twitter
    For Quick Alerts
    ALLOW NOTIFICATIONS  
    For Daily Alerts

    ಪತ್ರಕರ್ತರಿಗಾಗಿ 2 ದಿನಗಳ ಚಲನಚಿತ್ರ ರಸಗ್ರಹಣ ವಿಶೇಷ ಶಿಬಿರ

    By Suneetha
    |

    ಸಿನಿಮಾಗಳನ್ನು ವಿಮರ್ಶಾತ್ಮಕವಾಗಿ ವಿಭಿನ್ನ ದೃಷ್ಠಿಯಿಂದ ನೋಡಿ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಪತ್ರಕರ್ತರು ಮತ್ತು ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಚಲನಚಿತ್ರ ರಸಗ್ರಹಣ ಶಿಬಿರವನ್ನು ಜುಲೈ 17 ಮತ್ತು 18, 2016ರಂದು ಚಾಮುಂಡೇಶ್ವರಿ ಸ್ಟುಡಿಯೋ, ಮಿಲ್ಲರ್ಸ್ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.

    ಜುಲೈ 17ರಂದು ಬೆಳಗ್ಗೆ 10.30 ಕ್ಕೆ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಪ್ರಕಾಶ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಶೇಷ ಭಾಷಣವನ್ನು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾಡಲಿದ್ದಾರೆ.[ದೆಹಲಿ ಕನ್ನಡ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ]

    'Chalanachitra Rasagrahana' Two day camp for Journalism students

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸಿದ್ದರಾಜು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಬೆಂಗಳೂರು ಟಿವಿ ಪತ್ರಿಕೋದ್ಯಮ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಎಸ್.ಸತ್ಯನಾರಾಯಣ, ಹಾಗೂ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎಂ.ಎಸ್.ರಮೇಶ್ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್.ವಿ ರಾಜೇಂದ್ರಸಿಂಗ್ ಬಾಬು ವಹಿಸಲಿದ್ದಾರೆ.['ಬೆಳ್ಳಿ ಕಿರಣ' ಜೊತೆ ಗಣ್ಯರ ಬೆಳ್ಳಿ ಮಾತುಗಳು]

    ಮಧ್ಯಾಹ್ನ 12 ರಿಂದ 1.30 ರವರೆಗೆ ಸಿನಿಮಾ ಕಟ್ಟುವ ಕ್ರಮ ಕುರಿತಂತೆ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಮಾತನಾಡಲಿದ್ದಾರೆ. ಮಧ್ಯಾಹ್ನ 2.15 ರಿಂದ ಸಂಜೆ 5 ಘಂಟೆಯವರೆಗೆ ಚಲನಚಿತ್ರ ರಸಗ್ರಹಣ ಹಾಗೂ ವಿಮರ್ಶೆ ಜರುಗಲಿದ್ದು, ಸಂಜೆ 5 ಘಂಟೆಯಿಂದ ಲೋಕಾರ್ನೋ, ಮುಂಬೈ, ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪುರಸ್ಕೃತ ಹಾಗೂ ರಾಜ್ಯ ಪ್ರಶಸ್ತಿ ವಿಜೇತ 'ತಿಥಿ' ಚಿತ್ರದ ಪ್ರದರ್ಶನವಿದೆ.

    ಜುಲೈ 18 ರಂದು ಬೆಳಿಗ್ಗೆ 10 ರಿಂದ 10.30ರವರೆಗೆ 'ಜಾಗತಿಕ, ಭಾರತೀಯ ಹಾಗೂ ಕನ್ನಡ ಚಲನಚಿತ್ರ -ಒಂದು ಕಿರು ನೋಟ' ಕುರಿತಂತೆ ಚಿತ್ರ ತಜ್ಞ ಹೆಚ್.ಎನ್. ನರಹರಿರಾವ್ ಮಾತನಾಡಲಿದ್ದಾರೆ.[ಕುತೂಹಲ, ತಾರ್ಕಿಕ ಅಂಶ ಇದ್ದರೆ ಫಿಲಂಗೆ ಬೆಲೆ: ಹಂಸಲೇಖ]

    ಬೆಳಿಗ್ಗೆ 11.30 ರಿಂದ 1.30ರವರೆಗೆ 'ತಾಂತ್ರಿಕತೆ ಕಲೆಯಾಗುವ ಕ್ರಮ' ಕುರಿತಂತೆ ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಜಿ.ಎನ್.ಭಾಸ್ಕರ್ ಹಾಗೂ ಚಲನಚಿತ್ರ ನಿರ್ದೇಶಕರು ಬಿ.ಎಂ.ಗಿರಿರಾಜ್ ಮಾತನಾಡುವರು.

    ಸಿನಿಮಾಗಳನ್ನು ವಿಮರ್ಶಾತ್ಮಕವಾಗಿ ವಿಭಿನ್ನ ದೃಷ್ಠಿಯಿಂದ ನೋಡಿ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಪತ್ರಕರ್ತರು ಮತ್ತು ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಚಲನಚಿತ್ರ ರಸಗ್ರಹಣ ಶಿಬಿರವನ್ನು ಜುಲೈ 17 ಮತ್ತು 18, 2016ರಂದು ಚಾಮುಂಡೇಶ್ವರಿ ಸ್ಟುಡಿಯೋ, ಮಿಲ್ಲರ್ಸ್ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. ಜುಲೈ 17ರಂದು ಬೆಳಗ್ಗೆ 10.30 ಕ್ಕೆ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಪ್ರಕಾಶ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಶೇಷ ಭಾಷಣವನ್ನು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾಡಲಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸಿದ್ದರಾಜು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಬೆಂಗಳೂರು ಟಿವಿ ಪತ್ರಿಕೋದ್ಯಮ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಎಸ್.ಸತ್ಯನಾರಾಯಣ, ಹಾಗೂ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎಂ.ಎಸ್.ರಮೇಶ್ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್.ವಿ ರಾಜೇಂದ್ರಸಿಂಗ್ ಬಾಬು ವಹಿಸಲಿದ್ದಾರೆ. ಮಧ್ಯಾಹ್ನ 12 ರಿಂದ 1.30 ರವರೆಗೆ ಸಿನಿಮಾ ಕಟ್ಟುವ ಕ್ರಮ ಕುರಿತಂತೆ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಮಾತನಾಡಲಿದ್ದಾರೆ. ಮಧ್ಯಾಹ್ನ 2.15 ರಿಂದ ಸಂಜೆ 5 ಘಂಟೆಯವರೆಗೆ ಚಲನಚಿತ್ರ ರಸಗ್ರಹಣ ಹಾಗೂ ವಿಮರ್ಶೆ ಜರುಗಲಿದ್ದು, ಸಂಜೆ 5 ಘಂಟೆಯಿಂದ ಲೋಕಾರ್ನೋ, ಮುಂಬೈ, ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪುರಸ್ಕೃತ ಹಾಗೂ ರಾಜ್ಯ ಪ್ರಶಸ್ತಿ ವಿಜೇತ 'ತಿಥಿ' ಚಿತ್ರದ ಪ್ರದರ್ಶನವಿದೆ. ಜುಲೈ 18 ರಂದು ಬೆಳಿಗ್ಗೆ 10 ರಿಂದ 10.30ರವರೆಗೆ 'ಜಾಗತಿಕ, ಭಾರತೀಯ ಹಾಗೂ ಕನ್ನಡ ಚಲನಚಿತ್ರ -ಒಂದು ಕಿರು ನೋಟ' ಕುರಿತಂತೆ ಚಿತ್ರ ತಜ್ಞ ಹೆಚ್.ಎನ್. ನರಹರಿರಾವ್ ಮಾತನಾಡಲಿದ್ದಾರೆ. ಬೆಳಿಗ್ಗೆ 11.30 ರಿಂದ 1.30ರವರೆಗೆ 'ತಾಂತ್ರಿಕತೆ ಕಲೆಯಾಗುವ ಕ್ರಮ' ಕುರಿತಂತೆ ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಜಿ.ಎನ್.ಭಾಸ್ಕರ್ ಹಾಗೂ ಚಲನಚಿತ್ರ ನಿರ್ದೇಶಕರು ಬಿ.ಎಂ.ಗಿರಿರಾಜ್ ಮಾತನಾಡುವರು. ಮಧ್ಯಾಹ್ನ 2.15 ರಿಂದ 4.30ರವರೆಗೆ ಮುಕ್ತ ಸಂವಾದ ನಡೆಯಲಿದ್ದು, ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕಿ ಸುಮನಾ ಕಿತ್ತೂರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಎನ್.ಆರ್.ನಂಜುಂಡೇಗೌಡ. 'ಬೆಂಗಳೂರು ಮಿರರ್' ಆಂಗ್ಲ ಪತ್ರಿಕೆಯ ಸಿನಿಮಾ ವರದಿಗಾರ ಶ್ಯಾಮ್ ಪ್ರಾಸಾದ್, ಸಿನಿ ಪತ್ರಕರ್ತರಾದ ಸದಾಶಿವ ಶೆಣೈ, ಪಬ್ಲಿಕ್ ಟಿವಿ ಸಿನಿ ಪತ್ರಕರ್ತ ಮಹೇಶ್ ಶೆಟ್ಟಿ, ಪ್ರಜಾವಾಣಿ ಸಿನಿ ಪತ್ರಕರ್ತ ರಘುನಾಥ್.ಚ.ಹ, ಸ್ನೇಹಪ್ರಿಯ ನಾಗರಾಜ್, ಸುಗುಣ, ಕೇಶವಮೂರ್ತಿ, ಪವಿತ್ರ, ಮುಂತಾದವರು ಭಾಗವಹಿಸಲಿದ್ದಾರೆ. ಈ ಮುಕ್ತ ಸಂವಾದದ ನಿರ್ವಹಣೆಯನ್ನು ಚಲನಚಿತ್ರ ಪತ್ರಕರ್ತರು ಹಾಗೂ ಚಿತ್ರ ಸಾಹಿತಿ ಜೋಗಿ ಅವರು ನಡೆಸಿಕೊಡಲಿದ್ದಾರೆ.

    ಮಧ್ಯಾಹ್ನ 2.15 ರಿಂದ 4.30ರವರೆಗೆ ಮುಕ್ತ ಸಂವಾದ ನಡೆಯಲಿದ್ದು, ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕಿ ಸುಮನಾ ಕಿತ್ತೂರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಎನ್.ಆರ್.ನಂಜುಂಡೇಗೌಡ.

    'ಬೆಂಗಳೂರು ಮಿರರ್' ಆಂಗ್ಲ ಪತ್ರಿಕೆಯ ಸಿನಿಮಾ ವರದಿಗಾರ ಶ್ಯಾಮ್ ಪ್ರಾಸಾದ್, ಸಿನಿ ಪತ್ರಕರ್ತರಾದ ಸದಾಶಿವ ಶೆಣೈ, ಪಬ್ಲಿಕ್ ಟಿವಿ ಸಿನಿ ಪತ್ರಕರ್ತ ಮಹೇಶ್ ಶೆಟ್ಟಿ, ಪ್ರಜಾವಾಣಿ ಸಿನಿ ಪತ್ರಕರ್ತ ರಘುನಾಥ್.ಚ.ಹ, ಸ್ನೇಹಪ್ರಿಯ ನಾಗರಾಜ್, ಸುಗುಣ, ಕೇಶವಮೂರ್ತಿ, ಪವಿತ್ರ, ಮುಂತಾದವರು ಭಾಗವಹಿಸಲಿದ್ದಾರೆ.[ನವದೆಹಲಿಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಅಬ್ಬರ]

    ಈ ಮುಕ್ತ ಸಂವಾದದ ನಿರ್ವಹಣೆಯನ್ನು ಚಲನಚಿತ್ರ ಪತ್ರಕರ್ತರು ಹಾಗೂ ಚಿತ್ರ ಸಾಹಿತಿ ಜೋಗಿ ಅವರು ನಡೆಸಿಕೊಡಲಿದ್ದಾರೆ.

    English summary
    Karnataka Chalanachitra Academy of Bengaluru will be conducting a two days 'Chalanachitra Rasagrahana' Camp from July 17 and 18th in Chamundeshwari Theater, Millers Road, Bengaluru.
    Friday, July 15, 2016, 12:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X