For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೂ ಮೊದಲು 'ಪೋರ್ಕಿ' ಆಫರ್ ಹೋಗಿದ್ದು 'ಈ ನಟ'ನಿಗೆ!

  |
  Ganesh Kasaragodu revealed unknown facts about Darshan and Duniya Vijay | Oneindia Kannada

  ಮಹೇಶ್ ಬಾಬು ನಟನೆಯ 'ಪೋಕಿರಿ' ಸಿನಿಮಾ ಸೌತ್ ಇಂಡಿಯಾದಲ್ಲಿ ಆಗಿನ ಸಮಯಕ್ಕೆ ಟ್ರೆಂಡ್ ಹುಟ್ಟುಹಾಕಿತ್ತು. ತೆಲುಗಿನಲ್ಲಿ ಹಿಟ್ ಆದ ಬಳಿಕ ತಮಿಳಿನಲ್ಲೂ ಪೋಕಿರಿ ಸಿನಿಮಾ ಬಂತು. ಅಲ್ಲಿಯೂ ಸಿನಿಮಾ ಗೆದ್ದು ಬೀಗಿತು.

  ಸೌತ್ ಇಂಡಸ್ಟ್ರಿಯ ಎರಡು ಭಾಷೆಯಲ್ಲಿ ಸಕ್ಸಸ್ ಆಗಿದ್ದ ಸಿನಿಮಾ ಹಿಂದಿಯಲ್ಲೂ ಬಂತು. ವಾಂಟೆಡ್ ಹೆಸರಿನಲ್ಲಿ ಸಲ್ಮಾನ್ ಖಾನ್ ಸಿನಿಮಾ ಮಾಡಿದ್ದರು. ಹೀಗೆ, ಬಹುಭಾಷೆಯಲ್ಲಿ ಸದ್ದು ಮಾಡಿದ್ದ ಪೋಕಿರಿ ಚಿತ್ರ ಸ್ಯಾಂಡಲ್ ವುಡ್ನಲ್ಲಿ ಪೊರ್ಕಿ ಆಯ್ತು.

  ಮಲ್ಟಿಸ್ಟಾರ್ ಸಿನಿಮಾ ಮಾಡೋಕೆ ದರ್ಶನ್ ಹಿಂದೇಟು ಹಾಕುತ್ತಿರುವುದು ಇದೇ ಕಾರಣಕ್ಕೆ!

  ಡಿ-ಬಾಸ್ ದರ್ಶನ್ ಈ ಚಿತ್ರಕ್ಕೆ ನಾಯಕರಾಗಿದ್ದರು. ಪ್ರಣಿತಾ ಸುಭಾಷ್ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ಈಗ ಈ ಸಿನಿಮಾ ಬಗ್ಗೆ ಕುತೂಹಲ ಕಾರಿ ವಿಷ್ಯವೊಂದು ಬಹಿರಂಗವಾಗಿದೆ. ಏನದು?

  ಪತ್ರಕರ್ತರು ಬಿಚ್ಚಿಟ್ಟ 'ಪೊರ್ಕಿ' ಕಥೆ

  ಪತ್ರಕರ್ತರು ಬಿಚ್ಚಿಟ್ಟ 'ಪೊರ್ಕಿ' ಕಥೆ

  ಕನ್ನಡದ ಖ್ಯಾತ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೂಡು ಅವರು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಪೊರ್ಕಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಪೊರ್ಕಿ ಸಿನಿಮಾ ಹೇಗೆ ಆಯ್ತು ಎನ್ನುವುದನ್ನು ವಿವರಿಸಿದ್ದಾರೆ. ದರ್ಶನ್ ಈ ಚಿತ್ರಕ್ಕೆ ಹೇಗೆ ನಾಯಕರಾದರು ಎಂದು ತಿಳಿಸಿದ್ದಾರೆ.

  ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?

  ದುನಿಯಾ ವಿಜಯ್ ಗೆ ಆಫರ್!

  ದುನಿಯಾ ವಿಜಯ್ ಗೆ ಆಫರ್!

  ಗಣೇಶ್ ಕಾಸರಗೂಡು ಅವರು ಹೇಳಿರುವ ಪ್ರಕಾರ, ಪೊರ್ಕಿ ಚಿತ್ರಕ್ಕಾಗಿ ದುನಿಯಾ ವಿಜಯ್ ಅವರನ್ನ ಸಂಪರ್ಕಿಸಲಾಗಿತ್ತಂತೆ. ದುನಿಯಾ ವಿಜಯ್ ಅವರು ಒಪ್ಪಿಕೊಂಡಿದ್ದರಂತೆ. ಆದರೆ, ಡೇಟ್ ಹೊಂದಾಣಿಕೆ ಆಗದ ಕಾರಣ, ಅವರು ಮಾಡಲು ಆಗಲಿಲ್ಲ ಎಂಬ ವಿಚಾರವನ್ನ ನೆನಪಿಸಿಕೊಂಡಿದ್ದಾರೆ.

  ಎರಡು ತಿಂಗಳಲ್ಲಿ ಪೊರ್ಕಿ ಮುಗಿಯಿತು

  ಎರಡು ತಿಂಗಳಲ್ಲಿ ಪೊರ್ಕಿ ಮುಗಿಯಿತು

  ''ಸ್ನೇಹಿತ ಸಂತೋಷ್ ಪೈಯವರ ಮೂಲಕ ದತ್ತಾತ್ರೇಯ ಎನ್ನುವವರು ತಮಗೆ ಒಂದು ಸಿನಿಮಾ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದರು. ಅವರಲ್ಲಿ ತೆಲುಗಿನ 'ಪೋಕಿರಿ' ಸಿನಿಮಾದ ರೈಟ್ಸ್ ಇತ್ತು. ನಾನು ಮೊದಲು ಸಂಪರ್ಕಿಸಿದ್ದು ದುನಿಯಾ ವಿಜಯ್ ಅವರನ್ನು. ಅವರು ಒಪ್ಪಿಕೊಂಡರೂ ಕೂಡ ಡೇಟ್ಸ್ ಕೊಡಲು ತಡಮಾಡಿದರು. ಹಾಗೆ ದರ್ಶನ್ ಅವರನ್ನು ಸಮೀಪಿಸಿದೆವು. ನಿರ್ಮಾಪಕರು ಚಿತ್ರ ಪೂರ್ತಿ ಮಾಡುತ್ತಾರೆ ಎನ್ನುವ ಭರವಸೆಯನ್ನು ನನ್ನಿಂದ ಪಡೆದ ಬಳಿಕ ದರ್ಶನ್ ಚಿತ್ರ ಮಾಡಲು ಒಪ್ಪಿಕೊಂಡರು. ಎಂ.ಡಿ ಶ್ರೀಧರ್ ಚಿತ್ರದ ನಿರ್ದೇಶಕರು. ಬಹುಶಃ ಎರಡೇ ತಿಂಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದಂಥ ಚಿತ್ರ ಅದೊಂದೇ ಇರಬೇಕು'' ಎಂದು ಗಣೇಶ್ ಕಾಸರಗೂಡು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

  2 ವರ್ಷದ ನಂತರ ದರ್ಶನ್ ಸಿನಿಮಾಗೆ ಹಾಡು ಬರೆದ ಜಯಂತ್ ಕಾಯ್ಕಿಣಿ2 ವರ್ಷದ ನಂತರ ದರ್ಶನ್ ಸಿನಿಮಾಗೆ ಹಾಡು ಬರೆದ ಜಯಂತ್ ಕಾಯ್ಕಿಣಿ

  ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು

  ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು

  'ಪೊರ್ಕಿ' ಸಿನಿಮಾ ಕನ್ನಡದಲ್ಲೂ ಅಷ್ಟೇ ಸದ್ದು ಮಾಡಿತ್ತು. ಸ್ಯಾಂಡಲ್ ವುಡ್ನಲ್ಲಿ ಶತದಿನ ಆಚರಿಸಿಕೊಂಡಿತ್ತು. ಅದರಲ್ಲೂ ನಟಿ ಪ್ರಣಿತಾ ಅವರಿಗೆ ಬ್ರೇಕ್ ಕೊಡ್ತು. ಈಗಲೂ ಪ್ರಣಿತಾ ಅವರು ಪೊರ್ಕಿ ನಟಿ ಎಂದೇ ಖ್ಯಾತಿ ಉಳಿಸಿಕೊಂಡಿದ್ದಾರೆ. 2010ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನ ಎಂ ಡಿ ಶ್ರೀಧರ್ ನಿರ್ದೇಶಿಸಿದ್ದು, ದತ್ತಾತ್ರೇಯ ಬಚ್ಚೇಗೌಡ ನಿರ್ಮಿಸಿದ್ದರು.

  'ಗಂಡುಗಲಿ ಮದಕರಿ ನಾಯಕ' ದರ್ಶನ್ ಗಿಂತ ಈ ಇಬ್ಬರಿಗೆ ಬಹಳ ಮುಖ್ಯ!'ಗಂಡುಗಲಿ ಮದಕರಿ ನಾಯಕ' ದರ್ಶನ್ ಗಿಂತ ಈ ಇಬ್ಬರಿಗೆ ಬಹಳ ಮುಖ್ಯ!

  English summary
  Journalist Ganesh Kasaragodu revealed unknown facts about challenging

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X