For Quick Alerts
  ALLOW NOTIFICATIONS  
  For Daily Alerts

  ದಂಡುಪಾಳ್ಯಂ 4 ಟ್ರೈಲರ್: ಮುಂದುವರಿದ ರಕ್ಕಸರ ಅಟ್ಟಹಾಸ

  |

  ಕ್ರೂರತೆ, ಭಯಾನಕ, ರಕ್ತ, ಅತ್ಯಾಚಾರ.....ಸ್ಯಾಂಡಲ್ ವುಡ್ ಸೇರಿದಂತೆ ಸೌತ್ ಇಂಡಿಯಾದಲ್ಲಿ ದಂಡುಪಾಳ್ಯಂ ಗ್ಯಾಂಗ್ ನ ಅಟ್ಟಹಾಸ ಮುಂದುವರಿದಿದೆ. ದಂಡುಪಾಳ್ಯಂ 4 ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಥ್ರಿಲ್ ಹೆಚ್ಚಿಸಿದೆ.

  ನವೆಂಬರ್ 1 ರಂದು ದಂಡುಪಾಳ್ಯಂ 4 ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆ ಬಿಡುಗಡೆಯಾಗುತ್ತಿದೆ. ದಂಡುಪಾಳ್ಯಂ ಸರಣಿಯ ಈ ಹಿಂದಿನ ಚಿತ್ರಗಳಂತೆ ನಾಲ್ಕನೇ ಚಿತ್ರದಲ್ಲೂ ಅದೇ ಭಯಾನಕ, ಕ್ರೂರ, ಹಿಂಸೆ ಎಲ್ಲವೂ ಇದ್ದು, ಸಿನಿಮಾ ಪ್ರೇಕ್ಷಕರಿಗೆ ಭಯ ಹುಟ್ಟಿಸುತ್ತಿದೆ.

  ಸುಮನ ರಂಗನಾಥ್, ಮುಮೈತ್ ಖಾನ್ ಸೇರಿದಂತೆ ಹಲವರು ನಟಿಸಿದ್ದು, ಕೆಟಿ ನಾಯಕ್ ನಿರ್ದೇಶಿಸಿದ್ದಾರೆ. ವೆಂಕಟ್ ಈ ಚಿತ್ರವನ್ನ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಕೂಡ.

  ಪರಭಾಷೆಯಲ್ಲೂ ಸದ್ದು ಮಾಡಿದ 'ದಂಡುಪಾಳ್ಯ-4' ಲಿರಿಕಲ್ ವಿಡಿಯೋಪರಭಾಷೆಯಲ್ಲೂ ಸದ್ದು ಮಾಡಿದ 'ದಂಡುಪಾಳ್ಯ-4' ಲಿರಿಕಲ್ ವಿಡಿಯೋ

  ಕನ್ನಡದಲ್ಲಿ ಗರಿಷ್ಠ 300 ಚಿತ್ರಮಂದಿರಗಳಲ್ಲಿ ದಂಡುಪಾಳ್ಯಂ 4 ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗಿದೆ. ತೆಲುಗಿನಲ್ಲಿ 400 ಚಿತ್ರಮಂದಿರಗಳು ರಿಲೀಸ್ ಆಗ್ತಿದೆ. ಆಂಧ್ರ-ತೆಲಂಗಾಣದಲ್ಲಿ ಇದುವರೆಗೂ 400 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮೊದಲ ಕನ್ನಡ ಸಿನಿಮಾ ದಂಡುಪಾಳ್ಯಂ 4 ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದೆ.

  ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಬಳಿಕ ದಂಡುಪಾಳ್ಯಂ-4 ದಾಖಲೆಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಬಳಿಕ ದಂಡುಪಾಳ್ಯಂ-4 ದಾಖಲೆ

  ಜನವರಿ ತಿಂಗಳಲ್ಲಿ ಹಿಂದಿ, ಬೋಜ್ ಪುರಿ, ಮರಾಠಿ, ಛತ್ತೀಸ್ ಗಡ್, ಗುಜರಾತಿ, ಬೆಂಗಾಳಿ ಭಾಷೆಯಗಳಲ್ಲಿ ಏಕಕಾಲದಲ್ಲಿ 1000 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಯೋಜನೆ ಸಿದ್ಧಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.

  English summary
  Suman Ranganath, Mumaith Khan starrer Dandupalyam 4 movie will releasing on november 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X