್ಯೆ ಮುಂತಾದವುಗಳನ್ನು ಸಿನಿಮಾ ರೂಪಕ್ಕೆ ಇಳಿಸಲಿದ್ದಾರಂತೆ.

  ಸಿನಿಮಾ ಎನ್ನುವುದು ಕನಸು

  ಸಿನಿಮಾ ಎನ್ನುವುದು ಕನಸು

  ಸಮಾಜದ ಗಂಭೀರ ಸಂಗತಿಗಳನ್ನು ಸಿನಿಮಾ ರೂಪಕ್ಕೆ ಇಳಿಸಿದರೂ ಇದು ಉಪದೇಶದಂತೆ ಇರುವುದಿಲ್ಲ, ಬದಲಾಗಿ ನಿರೂಪಣೆ ವಿಡಂಬನಾತ್ಮಕವಾಗಿ ಇರಲಿದೆ. ಚಿತ್ರರಂಗಕ್ಕೆ ಬಂದ ಸಂದರ್ಭದಿಂದಲೂ ನಿರ್ದೇಶಕಿಯಾಗಬೇಕೆಂಬ ಕನಸಿತ್ತು. ಹಾಗೆಂದು ತೀರಾ ಕಮರ್ಷಿಯಲ್ ಆದ ಸಿನಿಮಾಗಳನ್ನು ಮಾಡುವ ಬದಲು ಜನರ ಆಲೋಚನೆಯನ್ನು ಬದಲಾಯಿಸುವಂತಹ ಸಿನಿಮಾ ಮಾಡಬೇಕು ಎನ್ನುವುದು ತಮ್ಮ ಆಸೆ ಎಂದು ಚೈತ್ರಾ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸಿನಿಮಾ ಇನ್ನೂ ಸ್ಕ್ರಿಪ್ಟ್ ಹಂತದಲ್ಲಿದೆ ಎಂದು ಅವರು 'ಫಿಲ್ಮಿ ಬೀಟ್‌'ಗೆ ತಿಳಿಸಿದ್ದಾರೆ.

  English summary
  Kannada Bigg Boss 7 contestent Chaithra Kotoor to direct a movie. Some other contestents of Bigg Boss may work with her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X