For Quick Alerts
  ALLOW NOTIFICATIONS  
  For Daily Alerts

  ತಿಂಗಳಾದರೂ ನಿಲ್ಲುತ್ತಿಲ್ಲ ದರ್ಶನ್ 25 ವರ್ಷ ಸಿನಿಜರ್ನಿಯ ಸಂಭ್ರಮ!

  |

  ಆಗಸ್ಟ್ 11 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಬದುಕಿನಲ್ಲಿ ಮರೆಯಲಾರದ ದಿನ. ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ 'ಮಹಾಭಾರತ' ರಿಲೀಸ್ ಆಗಿದ್ದ ದಿನ. 1997 ಆಗಸ್ಟ್ 11ರಂದು ಎಸ್‌. ನಾರಾಯಣ್ ನಿರ್ದೇಶನದ 'ಮಹಾಭಾರತ' ಚಿತ್ರ ರಿಲೀಸ್ ಆಗಿತ್ತು. ಈ ಮೂಲಕ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ.

  ನಟ ದರ್ಶನ್ ತಮ್ಮ ಸಿನಿಮಾ ಬದುಕಿನಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಇದರ ಪ್ರಯುಕ್ತ ನಟ ದರ್ಶನ್ ಯಾವುದೇ ಕಾರ್ಯಕ್ರಮ ಮಾಡಿರಲಿಲ್ಲ. ಆದರೆ ತಡವಾಗಿ ಅವರ ಹಲವು ಸ್ನೇಹಿತರು ಸೇರಿ, ದರ್ಶನ್‌ರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಕ್ಕಾಗಿ ವಿಶೇಷವಾದ ಕೇಕ್ ತಯಾರಾಗಿದ್ದು, ದರ್ಶನ್ ನಟನೆಯ ಎಲ್ಲಾ ಸಿನಿಮಾಗಳ ಹೆಸರನ್ನು ಕೇಕ್ ಮೇಲೆ ಬರೆಸಲಾಗುತ್ತು.

  ನಟ ದರ್ಶನ್‌ಗಾಗಿ ಅವರ ಸ್ನೇಹಿತರ ಬಳಗ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಲ್ಲಿ ದರ್ಶನ್ ಸಿನಿಮಾರಂಗಕ್ಕೆ ಬಂದು 25 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲಾಯಿತು. ನಟ ಪ್ರಜ್ವಲ್ ದೇವರಾಜ್, ಯಶಸ್ ಸೂರ್ಯ, ಧರ್ಮ ಕೀರ್ತಿರಾಜ್ ಸೇರಿದಂತೆ ಹಲವು ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಬಳಿಕ 'ಕ್ರಾಂತಿ' ಚಿತ್ರತಂಡದ ಜೊತೆಗೆ ದರ್ಶನ್ ಈ ಸಂಭ್ರಮವನ್ನು ಆಚರಿಸಿದ್ದರು. ದರ್ಶನ್ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆ 'ಕ್ರಾಂತಿ' ಚಿತ್ರತಂಡ ದರ್ಶನ್ ಅವ್ರಿಂದ ಕೇಕ್ ಕತ್ತರಿಸಿದರು. ಈ ಸಮಯದಲ್ಲಿ ನಿರ್ದೇಶಕಿ ಶೈಲಾಜಾ ನಾಗ್, ವಿ. ಹರಿಕೃಷ್ಣ, ರಚಿತಾ ರಾಮ್ ಜೊತೆಗೆ ಇದ್ದರು. ನಂತರ ಸ್ನೇಹಿತರ ಜೊತೆಗೆ ಪಾರ್ಟಿಯಲ್ಲೂ ಭಾಗಿ ಆಗಿದ್ದರು.

  Darshan 25 Years Film Journey Celebration Not Stopped, Darshan Cutting Many Cackes

  ಈಗ ಮತ್ತೊಮ್ಮೆ ಸಂಭ್ರಮಾಚರಣೆಯಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ. ದರ್ಶನ್ ಸ್ನೇಹಿತರ ಬಳಗದಿಂದ ಮತ್ತೊಮ್ಮೆ ಕೇಕ್ ಕತ್ತರಿಸಿ ಆಚರಣೆ ಮಾಡಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ದರ್ಶನ್‌ಗಾಗಿ ವಿಶೇಷ ಕೇಕ್ ತಯರಿಸಲಾಗಿತ್ತು.

  English summary
  Darshan 25 Years Film Journey Celebration Not Stopped, Darshan Cutting Many Cackes, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X