For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಇಸ್ಲಾಂಗೆ ಮಮತಾ ಕುಲಕರ್ಣಿ ಕುಲಾಂತರ

  By Srinath
  |

  ಮುಂಬೈ, ಜುಲೈ 15: ಅಂದಕಾಲತ್ತಿಲ್ ಮಾದಕ ಬೆಡಗಿ ಮಮತಾ 'ಕುಲ'ಕರ್ಣಿ ಕುಲಾಂತರಗೊಂಡಿದ್ದಾರೆ. ಅವರು ಇತ್ತೀಚೆಗೆ ಮತಾಂತರಗೊಂಡಿರುವುದು ಇಸ್ಲಾಂಗೆ.

  'ಘಾತಕ್' ಚಿತ್ರದ ಮೂಲಕ ಪಡ್ಡೆ ಹುಡುಗರ ಮನಸಿನಲ್ಲಿ ತಳವೂರಿದ ಮಮತಾ ಕುಲಕರ್ಣಿ ಇಸ್ಲಾಂ ಮತವನ್ನು ಸ್ವೀಕರಿಸಿದ್ದಾರೆ. ಅಂದಹಾಗೆ ಬಾಲಿವುಡ್ ಪರದೆಯಿಂದ/ ಪಡ್ಡೆ ಹುಡುಗರ ಕನಸು-ಮನಸಿನಿಂದ ಜಾರಿರುವ ಮಮತಾ ಕುಲಕರ್ಣಿ ಪ್ರಸ್ತುತ ಕೀನ್ಯಾದ ನೈರೋಬಿಯಲ್ಲಿ ತಳವೂರಿದ್ದಾರೆ.

  ಅವರ ಜತೆಗೆ ಪತಿ ವಿಕಿ ಗೋಸ್ವಾಮಿ ಸಹ ಇದ್ದಾರೆ. ಜತೆಗೆ, ಪತ್ನಿ ಮಮತಾ ಮಾದರಿ ವಿಕಿ ಗೋಸ್ವಾಮಿ ಸಹ ಈಗಾಗಲೇ ಮುಸ್ಲಿಮರಾಗಿದ್ದಾರೆ. ಉಚ್ಛ್ರಾಯ ಕಾಲದಲ್ಲಿದ್ದಾಗ ಸೆಕ್ಸಿ ನಟಿ ಮಮತಾ ಕುಲಕರ್ಣಿ ಸಿನಿ ಮಾಸಿಕ ಪತ್ರಿಕೆಗೆ (Stardust) ಟಾಪ್ ಲೆಟ್ ಪೋಸ್ ನೀಡಿದ್ದರು. ಆಶಿಕ್ ಅವಾರಾ (1993), ಕ್ರಾಂತಿವೀರ್ (1994), ಕರಣ್ ಅರ್ಜುಲ್ (1995), ಸಬ್ಸೆ ಬಡಾ ಖಿಲಾಡಿ (1995) ಮಮತಾ ಕುಲಕರ್ಣಿಯ ಹಿಟ್ ಚಿತ್ರಗಳು.

  ಅಷ್ಟಕ್ಕೂ 1997ರಲ್ಲಿ ಏನಾಯಿತೆಂದರೆ ವಿಕಿ ಗೋಸ್ವಾಮಿಯನ್ನು ಮಾದಕ ದ್ರವ್ಯ ಕಳ್ಳಸಾಗಣೆ ಹಿನ್ನೆಲೆಯಲ್ಲಿ ಕೊಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು. 6 ದಶಲಕ್ಷ ಡಾಲರ್ ಮೌಲ್ಯದ 11.5 ಟನ್ mandrax ಅನ್ನು ವಿಕಿ ಕದ್ದು ಸಾಗಿಸಿದ್ದ.

  ಅದಕ್ಕಾಗಿ 52 ವರ್ಷದ ಗೋಸ್ವಾಮಿಗೆ 25 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಲಾಯಿತು. ಆದರೆ ಆಸಾಮಿ 2012ರ ನವೆಂಬರಿನಲ್ಲಿ ಸರಳುಗಳ ಬಂಧನ ಬಿಡಿಸಿಕೊಂಡು ಮುಕ್ತರಾದರು. ಹಾಗೆ ಶಿಕ್ಷೆ ಮೊಟಕುಗೊಳ್ಳಲು ಮುಖ್ಯವಾಗಿ ಕಾರಣವಾಗಿದ್ದು ಆತ ಇಸ್ಲಾಂಗೆ ಮತಾಂತರಗೊಂಡಿದ್ದು!

  ವಿಕಿ ಗೋಸ್ವಾಮಿ ಜೈಲಿನಲ್ಲಿದ್ದಾಗಲೇ ಮಮತಾ ಕುಲಕರ್ಣಿ ಆತನ ಕೈಹಿಡಿದಳು. ಅವರ ಬಾಂಧವ್ಯ ಗಟ್ಟಿಯಾಗುತ್ತಿದ್ದಂತೆ ವಿಕಿಯ ಹೋಟೆಲ್ ಬಿಸಿನೆಸ್ ಅನ್ನು ಸ್ವತಃ ಮಮತಾ ಕುಲಕರ್ಣಿಯೇ ನಿರ್ವಹಣೆ ಮಾಡತೊಡಗಿದರು. ಇದೀಗ ಇಸ್ಲಾಂಗೆ ಕುಲಾಂತರಗೊಳ್ಳುವ ಮೂಲಕ ಮಮತಾ-ವಿಕಿ ಬಾಂಧವ್ಯ ಮತ್ತಷ್ಟು ಸದೃಢವಾಗಿದೆ. 1990ರ ದಶಕದಲ್ಲಿ ಮಮತಾ ಕುಲಕರ್ಣಿ ಬಾಲಿವುಡ್ ನಲ್ಲಿ ಮಿಂಚಿದ್ದರು.

  English summary
  Atlast, Bollywood ex actress Mamta Kulkarni converts to Islam. Kulkarni got married with Vicky Goswami, when he was in jail. They were in a relationship for a long time. She was managing her husband’s hotel business outside during his punishment. Vicky has already converted to Islam. They are living in Nairobi, Kenya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X