For Quick Alerts
  ALLOW NOTIFICATIONS  
  For Daily Alerts

  Kranti Advance Booking : ಎರಡು ಥಿಯೇಟರ್‌ಗಳಲ್ಲಿ 'ಕ್ರಾಂತಿ' ಟಿಕೆಟ್ ಬುಕ್ಕಿಂಗ್ ಆರಂಭ: ಹೇಗಿದೆ ರೆಸ್ಪಾನ್ಸ್?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಮಾತ್ರ ಬಾಕಿಯಿದೆ. ಡಿ ಬಾಸ್ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ನೋಡೋಕೆ ಕಾಯುತ್ತಿದ್ದಾರೆ. ಇದೀಗ ನಿಧಾನವಾಗಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

  ಒಂದೊಳ್ಳೆ ಮೆಸೇಜ್ ಹೊತ್ತು ಬರುತ್ತಿರುವ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಶೈಲಜಾ ನಾಗ್, ಬಿ. ಸುರೇಶ ದಂಪತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದಾಜು 50 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗಿರುವುದಾಗಿ ಹೇಳಲಾಗುತ್ತಿದೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಸಂಯುಕ್ತಾ ಹೊರನಾಡು, ಆರ್ಮುಗ ರವಿಶಂಕರ್ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸ್ವತಃ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  ಬುಲೆಟ್ ಏರಿ 30 ಜಿಲ್ಲೆ ಸುತ್ತಿದ ದರ್ಶನ್ ಫ್ಯಾನ್:ಉಪ್ಪಿ,ಶರಣ್,ಸೃಜನ್,ಅಭಿ ಮನೆಯಲ್ಲಿ'ಕ್ರಾಂತಿ'ಬುಲೆಟ್ ಏರಿ 30 ಜಿಲ್ಲೆ ಸುತ್ತಿದ ದರ್ಶನ್ ಫ್ಯಾನ್:ಉಪ್ಪಿ,ಶರಣ್,ಸೃಜನ್,ಅಭಿ ಮನೆಯಲ್ಲಿ'ಕ್ರಾಂತಿ'

  ಜನವರಿ 26ಕ್ಕೆ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಕಳೆದೊಂದು ವರ್ಷದಿಂದ ಅಭಿಮಾನಿಗಳು ತೆರೆಮೇಲೆ ದರ್ಶನ್ 'ಕ್ರಾಂತಿ' ನೋಡಲು ಕಾಯುತ್ತಿದ್ದಾರೆ. ಸಿನಿಮಾ ಪ್ರಮೋಷನ್ ಕೂಡ ಜೋರಾಗಿದೆ.

  'ಕ್ರಾಂತಿ' ಟಿಕೆಟ್ ಬುಕ್ಕಿಂಗ್ ಶುರು

  'ಕ್ರಾಂತಿ' ಟಿಕೆಟ್ ಬುಕ್ಕಿಂಗ್ ಶುರು

  ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿರುವ ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ 'ಕ್ರಾಂತಿ'. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಿದ್ದು, ಬಿಡುಗಡೆಗೆ ಇನ್ನು 5 ದಿನಗಳು ಮಾತ್ರ ಬಾಕಿಯಿದೆ. ಸದ್ಯ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಸದ್ಯಕ್ಕೆ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಚಂದ್ರೋದಯ ಹಾಗೂ ಟಿಪಟೂರಿನ ಲಕ್ಷ್ಮಿ ಟಾಕೀಸ್‌ನಲ್ಲಿ ಮಾತ್ರ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಇದೆ. ಉಳಿದ ಕಡೆಗಳಲ್ಲಿ ಶನಿವಾರ ಬುಕ್ಕಿಂಗ್ ಶುರುವಾಗುವ ನಿರೀಕ್ಷೆಯಿದೆ. ಇನ್ನು ಅಭಿಮಾನಿಗಳು ಈಗಾಗಲೇ ಸಿನಿಮಾ ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ.

  ಸೂರ್ಯ ಹುಟ್ಟುವ ಮುನ್ನ 'ಕ್ರಾಂತಿ'

  ಸೂರ್ಯ ಹುಟ್ಟುವ ಮುನ್ನ 'ಕ್ರಾಂತಿ'

  ಬೆಳಗ್ಗೆ 5 ಗಂಟೆ 6 ಗಂಟೆಯಿಂದಲೇ ಕೆಲವೆಡೆ 'ಕ್ರಾಂತಿ' ಚಿತ್ರದ ಮೊದಲ ಪ್ರದರ್ಶನ ಆರಂಭವಾಗಲಿದೆ. ಸೂರ್ಯ ಹುಟ್ಟುವ ಮುನ್ನ ಅಭಿಮಾನಿಗಳು ತೆರೆಮೇಲೆ ದರ್ಶನ್ 'ಕ್ರಾಂತಿ' ಕಣ್ತುಂಬಿಕೊಳ್ಳಬಹುದು. ಚಂದ್ರೋದಯ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆ 5 ನಿಮಿಷಕ್ಕೆ ಶೋ ಆರಂಭವಾಗಲಿದೆ. ಈಗಾಗಲೇ ಬುಕ್‌ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ.

  ಅಕ್ಷರ 'ಕ್ರಾಂತಿ'ಯ ಕಥೆ

  ಅಕ್ಷರ 'ಕ್ರಾಂತಿ'ಯ ಕಥೆ

  'ಕ್ರಾಂತಿ' ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳಲಾಗುತ್ತಿದೆ. ಅಂದರೆ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗುತ್ತಿದೆ. ಇನ್ನು ಅಭಿಮಾನಿಗಳು ಕೇಳುವ ಫೈಟ್ಸ್, ಸಾಂಗ್ಸ್, ಡೈಲಾಗ್ಸ್ ಎಲ್ಲವೂ ಸಿನಿಮಾದಲ್ಲಿದೆ. ಈಗಾಗಲೇ ಚಿತ್ರದ 4 ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್‌ಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಹುತೇಕ ಸೆಟ್‌ಗಳಲ್ಲೇ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ನಿಮಿಕಾ ರತ್ನಾಕರ್ ಚಿತ್ರದ ಸ್ಪೆಷಲ್ ಸಾಂಗ್‌ಗೆ ಕುಣಿದಿದ್ದಾರೆ. ಚಿತ್ರದಲ್ಲಿ ಕ್ರಾಂತಿ ರಾಯಣ್ಣ ಎನ್ನುವ ಎನ್‌ಆರ್‌ಐ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.

  'ಕ್ರಾಂತಿ' ಗೆಲ್ಲಲೇಬೇಕಿದೆ

  'ಕ್ರಾಂತಿ' ಗೆಲ್ಲಲೇಬೇಕಿದೆ

  ಇತ್ತೀಚಿನ ದಿನಗಳಲ್ಲಿ ನಡೆದ ಒಂದಷ್ಟು ಘಟನೆಗಳಿಂದ ದರ್ಶನ್ ಕರಿಯರ್ ಮುಗಿದೇ ಹೋಯಿತು ಎನ್ನುವಂತಹ ಚರ್ಚೆ ನಡೀತಿದೆ. ಅದನ್ನೆಲ್ಲಾ ಮೀರಿ 'ಕ್ರಾಂತಿ' ಸಿನಿಮಾ ಗೆಲ್ಲಲೇಬೇಕಿದೆ. ಅಭಿಮಾನಿಗಳು ಡಿ ಬಾಸ್ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಒಂದು ದಿನ ಮೊದಲು 'ಕ್ರಾಂತಿ' ಚಿತ್ರದ ಪ್ರೀಮಿಯರ್ ಶೋಗಳು ಆರಂಭವಾಗುವುದು ಅನುಮಾನ. ಪ್ರೇಕ್ಷಕರು ಗುರುವಾರ ಬೆಳಗ್ಗೆಯಿಂದಲೇ ಸಿನಿಮಾ ನೋಡಬಹುದು. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

  English summary
  Darshan Starrer Kranti Advance Ticket Booking opened in Chandrodaya Theatre. Action Entertainer Movie is set to release on Republic Day 2023. Know more.
  Friday, January 20, 2023, 22:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X