Don't Miss!
- Finance
ಉದ್ಯೋಗವಿಲ್ಲದ ಯುವಕರಿಗೆ ಈ ರಾಜ್ಯದಲ್ಲಿ ನಿರುದ್ಯೋಗ ಭತ್ಯೆ
- News
iNCOVACC vaccine: ಮೂಗಿನ ಮೂಲಕ ನೀಡುವ ಇನ್ಕೊವ್ಯಾಕ್ ಕೊರೊನಾ ಲಸಿಕೆ ಬಿಡುಗಡೆ
- Sports
ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೌತ್ ಎಂಡ್ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್: ದೇವರಾಜ್ ಪುತ್ರನಿಗೆ ಸಂಕಷ್ಟ.!
2017ರ ಸೆಪ್ಟೆಂಬರ್ ತಿಂಗಳು ಸೌತ್ ಎಂಡರ್ ವೃತ್ತದ ಬಳಿ ನಡೆದಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು, ಪ್ರಣಾಮ್ ದೇವರಾಜ್, ಶಶಾಂಕ್, ಮಹಮದ್ ಪೈಜಲ್, ಜುನೈದ್, ವಿನೋದ್, ರಾಜೇಶ್ ನಾಯ್ದು, ಚೈತನ್ಯ, ಆನಂದ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಕನ್ನಡ ಸಿನಿ ನಟರ ಡ್ರಗ್ಸ್ ಚಟ ಬಯಲು ಮಾಡಿತೇ ಈ ಅಪಘಾತ ಪ್ರಕರಣ?
ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹಲವು ಅಂಶಗಳನ್ನ ಉಲ್ಲೇಖಸಲಾಗಿದ್ದು, ಪ್ರಮುಖವಾಗಿ ಗಾಂಜಾ ಸೇವನೆಹಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಷ್ಟಕ್ಕೂ, ದೋಷಾರೋಪ ಪಟ್ಟಿಯಲ್ಲಿ ಏನಿದೆ, ಎಷ್ಟು ಜನರ ವಿರುದ್ಧ ಸಲ್ಲಿಕೆಯಾಗಿದೆ? ಮುಂದೆ ಓದಿ.....

ಗಾಂಜಾ ಸೇವನೆಯಿಂದಲೇ ಅಪಘಾತ
ಗಾಂಜಾ ಸೇವನೆಯಿಂದಲೇ ಈ ಅಪಘಾತವಾಗಿದೆ ಎಂದು ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದು, ಕಾರಿನಲ್ಲಿದವದರು ಕೂಡ ಗಾಂಜಾ ಸೇವಿಸಿದ್ದರು ಎಂದು ತಿಳಿದುಬಂದಿದೆ. ಅಪಘಾತದ ನಂತರ ಕಾರಿನಲ್ಲಿದ್ದವರು ಪರಾರಿಯಾಗಿದ್ದರು. ಆ ವೇಳೆ ಪೊಲೀಸರಿಗೆ ಕಾರಿನಲ್ಲಿ ಗಾಂಜಾ ಸಿಕ್ಕಿತ್ತು.
ಡ್ರಗ್ಸ್ ಆರೋಪ ನಿರಾಕರಿಸಿದ ನಟ ದಿಗಂತ್

ದೇವರಾಜ್ ಪುತ್ರನಿಗೆ ಸಂಕಷ್ಟ
ಅಂದು ನಡೆದ ಅಪಘಾತದಲ್ಲಿ ಹಿರಿಯ ನಟ ದೇವರಾಜ್ ಅವರ ಕಿರಿಯ ಪುತ್ರ ಪ್ರಣಾಮ್ ದೇವರಾಜ್ ಅವರು ಇದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ. ಪ್ರಣಾಮ್ ಅವರು ಕೂಡ ಗಾಂಜಾ ಸೇವಿಸಿದ್ದರು ಎಂದು ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದು ವೈಯಕ್ತಿಕವಾಗಿ ಪ್ರಣಾಮ್ ಗೆ ಸಂಕಷ್ಟವಾಗಲಿದೆ.
ಅಪಘಾತ,
ಡ್ರಗ್ಸ್
ಆರೋಪಕ್ಕೆ
ಪ್ರಜ್ವಲ್
ದೇವರಾಜ್,
ದಿಗಂತ್
ಸ್ಪಷ್ಟನೆ

ಪಾರ್ಟಿಯಲ್ಲಿ ಗಾಂಜಾ ಸೇವನೆ
ಕಾರು ಅಪಘಾತಕ್ಕೂ ಮುಂಚೆ ಸ್ನೇಹಿತರೆಲ್ಲಾ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ಗಾಂಜಾ ಸೇವನೆ ಮಾಡಿದ್ದರು ಎನ್ನಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಘಟನೆಯ ವಿವರವನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆ ನಡೆದಿದ್ದು ಯಾವಾಗ?
2017ರ ಸೆಪ್ಟೆಂಬರ್ 28 ರಂದು ರಾತ್ರಿ ಸೌತ್ ಎಂಡ್ ವೃತ್ತದಲ್ಲಿ ಈ ಅಪಘಾತ ಸಂಭವಿಸಿತ್ತು. ಕಾರು ಚಲಾಯಿಸುತ್ತಿದ್ದ ಗೀತಾ ವಿಷ್ಣು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದರು. ನಂತರ ಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡಿದ್ದರು. ಇದೀಗ, ಒಂದು ವರ್ಷ 3 ತಿಂಗಳ ಬಳಿಕ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ದೋಷಾರೋಪ ಪಟ್ಟಿ ಆರೋಪಿಗಳಿಗೆ ಸಂಕಷ್ಟವಾಗಲಿದೆ.