For Quick Alerts
  ALLOW NOTIFICATIONS  
  For Daily Alerts

  ನಟಿ ಚಾರ್ಮಿಗೆ ಸ್ಟಾರ್ ಹೀರೋಯಿನ್ ಮೇಲೆ ಲವ್ವು: ಮದ್ವೆ ಆಗೋಕೆ ರೆಡಿ ಅಂತೆ.!

  |

  ಗಂಡು-ಹೆಣ್ಣು ಮದುವೆ ಆಗೋದು ಭಾರತೀಯ ಸಂಪ್ರಾದಯ. ಈ ನಡುವೆ ಗಂಡು-ಗಂಡು ಹಾಗೂ ಹೆಣ್ಣು-ಹೆಣ್ಣು ನಡುವೆ ಕೂಡ ವಿವಾಹಗಳು ಜರುಗುತ್ತಿದೆ. ಇದು ಅಚ್ಚರಿಯಾದ್ರೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ.

  ಇದೇ ಮಾರ್ಗದಲ್ಲಿ ಸೌತ್ ಇಂಡಸ್ಟ್ರಿಯ ಸ್ಟಾರ್ ನಟಿ ಚಾರ್ಮಿ ಕೌರ್ ಕೂಡ ಹೆಜ್ಜೆ ಇಡುತ್ತಿದ್ದಾರೆ. ಹೌದು, ಚಾರ್ಮಿ ಕೌರ್ ಬಹುಭಾಷಾ ನಟಿ ತ್ರಿಷಾ ಅವರನ್ನ ಮದುವೆಯಾಗಲು ಬಯಸುತ್ತಿದ್ದಾರೆ.

  ತ್ರಿಷಾ ಕೃಷ್ಣನ್ ಚದುರಿದ ಕನಸು, ಮುರಿದ ಮದುವೆ ತ್ರಿಷಾ ಕೃಷ್ಣನ್ ಚದುರಿದ ಕನಸು, ಮುರಿದ ಮದುವೆ

  ಹೀಗಂತ ಸ್ವತಃ ಚಾರ್ಮಿ ಅವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಮೇ 4 ರಂದು ತ್ರಿಷಾ ಅವರ ಹುಟ್ಟುಹಬ್ಬವಿತ್ತು. ಈ ವಿಶೇಷ ದಿನಕ್ಕೆ ಶುಭ ಕೋರಿರುವ ಚಾರ್ಮಿ ''ಬೇಬಿ ಐ ಲವ್ ಯೂ...ನಾನು ಒಂಟಿ ಕಾಲಿನಲ್ಲಿ ನಿಂತು ಕಾಯುತ್ತಿದ್ದೇನೆ. ನೀನು ಓಕೆ ಅಂದ್ರೆ ಮದ್ವೆ ಆಗೋಣ. ಸಲಿಂಗ ಮದುವೆ ಈಗ ಕಾನೂನಿನಲ್ಲಿ ಅವಕಾಶ ಇದೆ'' ಎಂದು ಟ್ವೀಟ್ ಮಾಡಿದ್ದಾರೆ.

  ಮಹಿಳಾ ಪ್ರಧಾನ ಸಿನಿಮಾದಲ್ಲಿ ಕಾಲಿವುಡ್ ನಟಿ ತ್ರಿಷಾ ಮಹಿಳಾ ಪ್ರಧಾನ ಸಿನಿಮಾದಲ್ಲಿ ಕಾಲಿವುಡ್ ನಟಿ ತ್ರಿಷಾ

  ಚಾರ್ಮಿ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸುತ್ತಿರುವ ನೆಟ್ಟಿಗರು ಬಗೆಬಗೆಯಾಗಿ ಕಾಲೆಳೆಯುತ್ತಿದ್ದಾರೆ. ''ನಿಮ್ಮಿಬ್ಬರನ್ನ ನೋಡುತ್ತಿದ್ದರೇ ಒಬ್ಬರಿಗೋಸ್ಕರ ಮತ್ತೊಬ್ಬರು ಹುಟ್ಟಿದ್ದೀರಾ ಅಂದು ಅನಿಸುತ್ತಿದೆ. ಮದುವೆ ಬಳಿಕ ಮೂರು ಮಕ್ಕಳು ಮತ್ತು 15 ನಾಯಿಗಳನ್ನ ದತ್ತು ತೆಗೆದುಕೊಳ್ಳಿ. ನಿಮ್ಮ ಸಂಸಾರ ಸುಖಕರವಾಗಿರಲಿ'' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

  ತ್ರಿಷಾಗೆ 36 ವರ್ಷ. ಚಾರ್ಮಿಗೆ 31 ವರ್ಷ. ಇಬ್ಬರಿಗು ಮದುವೆ ಆಗಿಲ್ಲ. ಇಬ್ಬರ ಬಗ್ಗೆಯೂ ಇಂಡಸ್ಟ್ರಿಯಲ್ಲಿ ಗಾಸಿಪ್ ಇದೆ. ತ್ರಿಷಾ ಸ್ಟಾರ್ ನಟನೊಬ್ಬರ ಜೊತೆ ಡೇಟ್ ಮಾಡ್ತಿದ್ದಾರೆ. ಚಾರ್ಮಿ ಸ್ಟಾರ್ ನಿರ್ದೇಶಕನ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಇದೆ.

  English summary
  'Baby I love you today and forever. Am on my knees waiting for you to accept my proposal. Let’s get married. now toh it’s legally allowed also. happy birthday Trisha" Charmme Kaur tweeted.
  Monday, May 6, 2019, 19:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X