For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗೆ ಸಲಾಂ ಹೊಡೆದ ತಾರೆಯರು

  |

  ಕೊರೊನಾ ವೈರಸ್ಸ ಭೀತಿ ವಿಶ್ವವನ್ನೇ ಕಾಡುತ್ತಿದೆ. ಜನರು ಪರಸ್ಪರರಿಂದ ದೂರ ಉಳಿಯುತ್ತಿದ್ದಾರೆ. ರೋಗದ ಭೀತಿಯಿಂದ ಹೊರಗೆ ಹೋಗುತ್ತಿಲ್ಲ, ಇಂತಹಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ವೈದ್ಯಕೀಯ ಸಿಬ್ಬಂದಿ ಕೊರೊನಾ ವಿರುದ್ಧ ನೇರ ಹೋರಾಟಕ್ಕೆ ಇಳಿದಿದ್ದಾರೆ.

  ಕೊರೊನಾ ಪ್ರಭಾವ ತಗ್ಗಿಸಲು ಮೋದಿ ಅವರು ಭಾನುವಾರದಂದು ಜನತಾ ಕರ್ಪ್ಯೂ ಆಚರಿಸುವಂತೆ ಕರೆ ನೀಡಿದ್ದರು. ಇದು ಬಹುತೇಕ ಯಶಸ್ವಿ ಆಗಿದೆ. ಬಹುತೇಕರು ಇಂದು ಮನೆಗಳಲ್ಲಿಯೇ ಉಳಿದು ಜನತಾ ಕರ್ಪ್ಯೂವನ್ನು ಯಶಸ್ವಿಗೊಳಿಸಿದ್ದಾರೆ.

  ಇದೇ ದಿನ ಸಂಜೆ ಐದು ಗಂಟೆ ವೇಳೆಗೆ ಮನೆಯ ಬಾಗಿಲ ಬಳಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸೈನಿಕರು, ಮಾಧ್ಯಮದವರಿಗೆ ಧನ್ಯವಾದ ತಿಳಿಸುವಂತೆಯೂ ಹೇಳಿದ್ದರು. ಸಾಮಾನ್ಯ ಜನರು ಸೇರಿ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಆರೋಗ್ಯ ಯೋಧರಿಗೆ ಧನ್ಯವಾದ ಅರ್ಪಿಸಿದ್ದಾರೆ.

  ಚಪ್ಪಾಳೆ ತಟ್ಟಿದ ಪುನೀತ್ ರಾಜ್‌ಕುಮಾರ್

  ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸದಾಶಿವನಗರದ ಮನೆಯಲ್ಲಿಯೇ ಇಂದು ಉಳಿದರು. ಐದು ಗಂಟೆಗೆ ಸರಿಯಾಗಿ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ಧನ್ಯವಾದ ಅರ್ಪಿಸಿದರು.

  ಚಪ್ಪಾಳೆ ತಟ್ಟಿದ ದೀಪಿಕಾ-ರಣವೀರ್ ಸಿಂಗ್ ಜೋಡಿ

  ದೀಪಿಕಾ ಪಡುಕೋಣೆ ಮತ್ತು ರಣಬೀರ್ ಸಿಂಗ್ ಅವರುಗಳು ಮುಂಬೈ ನ ತಮ್ಮ ಫ್ಲಾಟ್‌ನ ಹೊರಗೆ ನಿಂತು ಚಪ್ಪಾಳೆ ತಟ್ಟಿದರು. ರಣವೀರ್ ಸಿಂಗ್ ಅವರು ವಾದ್ಯವೊಂದನ್ನು ಭಾರಿಸಿ ಧನ್ಯವಾದ ಹೇಳಿದರು.

  ದೇವರ ಮುಂದೆ ಕೂತು ಚಪ್ಪಾಳೆ ತಟ್ಟಿದ ಜಗ್ಗೇಶ್

  ಬಿಜೆಪಿ ಮುಖಂಡರೂ ಆಗಿರುವ ನಟ ಜಗ್ಗೇಶ್ ಅವರು ಸಂಜೆ ಐದು ಗಂಟೆಗೆ ಸರಿಯಾಗಿ ದೇವರ ಮುಂದೆ ಕೂತು, ಮಂತ್ರ ಪಠಣ ಮಾಡಿ ಮೋದಿ ಅವರ ಮಾತಿನಂತೆ ತಪ್ಪಾಳೆ ತಟ್ಟಿ ಆರೋಗ್ಯ ಸೈನಿಕರಿಗೆ ಧನ್ಯವಾದ ಅರ್ಪಿಸಿದರು.

  ಅದ್ಭುತ ಯೋಚನೆ ಎಂದ ಕಿಚ್ಚಾ ಸುದೀಪ್

  ನಟ ಕಿಚ್ಚಾ ಸುದೀಪ್ ಅವರು ಸಹ ಐದು ಗಂಟೆಗೆ ಚಪ್ಪಾಳೆ ತಟ್ಟಿ ಧನ್ಯವಾದ ಹೇಳಿದ್ದಾರೆ. ಈ ಯೋಚನೆ ಅದ್ಭುತವಾದುದು, ನಾವು ಕರ್ಪ್ಯೂ ನಲ್ಲಿರಲಿಲ್ಲ ಬದಲಿಗೆ ತಾಯಿ ಪ್ರಕೃತಿಗೆ ಸ್ವಲ್ಪ ವಿರಾಮ ನೀಡಿದ್ದೇವೆ ಎಂದು ಕಿಚ್ಚಾ ಬರೆದುಕೊಂಡಿದ್ದಾರೆ.

  ಕುಟುಂಬದೊಂದಿಗೆ ಚಪ್ಪಾಳೆ ತಟ್ಟಿದ ಅಮಿತಾಬ್ ಬಚ್ಚನ್

  ಶ್ವೇತ ಬಣ್ಣದ ವಸ್ತ್ರ ತೊಟ್ಟು ಬಾಲಿವುಡ್ ಕಿಂಗ್ ಅಮಿತಾಬ್ ಬಚ್ಚನ್ ಅವರು ಮನೆಯ ತಾರಸಿಯ ಮೇಲೆ ನಿಂತು ಚಪ್ಪಾಳೆ ತಟ್ಟಿದರು. ಈ ಸಂದರ್ಭದಲ್ಲಿ ಸೊಸೆ ಐಶ್ವರ್ಯಾ ರೈ, ಮೊಮ್ಮಗಳು, ಅಮಿತಾಬ್ ಮಗಳು ಸಹ ಇದ್ದರು. ''ನಾವು ಗೆದ್ದೆವು'' ಎಂದು ಅಮಿತಾಬ್ ಬರೆದುಕೊಂಡಿದ್ದಾರೆ.

  English summary
  Many Sandalwood, Bollywood celebrities thanked coronavirus fighters by clapping at 5 pm today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X