For Quick Alerts
  ALLOW NOTIFICATIONS  
  For Daily Alerts

  ರಾಜ್ಯ ಸಭೆಗೆ ಟಿಕೆಟ್ ಘೋಷಣೆ: ನವರಸ ನಾಯಕನಿಗೆ ಬಂಪರ್ ಆಫರ್!

  |

  ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬು ಚರ್ಚೆಯ ವಿಷಯವಾಗಿತ್ತು. ಜೂನ 10 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಇಬ್ಬರು ಅಭ್ಯರ್ಥಿಗಳು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲ್ಲಿವರೆಗೂ ಯಾರಿಗೆ ಟಿಕೆಟ್ ಸಿಗುತ್ತೆ ಎಂಬ ಕುತೂಹಲವಿತ್ತು. ಆ ಕುತೂಹಲಕ್ಕೀಗ ತೆರೆ ಬಿದ್ದಿದೆ.

  ರಾಜ್ಯಸಭೆಗೆ ಬಿಜೆಪಿ ಇಬ್ಬರಿಗೆ ಟಿಕೆಟ್ ಘೋಷಿಸಿದೆ. ಇವರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮತ್ತೊಮ್ಮೆ ಬಿಜೆಪಿ ಅವಕಾಶ ನೀಡಿದೆ. ಇವರೊಂದಿಗೆ ಅಚ್ಚರಿ ಎಂಬಂತೆ ಬಿಜೆಪಿ ಮುಖಂಡ ಹಾಗೂ ಸ್ಯಾಂಡಲ್‌ವುಡ್‌ ನಟ ನವರಸ ನಾಯಕ ಜಗ್ಗೇಶ್‌ಗೂ ಬಿಜೆಪಿ ಟಿಕೆಟ್ ನೀಡಿದೆ.

  'ಯಾರ್ಯಾರೊ ಹೀರೋಗಳಾಗುತ್ತಿದ್ದಾರೆ' ಎಂದ ಜಗ್ಗೇಶ್‌ ಮಾತಿಗೆ ಸಚಿವ ಬಿಸಿ ಪಾಟೀಲ್ ಆಕ್ಷೇಪ'ಯಾರ್ಯಾರೊ ಹೀರೋಗಳಾಗುತ್ತಿದ್ದಾರೆ' ಎಂದ ಜಗ್ಗೇಶ್‌ ಮಾತಿಗೆ ಸಚಿವ ಬಿಸಿ ಪಾಟೀಲ್ ಆಕ್ಷೇಪ

  ನವರಸ ನಾಯಕನಿಗೆ ಒಲಿದು ಬಂದ ಅದೃಷ್ಟ!

  ಮುಂದಿನ ತಿಂಗಳು ಜೂನ್ 10ರಂದು ವಿಧಾನ ಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇದರಲ್ಲಿ ಜಗ್ಗೇಶ್‌ಗೆ ರಾಜ್ಯಸಭೆಗೆ ಟಿಕೆಟ್ ಘೋಷಿಸಿದೆ. ನಾಮಪತ್ರ ಸಲ್ಲಿಕೆಗೆ ಇನ್ನು ಮೂರು ದಿನವಿರುಗಾಗಲೇ ಬಿಜೆಪಿ ಟಿಕೆಟ್ ಘೋಷಿಸಿದ್ದು, ಜಗ್ಗೇಶ್‌ ಅವರಿಗೆ ಅದೃಷ್ಟ ಒಲಿದು ಬಂದಿದೆ.

  ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ರಾಜ್ಯಸಭೆಗೆ ಟಿಕೆಟ್ ನೀಡಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿತ್ತು ಎನ್ನಲಾಗಿದೆ. ಜಗ್ಗೇಶ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಏನೇ ಇದ್ರೂ, ನವರಸ ನಾಯಕನಿಗೆ ಟಿಕೆಟ್ ಸಿಕ್ಕಿದ್ದು, ಸ್ಯಾಂಡಲ್‌ವುಡ್‌ಗೆ ಮತ್ತಷ್ಟು ಬಲ ಬಂದಂತಾಗಿದೆ.

  ಆಕಾಂಕ್ಷಿಗಳ ಕೈ ತಪ್ಪಿದ ಟಿಕೆಟ್

  ರಾಜ್ಯ ಸಭೆ ಟಿಕೆಟ್‌ಗೆ ಬಿಜೆಪಿಯಿಂದ ಹಲವರು ಆಕಾಂಕ್ಷಿಗಳಾಗಿದ್ದರು ಎನ್ನಲಾಗಿದೆ. ಹೀಗಾಗಿ ಪ್ರಬಲರಿಗೆ ಬಿಜೆಪಿಯಿಂದ ಟಿಕೆಟ್ ಸಿಗದೆ ಜಗ್ಗೇಶ್ ಅವರಿಗೆ ಟಿಕೆಟ್ ಸಿಕ್ಕಿದ್ದು ಚರ್ಚೆಯಾಗುತ್ತಿದೆ. ಬಿಎಲ್ ಸಂತೋಷ್ ಬೆಂಬಲವಿರುವ ನಿರ್ಮಲ್ ಕುಮಾರ್ ಸುರಾನಾ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರಿಗೂ ಟಿಕೆಟ್ ನೀಡಲ್ಲ. ಇನ್ನೊಂದು ಕಡೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬೆಂಬಲಿಗ ಲೆಹರ್ ಸಿಂಗ್ ಅವರಿಗೂ ಟಿಕೆಟ್ ಸಿಕ್ಕಿಲ್ಲ.

  ಮತ್ತೊಂದು ಕಡೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಕೆ ಸಿ ರಾಮಮೂರ್ತಿಯವರಿಗೆ ಟಿಕೆಟ್ ನೀಡಿಲ್ಲ. ಸದ್ಯ ಬಿಜೆಪಿ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಮಾತ್ರ ಘೋಷಣೆ ಮಾಡಿದ್ದು, ಇನ್ನೊಂದು ಟಿಕೆಟ್‌ ಅನ್ನು ಹಾಗೇ ಉಳಿಸಿಕೊಂಡಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಲುವಿನ ಆಧಾರದ ಮೇಲೆ ಮತ್ತೊಬ್ಬ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ.

  ಅಂದ್ಹಾಗೆ ರಾಜ್ಯ ಸಭೆಗೆ ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದ್ದು, ಜೂನ್ 10 ಚುನಾವಣೆ ನಡೆಯಲಿದೆ. ವಿಧಾನ ಸಭೆಯಲ್ಲಿ ಪಕ್ಷಗಳ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಇಬ್ಬರು ಹಾಗೂ ಕಾಂಗ್ರೆಸ್ ಒಂದು ಅಭ್ಯರ್ಥಿಯನ್ನು ಗೆಲ್ಲಿಸಬಹುದಾಗಿದೆ.

  English summary
  BJP offered Rajya Sabha Ticket to Actor Jaggesh, Know More.
  Monday, May 30, 2022, 9:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X