»   » ಬುಲ್ಲೆಟ್ ಪ್ರಕಾಶ್ ಗೆ ಮಾಟ-ಮಂತ್ರ ಮಾಡಿಸಿದವರು ಯಾರು?

ಬುಲ್ಲೆಟ್ ಪ್ರಕಾಶ್ ಗೆ ಮಾಟ-ಮಂತ್ರ ಮಾಡಿಸಿದವರು ಯಾರು?

Posted By:
Subscribe to Filmibeat Kannada

ಹಾಸ್ಯ ನಟ ಬುಲ್ಲೆಟ್ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ದೀರಾ. ನಿನ್ನೆ ಆದ ಅವಘಡದಿಂದ ಆಘಾತಗೊಂಡು ಬುಲ್ಲೆಟ್ ಪ್ರಕಾಶ್ ಇಂದು ಬೆಂಗಳೂರಿನ ಗ್ರೀನ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು.

ಶೂಟಿಂಗ್ ವೇಳೆ ಆದ ಘಟನೆಯನ್ನ ವಿವರಿಸುತ್ತಾ ನಟ ಬುಲ್ಲೆಟ್ ಪ್ರಕಾಶ್ ಭಾವುಕರಾದರು. ಇದರೊಂದಿಗೆ ತಮ್ಮ ಜೀವನದಲ್ಲಾಗುತ್ತಿರುವ ಕೆಲ ಅಹಿತಕರ ಘಟನೆಗಳನ್ನ ಹೊರಹಾಕಿದರು. ನಟ ಬುಲ್ಲೆಟ್ ಪ್ರಕಾಶ್ ಏಳಿಗೆಯನ್ನ ಸಹಿಸದವರು ಮಾಟ-ಮಂತ್ರ ಮಾಡಿಸುತ್ತಿದ್ದಾರಂತೆ. ಹಾಗಂತ ಖುದ್ದು ಬುಲ್ಲೆಟ್ ಪ್ರಕಾಶ್ ಬಾಯ್ಬಿಟ್ಟಿದ್ದಾರೆ. [ಹಾಸ್ಯನಟ ಬುಲ್ಲೆಟ್ ಪ್ರಕಾಶ್ ಪ್ರಾಣಾಪಾಯದಿಂದ ಪಾರು]

black-magic-on-kannada-actor-bullet-prakash

''ನನ್ ಲೈಫ್ ನಲ್ಲಿ ತುಂಬಾ ನಡೆಯುತ್ತಿದೆ. ನನ್ನ ಮನೆ ಮುಂದೆ ಬ್ಲ್ಯಾಕ್ ಮ್ಯಾಜಿಕ್ ಮಾಡ್ತಾರೆ. ನನ್ನ ಕಾರ್ ಕೆಳಗೆ ಏನೇನೋ ಇಡ್ತಾರೆ. ಪ್ರತಿ ದಿನ ಭಯದಲ್ಲೇ ಬದುಕುತ್ತಿದ್ದೇನೆ. ಯಾರು ಇದನ್ನೆಲ್ಲಾ ಮಾಡುತ್ತಿದ್ದಾರೆ ಅವರಿಗೆ ಧೈರ್ಯ ಇಲ್ಲ. ಧೈರ್ಯ ಇದ್ದರೆ ಎದುರಿಗೆ ಬರ್ಲಿ''

''ಹೀಯಾಳಿಸಿ ಮಾತನಾಡುವುದು ನನಗೆ ಇಷ್ಟವಾಗುವುದಿಲ್ಲ. ನಾನು ಹೀರೋ ಮೆಟೀರಿಯಲ್ ಅಲ್ಲ. ಹೀರೋ ಪಿಲ್ಲರ್ ಅಷ್ಟೆ. ನನ್ನ ಕ್ಲೋಸ್ ಮಾಡ್ಬೇಕು ಅಂತ ತುಂಬ ಜನ ಕಾಯ್ತಿದ್ದಾರೆ. ನಾನು ಕಾಂಗ್ರೆಸ್ ಗಿಡ ಇದ್ದಂತೆ. ನನ್ನ ಮುಟ್ಟಬೇಡಿ. ಮುಟ್ಟಿದ್ರೆ ನಿಮಗೆ ಪ್ರಾಬ್ಲಂ. ಕಿತ್ತಿದ್ರೆ ಇನ್ನೂ ದೊಡ್ಡದಾಗಿ ಬೆಳೆಯುತ್ತೇನೆ'' ಅಂತ ಬುಲ್ಲೆಟ್ ಪ್ರಕಾಶ್ ಗುಡುಗಿದರು. [ಸಾವನ್ನ ಗೆದ್ದು ಬಂದು ಗಳಗಳನೆ ಅತ್ತ ಬುಲ್ಲೆಟ್ ಪ್ರಕಾಶ್]

black-magic-on-kannada-actor-bullet-prakash

ಸಾಲದಕ್ಕೆ ನಿನ್ನೆ ನಡೆದ ಅವಘಡವನ್ನೇ ಇಟ್ಟುಕೊಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಅಂತಲೂ ಬುಲ್ಲೆಟ್ ಪ್ರಕಾಶ್ ಹೇಳಿದರು. ''ತುಂಬಾ ನೆಗೆಟಿವ್ ಪ್ರಚಾರ ಆಗೋಯ್ತು ನಿನ್ನೆದು. ನನಗೆ ಬೆಡ್ ರೆಸ್ಟ್ ಬೇಕು. ಇನ್ಮೇಲೆ ನಂಗೆ ಆಕ್ಟಿಂಗ್ ಮಾಡಕ್ಕಾಗಲ್ಲ. ಬ್ರೀಥಿಂಗ್ ಪ್ರಾಬ್ಲಂ ಜಾಸ್ತಿ ಆಗಿದೆ ಅಂತೆಲ್ಲಾ ಹಬ್ಬಿಸಿದರು. ನನ್ನ ಲೈಫ್ ನಲ್ಲಿ ಯಾಕೆ ಹೀಗೆಲ್ಲಾ ಆಟಾಡಬೇಕು.'' ಅಂತ ಅಸಮಾಧಾನ ವ್ಯಕ್ತಪಡಿಸಿದರು.

ಹಾಗಾದ್ರೆ, ಬುಲ್ಲೆಟ್ ಪ್ರಕಾಶ್ ನೆಮ್ಮದಿ ಹಾಳು ಮಾಡುತ್ತಿರುವವರು ಯಾರು ಅನ್ನುವ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಯಾರು ಅಂತ ಗೊತ್ತಿದ್ದರೂ, ಬಾಯಿ ಬಿಟ್ಟು ವಿವಾದ ಮೈಮೇಲೆ ಎಳೆದುಕೊಳ್ಳುವುದಕ್ಕೆ ಬುಲ್ಲೆಟ್ ಪ್ರಕಾಶ್ ತಯಾರಿಲ್ಲ.

English summary
Kannada Actor Bullet Prakash has revealed that there are few people who are trying on Black magic to curb the Actor's success. But who is the person behind is the question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada