»   » ಜೂಜಾಡಿ 25 ಲಕ್ಷ ಕಳೆದುಕೊಂಡ ಚಿಕ್ಕಣ್ಣ.!

ಜೂಜಾಡಿ 25 ಲಕ್ಷ ಕಳೆದುಕೊಂಡ ಚಿಕ್ಕಣ್ಣ.!

Posted By:
Subscribe to Filmibeat Kannada

ಚಿಕ್ಕಣ್ಣ ಗೊತ್ತಲ್ವಾ? ಅದೇ...'ರಾಜಾಹುಲಿ' ಚಿತ್ರದಲ್ಲಿ ಯಶ್ ಜೊತೆ 'ರನ್ನ' ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆ ಮಸ್ತ್ ಕಾಮಿಡಿ ಮಾಡಿದ ಚಿಕ್ಕಣ್ಣ ಈಗ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರೆ.

ಜೂಜಾಡಿ ಬರೋಬ್ಬರಿ 25 ಲಕ್ಷ ರೂಪಾಯಿಯನ್ನ ಚಿಕ್ಕಣ್ಣ ಕಳೆದುಕೊಂಡಿದ್ದಾರೆ.! ಹೌದಾ...ಅಂತ ಹುಬ್ಬೇರಿಸುವ ಮುನ್ನ ಇದು ರೀಲ್ ಸುದ್ದಿ ಅನ್ನೋದನ್ನ ನಂಬಿ ನಿಟ್ಟುಸಿರು ಬಿಡಿ.

Chikkanna shoots for 'Tale Bachkolli powder hakolli'

ಹೌದು, ಚಿಕ್ಕಣ್ಣ ಹಾಗೆ 25 ಲಕ್ಷ ಕಳೆದುಕೊಂಡಿರುವುದು 'ತಲೆ ಬಾಚ್ಕೊಳ್ಳಿ, ಪೌಡ್ರು ಹಾಕ್ಕೊಳ್ಳಿ' ಚಿತ್ರದಲ್ಲಿ. ಸಿನಿಮಾದಲ್ಲಿ ಚಿಕ್ಕಣ್ಣನಿಗೆ ತಂಗಿ ಇರುತ್ತಾಳೆ. ಆಕೆ ಮದುವೆ ಮಾಡುವುದಕ್ಕೆ ಸ್ವಂತ ಮನೆಯ ಪತ್ರವನ್ನ ಅಡವಿಟ್ಟು, 25 ಲಕ್ಷ ರೂಪಾಯಿ ಸಾಲ ಪಡೆಯುತ್ತಾರೆ.

ಸಾಲವನ್ನ ಪಡೆದು ಸೀದಾ ಮನೆಗೆ ಹೋಗದೆ, ರೈಸ್ ಪುಲ್ಲಿಂಗ್ ಆಟದಲ್ಲಿ 25 ಲಕ್ಷವನ್ನ ಡಬಲ್ ಮಾಡೋಕೆ ಹೋಗಿ ಎಲ್ಲಾ ಹಣವನ್ನೂ ಕಳೆದುಕೊಂಡು ತಲೆಯನ್ನ ಚಚ್ಚಿಕೊಳ್ತಾರೆ. ಈ ಸನ್ನಿವೇಶವನ್ನ ಇತ್ತೀಚೆಗಷ್ಟೇ ರಾಜರಾಜೇಶ್ವರಿ ನಗರದಲ್ಲಿ ಚಿತ್ರೀಕರಿಸಲಾಯ್ತು. [ಚಿಕ್ಕಣ್ಣಗೆ 'ರನ್ನ' ಸುದೀಪ್ ದುಬಾರಿ ಉಡುಗೊರೆ!]

ಎ.ವೇಣುಗೋಪಾಲ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ವಿಕ್ರಮ್ ಆರ್ಯ, ನಿಖಿತ, ಶೋಭರಾಜ್, ಬುಲೆಟ್ ಪ್ರಕಾಶ್ ಮುಂತಾದವರು ಇದ್ದಾರೆ. 'ತಲೆ ಬಾಚ್ಕೊಳ್ಳಿ, ಪೌಡ್ರು ಹಾಕ್ಕೊಳ್ಳಿ' ಚಿತ್ರ ಸದ್ಯ ಚಿತ್ರೀಕರಣದಲ್ಲಿ ಬಿಜಿಯಾಗಿದೆ.

English summary
Comedy Artist Chikkanna for the first time playing lead role in 'Tale Bachkolli powder hakolli'. The shooting of the film is in progress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada