ಗುರುವಿಗಾಗಿ ಸುದೀಪ್, ಸ್ನೇಹಿತನಿಗಾಗಿ ದರ್ಶನ್ ಮುಖಾಮುಖಿ ಆಗ್ತಾರಾ?

Recommended Video

ಗುರುವಿಗಾಗಿ ಸುದೀಪ್, ಸ್ನೇಹಿತನಿಗಾಗಿ ದರ್ಶನ್..! | FILMIBEAT KANNADA

ಕಿಚ್ಚ ಸುದೀಪ್ ಮತ್ತು ದರ್ಶನ್ ಒಟ್ಟಿಗೆ ಕಾಣಿಸಿಕೊಂಡು ವರ್ಷಗಳೇ ಕಳೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಿಚ್ಚ ಮತ್ತು ದಚ್ಚು ಒಂದೇ ವೇದಿಕೆಯಲ್ಲಿ ಭಾಗವಹಿಸುವುದು ಕಷ್ಟಸಾಧ್ಯ ಎಂಬ ಮಾತಿದೆ.

ಆದ್ರೆ, ಕೆಲವು ಕಾರ್ಯಕ್ರಮಗಳು ಈ ಮಾತನ್ನ ಸುಳ್ಳು ಮಾಡಿಬಿಡುತ್ತಾ ಎಂಬ ಕುತೂಹಲವನ್ನ ಸೃಷ್ಟಿಸುತ್ತೆ. ಈಗ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದ ಮೇಲೆ ಇಂಡಸ್ಟ್ರಿಯ ಕಣ್ಣು ಬಿದ್ದಿದೆ.

ಸಸ್ಪೆನ್ಸ್ ಥ್ರಿಲ್ಲರ್ ಖ್ಯಾತಿಯ ಸುನೀಲ್ ಕುಮಾರ್ ದೇಸಾಯಿ ಸಿನಿಮಾ ಎಂಬುದು ಒಂದು ಕುತೂಹಲವಾದ್ರೆ, ಈ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಸುದೀಪ್ ಮುಖಾಮುಖಿ ಆಗ್ತಾರಾ ಎಂಬ ಕುತೂಹಲ ಇನ್ನೊಂದು ಕಡೆ ಕಾಡ್ತಿದೆ. ಅದಕ್ಕೂ ಬಲವಾದ ಕಾರಣವಿದೆ? ಏನದು? ಮುಂದೆ ಓದಿ....

ಮಾರ್ಚ್ 5ಕ್ಕೆ ಉದ್ಘರ್ಷ ಟ್ರೈಲರ್ ಬಿಡುಗಡೆ

ಮಾರ್ಚ್ 5ಕ್ಕೆ ಉದ್ಘರ್ಷ ಟ್ರೈಲರ್ ಬಿಡುಗಡೆ

ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಉದ್ಘರ್ಷ ಚಿತ್ರದ ಟ್ರೈಲರ್ ಮಾರ್ಚ್ 5 ರಂದು ಬಿಡುಗಡೆ ಆಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟ್ರೈಲರ್ ರಿಲೀಸ್ ಮಾಡಲಿದ್ದಾರಂತೆ.

'ಯಜಮಾನ' ಖಳನಾಯಕ ಇಲ್ಲಿ ನಾಯಕ

'ಯಜಮಾನ' ಖಳನಾಯಕ ಇಲ್ಲಿ ನಾಯಕ

ದರ್ಶನ್ ಅಭಿನಯದ ಯಜಮಾನ ಸಿನಿಮಾ ಈ ವಾರ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್ ಖಳನಾಯಕನಾಗಿ ಮಿಂಚಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ಟ್ರೈಲರ್ ರಿಲೀಸ್ ಮಾಡಿರುವ ಸುನೀಲ್ ಕುಮಾರ್ ದೇಸಾಯಿ ಚಿತ್ರದ ನಾಯಕ ಚಿತ್ರದ ಚಿತ್ರದಲ್ಲಿ ಖಳನಾಯಕ. ಹಾಗಾಗಿ, ದರ್ಶನ್ ಅವರಿಗೆ ಕಾರ್ಯಕ್ರಮ ತುಂಬಾ ವಿಶೇಷವೆನ್ನಬಹುದು. ಇನ್ನು ವಿಶೇಷ ಅಂದ್ರೆ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ ಪಾತ್ರ ಮಾಡಿದ್ದ ಡ್ಯಾನಿಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಠಾಕೂರ್ ಅವರಿಗೂ ದಾಸನ ಮೇಲೆ ಅತಿಯಾದ ಅಭಿಮಾನವಿದೆ. ಹಾಗಾಗಿಯೇ ಈ ಟ್ರೈಲರ್ ರಿಲೀಸ್ ಮಾಡುತ್ತಿರಬಹುದು.

ಕಿಚ್ಚ ಸುದೀಪ್ ಬರ್ತಾರಾ?

ಕಿಚ್ಚ ಸುದೀಪ್ ಬರ್ತಾರಾ?

ಅಂದ್ಹಾಗೆ, ಉದ್ಘರ್ಷ ಚಿತ್ರದ ಟ್ರೈಲರ್ ಗೆ ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಸುದೀಪ್ ವಾಯ್ಸ್ ಇರುವ ಟ್ರೈಲರ್ ಅನ್ನ ದರ್ಶನ್ ಲಾಂಚ್ ಮಾಡಲಿದ್ದಾರೆ. ಬಹುಶಃ ಸುದೀಪ್ ಅವರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ಹೋಗಿರಬಹುದಾ? ಒಂದು ವೇಳೆ ಆಹ್ವಾನ ಹೋಗಿದ್ರೆ, ಸುದೀಪ್ ಈ ಕಾರ್ಯಕ್ರಮಕ್ಕೆ ಬರ್ತಾರಾ?

ಗುರುವಿಗಾಗಿ ಸುದೀಪ್

ಗುರುವಿಗಾಗಿ ಸುದೀಪ್

ಉದ್ಘರ್ಷ ಚಿತ್ರದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸುದೀಪ್ ಅವರ ಗುರುಗಳು. ಸುದೀಪ್ ಗೆ ಸ್ಪರ್ಶ ಸಿನಿಮಾದ ಮೂಲಕ ಬ್ರೇಕ್ ಕೊಟ್ಟ ಡೈರೆಕ್ಟರ್. ಗುರುಗಳ ಚಿತ್ರಕ್ಕೆ ಸಾಥ್ ನೀಡಿರುವ ಸುದೀಪ್, ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಬರಬಹುದು ಎಂಬ ಕುತೂಹಲ ಹೆಚ್ಚಿದೆ. ಒಂದು ವೇಳೆ ಗುರುವಿಗಾಗಿ ದರ್ಶನ್, ಸ್ನೇಹಿತನಿಗಾಗಿ ದರ್ಶನ್ ಇಬ್ಬರು ಮುಖಾಮುಖಿಯಾಗಬಹುದು? ಕಾದುನೋಡೋಣ.

More from Filmibeat

English summary
Challenging star darshan will launch udgarsha movie trailer on march 5th. the movie directed by sunil kumar desai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X