twitter
    For Quick Alerts
    ALLOW NOTIFICATIONS  
    For Daily Alerts

    ಈ ಟೀವಿ ಕನ್ನಡ ಚಾನೆಲ್‌ ಶುರುಮಾಡುತ್ತಂತೆ!

    By Super
    |

    ಈ ಟೀವಿ ಕನ್ನಡ ಚಾನೆಲ್‌ ಶುರುಮಾಡುತ್ತಂತೆ!

    ಹಾಗೊಂದು ಸುದ್ದಿ ಗಾಳಿಯಲ್ಲಿ ತೇಲಿಬಂದದ್ದು ಒಂದು ವರ್ಷದ ಹಿಂದೆ. ಕನ್ನಡದ ಕಿರುತೆರೆಯ ನಿರ್ಮಾಪಕರೆಲ್ಲ ನಾ ಮುಂದು ತಾಮುಂದು ಎಂಬಂತೆ ಹೈದರಾಬಾದ್‌ಗೆ ಲಗ್ಗೆಯಿಟ್ಟರು. ಟೀವಿ ಸೀರಿಯಲ್‌ ಶುರುಮಾಡಿದರು. ಇದು ಕೇವಲ ಆರಂಭ ಅಷ್ಟೆ. ಅಲ್ಲಿಯ ತನಕ ಕನ್ನಡಕ್ಕೆ ಇದ್ದದ್ದು ದೂರದರ್ಶನದ ಕನ್ನಡ ಉಪಗ್ರಹ ಚಾನೆಲ್‌ ಮತ್ತು ಸನ್‌ ಸ್ವಾಮ್ಯದ ಉದಯ ಟೀವಿ.

    ಆದರೆ ಇವತ್ತು ಕನ್ನಡ ಚಾನೆಲ್‌ಗಳ ಸಂಖ್ಯೆ ಆರಕ್ಕೇರುವ ಸೂಚನೆಯಿದೆ. ಈಗಾಗಲೇ ಡಿಡಿ-9 ಚಂದನ ವಾಗಿದೆ. ಸುಪ್ರಭಾತ ಚಾನಲ್‌ ಕಾರ್ಯಾರಂಭ ಮಾಡಿದೆ. ಉದಯ ಟೀವಿಯ ಪ್ಲಸ್‌ ಚಾನೆಲ್‌ ಆಗಿ ಉಷ ಟೀವಿ ಕಾಣಿಸಿಕೊಳ್ಳಲಿದೆ. ಏಷಿಯಾ ನೆಟ್‌ ಹಾಗೂ ರಿkುೕ ಸಹಯೋಗದಲ್ಲಿ ಕಾವೇರಿ ಕಾಲಿಡುತ್ತಿದ್ದಾಳೆ.

    ಇವೆಲ್ಲದರ ನಡುವೆ ಸಹರಾ ಟೀವಿಯ ಕನ್ನಡ ಚಾನೆಲ್‌ ಆರಂಭವಾಗಲಿದೆ. ಉದಯವಾಣಿ ದಿನಪತ್ರಿಕೆ ತರಂಗ ಎಂಬೊಂದು ಚಾನೆಲ್‌ ಆರಂಭಿಸುವ ಉತ್ಸಾಹದಲ್ಲಿದೆ. ವಿಜಯ ಕರ್ನಾಟಕಕ್ಕೂ ತನ್ನದೇ ಆದ ಚಾನೆಲ್‌ ಆರಂಭಿಸುವ ಹುಕ್ಕಿ ಬಂದು ಬಿಟ್ಟಿದೆ. ಇವರೆಲ್ಲರಿಗಿಂತ ಮೊದಲೇ ಚಾನೆಲ್‌ ಮಾಡುವ ಯೋಜನೆ ಹಾಕಿದ ಪ್ರಜಾವಾಣಿಯ ಪ್ರಜಾಟೀವಿಯ ಯೋಜನೆ ನೆನೆಗುದಿಯಲ್ಲಿದೆ.

    ಅಂದರೆ ಕನ್ನಡಕ್ಕೆ ಎಂಟು ಉಪಗ್ರಹ ಚಾನೆಲ್‌ಗಳು. ಅಷ್ಟೊಂದನ್ನು ತಡೆದುಕೊಳ್ಳುವ ಶಕ್ತಿ ಕರ್ನಾಟಕಕ್ಕೆ ಇದೆಯೇ? ಯಾಕಿಲ್ಲ ? ತಮಿಳಿನಲ್ಲಿ ಎಂಟು ಚಾನೆಲ್‌ ಇದೆಯಲ್ಲ ! ಸನ್‌, ರಾಜ್‌, ಜಯಾ, ಜೆಮಿನಿ, ವಿಜಯ್‌, ದೂರದರ್ಶನ... ಆದರೆ ತೆಲುಗಿನಲ್ಲಿರುವ ಚಾನೆಲ್‌ಗಳ ಸಂಖ್ಯೆ ಅಷ್ಟಿಲ್ಲ. ಮಲಯಾಳಂನಲ್ಲೂ ನಾಲ್ಕು ದಾಟಿಲ್ಲ. ಹೀಗಿರುವಾಗ ಕನ್ನಡಕ್ಕೆ ಇಷ್ಟೊಂದು ಚಾನೆಲ್‌ ಬೇಕೇ ? ಈ ಪ್ರಶ್ನೆ ಯಾರಿಗೂ ಬೇಕಿಲ್ಲ. ಒಂದು ಚಾನೆಲ್‌ ಬರುತ್ತಿದ್ದ ಹಾಗೆ , ಕನಿಷ್ಟ ಹತ್ತು ನಿರ್ದೇಶಕರಿಗೆ , ಅವರ ಟೀಮಿಗೆ ಕೆಲಸ ಸಿಗುತ್ತದೆ. ಆದರೆ ಇವಕ್ಕೆಲ್ಲ ಆದಾಯ ಎಲ್ಲಿಂದ ಬರುತ್ತದೆ?

    ಜಾಹೀರಾತುಗಳಿಂದ?

    ಆದರೆ ನಿಂಬಸ್‌ನಂಥ ಸಂಸ್ಥೆಯೇ ಕಷ್ಟದಲ್ಲಿದೆ. ಮಲ್ಟಿ ಚಾನೆಲ್‌ ಕದ ಮುಚ್ಚಿಕೊಂಡು ಹೋಗಿದೆ. ಕನಿಷ್ಟ ಹತ್ತು ಕೋಟಿ ನಷ್ಟ ಮಾಡಿಕೊಂಡಿದೆ. ಇನ್‌ಹೌಸ್‌ ಕಾರ್ಯಕ್ರಮಗಳಿಗೆ ಜಾಹೀರಾತು ಪಡೆಯುವುದಕ್ಕೆ ಚಾನೆಲ್‌ಗಳು ಪೈಪೋಟಿ ನಡೆಸುತ್ತಿವೆ. ಹಾಗೇ ಹೊಸ ಚಾನೆಲ್‌ಗಳಿಗೆ ಪ್ರೇಕ್ಷಕರ ಕೊರತೆಯೂ ಇದೆ. ಕೇಬಲ್‌ ಜಾಲ ಕರ್ನಾಟಕದ ನಗರ ಪ್ರದೇಶದಲ್ಲಷ್ಟೇ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಗಳಲ್ಲಿ ಇನ್ನೂ ಪುಟ್ಟ ಡಿಶ್‌ಗಳ ಮೂಲಕ ಒಂದೆರಡು ಚಾನೆಲ್‌ಗಳಷ್ಟೇ ಜನರಿಗೆ ಲಭ್ಯ. ಹಾಗಿರುವಾಗ ಹೊಸ ಚಾನೆಲ್‌ಗಳತ್ತ ಅವರ ಗಮನ ಹರಿಯುವುದು ಕಷ್ಟ.

    ಇಂಥ ಸ್ಥಿತಿಯಲ್ಲಿ ಹೊಸ ಚಾನೆಲ್‌ಗಳು ಎಷ್ಟು ದಿನ ನಡೆಯಬಲ್ಲವು ಎನ್ನುವುದು ಯಕ್ಷ ಪ್ರಶ್ನೆ. Too many channels chasing too few audience ಅನ್ನುವುದು ಇಂದಿನ ಸ್ಥಿತಿ. ಇವೆಲ್ಲ ತಮ್ಮ ಭಾರಕ್ಕೆ ತಾವೇ ಕುಸಿಯುವ ಗಳಿಗೆಗೆ ಕಾಯುತ್ತಿರುವಂತೆ ಕಾಣಿಸುತ್ತಿಲ್ಲವೇ ?

    English summary
    Too many channels chasing too few audience in Karnataka. It is learnt that ETV is planning to start Kannada channel in Karnataka.
    Monday, May 28, 2012, 16:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X