For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್, ಸಾಧು ಕೋಕಿಲ, ಉಮಾಶ್ರೀ ವಿರುದ್ಧ ಪ್ರಕರಣ ದಾಖಲು

  |

  ನಟ ದುನಿಯಾ ವಿಜಯ್, ಸಾಧು ಕೋಕಿಲ, ನಟಿ, ರಾಜಕಾರಣಿ ಉಮಾಶ್ರೀ ಹಾಗೂ ಜಯಮಾಲಾ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಮೇಲ್ಕಂಡ ಈ ಮೂವರು ನಟರು ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕಾರ್ಯಕ್ರಮದಲ್ಲಿ ಹಾಜರಿದ್ದ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ದುನಿಯಾ ವಿಜಯ್, ಸಾಧು ಕೋಕಿಲ, ಉಮಾಶ್ರೀ ಹಾಗೂ ನಟಿ ಜಯಮಾಲಾ ವಿರುದ್ಧವೂ ಪ್ರಕರಣ ದಾಖಲಾಗಿದೆ.

  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಒಟ್ಟು 31 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಉಮಾಶ್ರೀ ಅವರನ್ನು ಆರೋಪಿ ನಂಬರ್ 8. ಸಾಧುಕೋಕಿಲ ಎ 27 , ಸಾ.ರಾ.ಗೋವಿಂದು ಎ 28 , ಜಯಮಾಲ ಎ29 , ದುನಿಯಾ ವಿಜಯ್ ಎ30 ಆಗಿದ್ದಾರೆ.

  ಪ್ರಕರಣ ಕುರಿತಾಗಿ ಎಫ್‌ಐಆರ್ ದಾಖಲಾಗಿದ್ದು ಮೊದಲ ಆರೋಪಿ ಡಿ.ಕೆ.ಶಿವಕುಮಾರ್ ಹಾಗೂ ಎರಡನೇ ಆರೋಪಿ ಸಿದ್ದರಾಮಯ್ಯ ಆಗಿದ್ದಾರೆ.

  ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆಗುತ್ತಿದ್ದು, ಸರ್ಕಾರವು ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂ ಹೇರಿದೆ. ಹಾಗಿದ್ದರೂ ಕಾಂಗ್ರೆಸ್ ಪಕ್ಷವು ಇತರ ಕೆಲವು ಸಂಘಟನೆಗಳೊಟ್ಟಿಗೆ ಸೇರಿ ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತಿದ್ದು, ಸರ್ಕಾರವು ಈ ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದೆ. ರಾಮನಗರ ಜಿಲ್ಲಾಧಿಕಾರಿಗಳು ಈಗಾಗಲೇ ತಿಳಿವಳಿಕೆ ಪತ್ರವನ್ನು ನೀಡಿದ್ದರಾದರೂ ಡಿ.ಕೆ.ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ನಾವು ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.

  ಮೇಕೆದಾಟು ಪಾದಯಾತ್ರೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಪೂರ್ಣ ಬೆಂಬಲ ನೀಡಿದೆ. ಜೊತೆಗೆ ಹಲವು ನಟರು ವೈಯಕ್ತಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ ಹಾಗೂ ಹಲವರು ಪಾದಯಾತ್ರೆಯಲ್ಲಿ ಖುದ್ದಾಗಿ ಪಾಲ್ಗೊಂಡಿದ್ದಾರೆ.

  ನಟ ಶಿವರಾಜ್ ಕುಮಾರ್ ಸಹ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಪಾದಯಾತ್ರೆ ಉದ್ಘಾಟನೆ ಸಮಾರಂಭದಲ್ಲಿ ಶಿವಣ್ಣ ಭಾಗಿಯಾಗಲಿದ್ದರು ಆದರೆ ಜನ ಹೆಚ್ಚಾದ ಕಾರಣ ಕನಕಪುರದ ವೆರಗೆ ಬಂದಿದ್ದ ಶಿವರಾಜ್ ಕುಮಾರ್ ಅಲ್ಲಿಂದ ವಾಪಸ್ಸಾದರು.

  English summary
  Case against actor Duniya Vijay, Sadhu kokila, Umashree, Jayamala and others for violating COVID 19 rules. These actors participated in Mekedatu Padayathre.
  Tuesday, January 11, 2022, 15:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X