ನಿವೇದಿತಾ ಗೌಡ ಹುಟ್ಟುಹಬ್ಬವನ್ನು ಆಚರಿಸಿದ ಚಂದನ್ ಶೆಟ್ಟಿ
Recommended Video

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸಣ್ಣ ಪುಟ್ಟ ಕಾರಣಗಳಿಗೆ ಅಲ್ಲಿರುವ ಸ್ಪರ್ಧಿಗಳು ಜಗಳ ಮಾಡುತ್ತಾರೆ. ಆದರೆ ಕಳೆದ ಬಾರಿಯ 'ಬಿಗ್ ಬಾಸ್' ಸೀಸನ್ 5ರ ಸ್ಪರ್ಧಿಗಳಾದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಕಾರ್ಯಕ್ರಮದಿಂದ ಹೊರ ಬಂದ ಮೇಲೆಯೂ ಒಳ್ಳೆಯ ಫ್ರೆಂಡ್ಸ್ ಆಗಿ ಉಳಿದಿದ್ದಾರೆ.
ಸದ್ಯ ನಿವೇದಿತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಶೇಷ ಅಂದರೆ ಕರ್ನಾಟಕ ಚುನಾವಣೆಯ ದಿನವೇ ಅವರ ಹುಟ್ಟುಹಬ್ಬ ಇತ್ತು. ಇನ್ನು ಗೆಳತಿ ಹುಟ್ಟುಹಬ್ಬವನ್ನು ಚಂದನ್ ಶೆಟ್ಟಿ ಮೈಸೂರಿನ ನಿವೇದಿತಾ ಮನೆಯಲ್ಲಿ ಸೆಲಿಬ್ರಿಟ್ ಮಾಡಿದ್ದಾರೆ. ಈ ವೇಳೆ ನಿವೇದಿತಾ ತಾಯಿ ಕೂಡ ಹಾಜರಿದ್ದರು.
ಅಂದಹಾಗೆ, ನಿವೇದಿತಾ ಗೌಡ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ಫೋಟೋಗಳನ್ನು ಚಂದನ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಿವೇದಿತಾ ಗೌಡ ನನ್ನ ವಿಶೇಷ ಗೆಳತಿ ಎಂದು ಹೇಳಿ ಶುಭಾಶಯ ಕೋರಿದ್ದಾರೆ. ನಿವೇದಿತಾ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ ಮಾಡಿದ್ದಾರೆ.

ಉಳಿದಂತೆ, ಚಂದನ್ ಶೆಟ್ಟಿ ಈಗ ಕಿರುತೆರೆಯ ಕಾರ್ಯಕ್ರಮದಲ್ಲಿ ಬಿಜಿ ಇದ್ದಾರೆ. ಇದರ ನಂತರ ಬಿಗ್ ಬಾಗ್ ಕಾರ್ಯಕ್ರಮದ ಮತ್ತೊಬ್ಬ ಸ್ಪರ್ಧಿ ಆಗಿದ್ದ ಶೃತಿ ಪ್ರಕಾಶ್ ಜೊತೆಗೆ ಚಂದನ್ ಒಂದು ಹೊಸ ಆಲ್ಬಂ ಸಾಂಗ್ ಮಾಡಲಿದ್ದಾರೆ.


Click it and Unblock the Notifications











