For Quick Alerts
  ALLOW NOTIFICATIONS  
  For Daily Alerts

  ಮಗಳ ಮದುವೆಗೆ ಬಾಲಿವುಡ್ ಮಂದಿಯನ್ನು ಹಿಡಿದು ತಂದ ಶ್ರೀರಾಮುಲು

  |

  ದೀಪಿಕಾ ಪಡುಕೋಣೆಗೂ ಶ್ರೀರಾಮುಲು ಗೂ ಎತ್ತಣಿಂದೆತ್ತ ಸಂಬಂಧ ಎಂದುಕೊಳ್ಳುವಂತಿಲ್ಲ. ವೈಭವೋಪೇತವಾಗಿ ಮಗಳ ಮದುವೆ ಮಾಡುತ್ತಿರುವ ಶ್ರೀರಾಮುಲು ಮಗಳ ಮದುವೆಗೆ ಬಾಲಿವುಡ್ ಟಚ್ ಕೊಟ್ಟಿದ್ದಾರೆ.

  ರಾಮುಲು ಮಗಳಿಗೆ ಮೇಕಪ್ ಮಾಡ್ತಿದ್ದಾರೆ ಬಾಲಿವುಡ್ ಮೇಕಪ್ ಆರ್ಟಿಸ್ಟ್ | Sri Ramulu Daughters Marriage

  ಖ್ಯಾತ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೆ ಆಕೆಯ ಮದುವೆಯಂದು ಮೇಕಪ್ ಮಾಡಿದ್ದ ಖ್ಯಾತ ಪ್ರಸಾಧನಕಾರ್ತಿ (ಮೇಕಪ್ ಆರ್ಟಿಸ್ಟ್) ಅನ್ನೇ ತಮ್ಮ ಮಗಳಿಗೆ ಮೇಕಪ್ ಮಾಡಲು ಕರೆತಂದಿದ್ದಾರೆ. ಮದುವೆ ಸಂಭ್ರಮ ಈಗಾಗಲೇ ಆರಂಭವಾಗಿದ್ದು, ವಿವಾಹ ಮಾರ್ಚ್ 5 ರಂದು ನೆರವೇರಲಿದೆ.

  ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆ ಸಂಭ್ರಮದಲ್ಲಿ ದೀಪಿಕಾ ಪಡುಕೋಣೆಗೆ ಮೇಕಪ್ ಮಾಡಿದ್ದ ಸಂಧ್ಯಾ ಶೇಖರ್ ಅವರೇ ಶ್ರೀರಾಮು ಪುತ್ರಿ ರಕ್ಷಿತಾ ಅವರಿಗೆ ಮೇಕ್‌ಅಪ್ ಮಾಡಿ ಅಂದ ಹೆಚ್ಚಿಸಲಿದ್ದಾರೆ.

  ಸ್ಟಾರ್ ವಸ್ತ್ರ ವಿನ್ಯಾಸಕರಿಂದ ಉಡುಗೆ

  ಸ್ಟಾರ್ ವಸ್ತ್ರ ವಿನ್ಯಾಸಕರಿಂದ ಉಡುಗೆ

  ಸ್ಯಾಂಡಲ್‌ವುಡ್‌ ನ ಸ್ಟಾರ್ ವಸ್ತ್ರವಿನ್ಯಾಸಕಿ ಸಾನಿಯಾ ಸರ್ದಾರಿಯಾ ಅವರು ರಕ್ಷಿತಾ ಅವರಿಗೆ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಮದುವೆಯ ಉಡುಗೆಗಳಿಗೆ ರಾಯಲ್ ಟಚ್ ನೀಡಲಿದ್ದಾರೆ.

  ಅಂಬಾನಿ ಮಗನ ಮದುವೆ ಫೋಟೊಗ್ರಾಫರ್

  ಅಂಬಾನಿ ಮಗನ ಮದುವೆ ಫೋಟೊಗ್ರಾಫರ್

  ಈ ಮದುವೆಗೆ ವಿಡಿಯೋ ಮತ್ತು ಫೊಟೊಗ್ರಫಿ ಮಾಡುತ್ತಿರುವುದು ಅಂಬಾನಿ ಮಗನ ಮದುವೆಗೆ ವಿಡಿಯೋಗ್ರಫಿ ಮಾಡಿದ್ದ ಜಯರಾಮನ್‌ ಪಿಳ್ಳೈ. ಅವರ ಜತೆ ದಿಲೀಪ್‌ ಎಂಬುವವರು ಕೈ ಜೋಡಿಸಿದ್ದಾರೆ.

  ಬಾಲಿವುಡ್ ಕಲಾನಿರ್ದೇಶಕರಿಂದ ಸೆಟ್

  ಬಾಲಿವುಡ್ ಕಲಾನಿರ್ದೇಶಕರಿಂದ ಸೆಟ್

  ಮುಂಬೈನಿಂದ ಬಂದಿರುವ ಬಾಲಿವುಡ್‌ನ ಕಲಾನಿರ್ದೇಶಕರು ಮತ್ತು ಕರ್ನಾಟಕದ ಖ್ಯಾತ ಕಲಾ ನಿರ್ದೇಶಕರು ಆರತಕ್ಷತೆ ಸೆಟ್‌ ಹಾಕುತ್ತಿರುವುದು ವೈಶಿಷ್ಟ್ಯ. ಇನ್ನು ಮದುವೆಯ ಕಲ್ಯಾಣ ಮಂಟಪದ ಸೆಟ್ ಅನ್ನು ಖ್ಯಾತ ವೆಡ್ಡಿಂಗ್ ಪ್ಲ್ಯಾನರ್ ಧ್ರುವ ಅವರು ಪ್ಲ್ಯಾನ್ ಮಾಡಿದ್ದಾರೆ. ಇದಕ್ಕಾಗಿಯೇ 300 ಮಂದಿ ಕೆಲಸ ಮಾಡಿದ್ದಾರೆ.

  ಅದ್ಧೂರಿ ಮದುವೆಗೆ ಸಜ್ಜಾಗಿದೆ ಅರಮನೆ ಮೈದಾನ

  ಅದ್ಧೂರಿ ಮದುವೆಗೆ ಸಜ್ಜಾಗಿದೆ ಅರಮನೆ ಮೈದಾನ

  ಅರಮನೆ ಮೈದಾನದ 40 ಎಕರೆ ಜಾಗದಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗುತ್ತಿದೆ. 15 ಎಕರೆ ಪಾರ್ಕಿಂಗ್‌ಗೆ ಮೀಸಲಿಡಲಾಗುತ್ತಿದೆ. 27 ಎಕರೆಯಲ್ಲಿ ಮದುವೆ ಕಾರ್ಯ ನಡೆಯಲಿದೆ. ಮುಹೂರ್ತದ ಸೆಟ್ ನ್ನು ಸುಮಾರು 4 ಎಕರೆಯಲ್ಲಿ ಹಾಕಲಾಗುತ್ತಿದೆ. ಆರತಕ್ಷತೆಗೆ ಮೂರೂವರೆ ಎಕರೆಯನ್ನು ಬಳಸಿಕೊಳ್ಳಲಾಗುತ್ತಿದೆ. ಊಟಕ್ಕಾಗಿ 6 ಎಕರೆಯನ್ನು ಮೀಸಲಿಡಲಾಗುತ್ತಿದೆ. ಇದಕ್ಕಾಗಿ ಕರ್ನಾಟಕದ ಖ್ಯಾತ ಟೆಂಟ್ ಹೌಸ್ ಉದ್ಯಮಿ ಅಮಾನುಲ್ಲಾಖಾನ್ ಆಂಡ್ ಸನ್ಸ್ ಪೀಠೋಪಕರಣ ವ್ಯವಸ್ಥೆ ಮಾಡಿದೆ. ರಾಷ್ಟ್ರದ ಖ್ಯಾತ ರೆನಾಲ್ಡ್ಸ್ ಕಂಪೆನಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಿದೆ.

  English summary
  Sri Ramulu's Daugter marriage is on March 05. Bollywood actress Deepika Padukone's make up artist doing make up for Ramulu's daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X