For Quick Alerts
  ALLOW NOTIFICATIONS  
  For Daily Alerts

  ಮಾನ್ಸೂನ್‌ ಮಳೆಯಲ್ಲಿ ಧನಂಜಯ- ರಚ್ಚು ಪ್ರೇಮ ರಾಗ ಹಾಡಿದಾಗ!

  |

  ಡಾಲಿ ಧನಂಜಯ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯ 'ಮಾನ್ಸೂನ್ ರಾಗ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಿನಿರಸಿಕರ ಪ್ರೀತಿ ಗಳಿಸಿದೆ. ಈ ಹಿಂದೆ 'ಪುಷ್ಪಕ ವಿಮಾನ' ಅನ್ನುವ ಫೀಲ್ ಗುಡ್ ಸಿನಿಮಾ ಮಾಡಿದ್ದ ಅದೇ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದೆ.

  ಆಗಸ್ಟ್ 19ಕ್ಕೆ 'ಮಾನ್ಸೂನ್ ರಾಗ' ಸಿನಿಮಾ ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ಬರ್ತಿದೆ. ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಮಳೆ ಬಿಟ್ಟು ಬಿಡದೇ ಸುರಿಯುತ್ತಲೇ ಇದೆ. ಈ ಸಿನಿಮಾ ಕಥೆ ಕೂಡ ಮಳೆಯ ಜೊತೆ ಜೊತೆಗೆ ಸಾಗುತ್ತದೆ. 70-80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಅನ್ನೋದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ. ನಿರ್ದೇಶಕ ಎಸ್‌. ರವೀಂದ್ರನಾಥ್ ಒಂದು ವಿಭಿನ್ನ ಪ್ರೇಮಕಥೆಯನ್ನು ಚಿತ್ರದಲ್ಲಿ ಹೇಳೋಕೆ ಹೊರಟಿದ್ದಾರೆ. ಅಚ್ಯುತ್‌ಕುಮಾರ್, ಸುಹಾಸಿನಿ, ಯಶಾ ಶಿವಕುಮಾರ್ ತಾರಾಗಣದಲ್ಲಿದ್ದಾರೆ. ಈಗಾಗಲೇ ಅನೂಪ್ ಸಿಳೀನ್ ಮ್ಯೂಸಿಕ್‌ನಲ್ಲಿ 'ಮಾನ್ಸೂನ್ ರಾಗ' ಹಿಟ್ ಆಗಿದೆ.

  15ನೇ ವಯಸ್ಸಿಗೆ ಮಾಲಾಶ್ರೀ ಚಿತ್ರರಂಗ ಪ್ರವೇಶ: ಮಗಳ ವಯಸ್ಸು ಎಷ್ಟು?15ನೇ ವಯಸ್ಸಿಗೆ ಮಾಲಾಶ್ರೀ ಚಿತ್ರರಂಗ ಪ್ರವೇಶ: ಮಗಳ ವಯಸ್ಸು ಎಷ್ಟು?

  ಖಡಕ್‌ ರೋಲ್‌ಗಳಲ್ಲಿ ಅಬ್ಬರಿಸುತ್ತಿರುವ ಡಾಲಿ ಧನಂಜಯ ಈ ಚಿತ್ರದಲ್ಲಿ ಅದಕ್ಕೆ ತದ್ವಿರುದ್ಧ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಂತ ಆಕ್ಷನ್ ಇಲ್ಲ ಅಂತಲ್ಲ. ಚಿತ್ರದಲ್ಲಿ ಮಾಸ್‌ ಅಂಡ್ ಕ್ಲಾಸ್ ಅವತಾರದಲ್ಲಿ ಅಭಿಮಾನಿಗಳು ಡಾಲಿಯನ್ನು ನೋಡಬಹುದು. ಇನ್ನು ರೆಟ್ರೋ ಸ್ಟೈಲ್ ಸಿನಿಮಾ ಆಗಿರುವುದರಿಂದ ಆಗಿನ ಕಾಲವನ್ನು ಕಟ್ಟಿಕೊಡೋಕೆ ಚಿತ್ರತಂಡ ಬಹಳ ಕಷ್ಟಪಟ್ಟಿದೆ. ಗುರು ಕಶ್ಯಪ್ ಸಂಭಾಷಣೆ, ನವೀನ್ . ಜಿ ಪೂಜಾರಿ ಛಾಯಾಗ್ರಹಣ 'ಮಾನ್ಸೂನ್ ರಾಗ' ಚಿತ್ರಕ್ಕಿದೆ. 'ಪುಷ್ಪಕ ವಿಮಾನ' ಸಿನಿಮಾ ನಿರ್ಮಿಸಿದ್ದ ವಿಖ್ಯಾತ್ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ.

   ಅಪರೂಪದ ಪ್ರೇಮಕಥೆ

  ಅಪರೂಪದ ಪ್ರೇಮಕಥೆ

  ಟ್ರೈಲರ್ ನೋಡ್ತಿದ್ರೆ, 'ಮಾನ್ಸೂನ್ ರಾಗ' ಸಿನಿಮಾ ಒನ್‌ಲೈನ್ ಸ್ಟೋರಿ ಏನು ಅನ್ನುವುದು ಅರ್ಥವಾಗುತ್ತದೆ. "ನಿನಗೆ ಒಳ್ಳೆ ಹುಡುಗೀರು ತುಂಬಾ ಜನ ಸಿಗ್ತಿದ್ರು. ನಾನು ಈ ರೀತಿ ಅಂತಾ ಗೊತ್ತಿದ್ರೂ ಯಾಕ್ ನನ್ನ ಲವ್ ಮಾಡ್ದೆ" ಅಂತ ರಚಿತಾ ರಾಮ್ ಹೇಳುವ ಡೈಲಾಗ್ ಜೊತೆಗೆ ಟ್ರೈಲರ್ ಶುರುವಾಗುತ್ತದೆ. ಅಲ್ಲಿಂದ ಮುಂದೆ ಅನೂಪ್ ಸಿಳೀನ್ ಹಿನ್ನೆಲೆ ಸಂಗೀತದ ಮೇಲೆ ದೃಶ್ಯ ಚಿತ್ತಾರ ಅನಾವರಣಗೊಳ್ಳುತ್ತಾ ಹೋಗುತ್ತದೆ. ಪ್ರತಿ ದೃಶ್ಯ ಕಣ್ಣಿಗೆ ಹಬ್ಬ ಅನ್ನುವಂತೆ ತಿದ್ದಿ ತೀಡಿದ್ದಾರೆ. ಮಳೆಯಲ್ಲಿ, ಬಣ್ಣಗಳಲ್ಲಿ ಆಟವಾಡಿದ್ದಾರೆ. ಚಿತ್ರದಲ್ಲಿ ಅಂಡರ್‌ವರ್ಲ್ಡ್ ವ್ಯಕ್ತಿ ವೇಶ್ಯೆಯೊಬ್ಬಳನ್ನು ಪ್ರೀತಿಸುವ ಕಥೆ ಇದೆ.

  ಸುದೀಪ್ ಸಿನಿಮಾ ನಿರ್ದೇಶನ ಆರಂಭಿಸಲು ಆ ಭಿನ್ನಾಭಿಪ್ರಾಯ ಕಾರಣಸುದೀಪ್ ಸಿನಿಮಾ ನಿರ್ದೇಶನ ಆರಂಭಿಸಲು ಆ ಭಿನ್ನಾಭಿಪ್ರಾಯ ಕಾರಣ

   ಸಿನಿಮಾದಲ್ಲಿದ್ದಾರೆ ಹೊಸ ಧನಂಜಯ

  ಸಿನಿಮಾದಲ್ಲಿದ್ದಾರೆ ಹೊಸ ಧನಂಜಯ

  ಹತ್ತು ಜನ ಬಂದರು ಮುನ್ನುಗ್ಗಿ ಹೊಡೆಯುವ ಗಟ್ಟಿಗ ಅವನು. ಆದರೆ ಆಕೆಯ ಪ್ರೀತಿಯಲ್ಲಿ ಬಿದ್ದಮೇಲೆ ಮಗುವಿನಂತಾಗಿ ಬಿಡುತ್ತಾನೆ. ಒಂದೆರಡು ಸನ್ನಿವೇಶಗಳಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಧನಂಜಯ ಉಳಿದಂತೆ ಮುಗ್ಧ ಪ್ರೇಮಿಯಾಗಿ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಧನು ತನ್ನೊಳಗಿನ ಅದ್ಭುತ ನಟನನ್ನು ಮತ್ತೊಮ್ಮೆ ಬಡಿದೆಬ್ಬಿಸಿದಂತೆ ಕಾಣುತ್ತಿದೆ.

   ವೇಶ್ಯೆಯ ಪಾತ್ರದಲ್ಲಿ ಡಿಂಪಲ್ ಕ್ವೀನ್

  ವೇಶ್ಯೆಯ ಪಾತ್ರದಲ್ಲಿ ಡಿಂಪಲ್ ಕ್ವೀನ್

  ಡ್ರೀಮ್ ರೋಲ್ ಯಾವ್ದು ಅಂತ ಕೇಳಿದ್ರೆ, ಸಾಕಷ್ಟು ಜನ ನಟಿಯರು ಹೇಳುವುದು ವೇಶ್ಯೆಯ ಪಾತ್ರ. ಆದರೆ ಹೇಳಿದಷ್ಟು ಸುಲಭ ಅಲ್ಲ ಆ ಪಾತ್ರ ಮಾಡೋದು. ವೇಶ್ಯೆ ಅಂದಾಕ್ಷಣ ಎಲ್ಲರೂ ನೋಡುವ ರೀತಿಯೇ ಬೇರೆ. ಇಂತಾದೊಂದು ಚಾಲೆಂಜಿಂಗ್‌ ರೋಲ್‌ನಲ್ಲಿ ರಚ್ಚು ಮೋಡಿ ಮಾಡಿದ್ದಾರೆ. ಕಣ್ಣಲ್ಲೇ ಸಾಕಷ್ಟು ವಿಷಯಗಳನ್ನು ದಾಟಿಸುವ ಸಾಹಸವನ್ನು ಮಾಡಿದಂತೆ ಕಾಣುತ್ತದೆ. ಪಾತ್ರಕ್ಕೆ ತಕ್ಕಂತೆ ರಚಿತಾ ರಾಮ್ ಕೊಂಚ ಬೋಲ್ಡ್‌ ಆಗಿ ದರ್ಶನ ಕೊಟ್ಟಿದ್ದು, ಅವರ ಲುಕ್, ಕಾಸ್ಟ್ಯೂಮ್‌ ಎಲ್ಲವೂ ಸೊಗಸಾಗಿದೆ.

   ಗಮನ ಸೆಳೆಯುವ ಅಚ್ಯುತ್- ಸುಹಾಸಿನಿ

  ಗಮನ ಸೆಳೆಯುವ ಅಚ್ಯುತ್- ಸುಹಾಸಿನಿ

  ಅಚ್ಯುತ್ ಕುಮಾರ್ ಹಾಗೂ ಬಹುಭಾಷಾ ನಟಿ ಸುಹಾಸಿನಿ 'ಮಾನ್ಸೂನ್ ರಾಗ' ಚಿತ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿ ಕೂಡ ಸೊಗಸಾಗಿ ಮೂಡಿ ಬಂದಿರೋದನ್ನು ಟ್ರೈಲರ್‌ನಲ್ಲಿ ನೋಡಬಹುದು. ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಅವರಿಗೆ ಒಂದು ಹಾಡು ಇದೆಯಂತೆ. ಇನ್ನು ಯಶಾ ಶಿವಕುಮಾರ್ ಪಾತ್ರ ಏನು ಅನ್ನೋದು ಸಿನಿಮಾ ನೋಡಿದ ಮೇಲೆ ಗೊತ್ತಾಗಲಿದೆ.

   ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ

  ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ

  ಸದ್ಯ ಟ್ರೈಲರ್‌ ರಿಲೀಸ್ ಮಾಡಿರೋ ಚಿತ್ರತಂಡ ಮಾನ್ಸೂನ್‌ ಮಳೆ ಸೀಸನ್‌ನಲ್ಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿರೋದಕ್ಕೆ ಖುಷಿಯಾಗಿದೆ. ಚಿತ್ರದಲ್ಲಿ ಯಾವುದೇ ಮುಜುಗರ ದೃಶ್ಯಗಳಿಲ್ಲ. ಕಂಪ್ಲೀಟ್ ಫ್ಯಾಮಿಲಿ ಕೂತು ನೀಡುವ ಸಿನಿಮಾ ಅಂತ ಚಿತ್ರತಂಡ ಹೇಳುತ್ತಿದೆ. ಶೇಕಡಾ 80ರಷ್ಟು ಚಿತ್ರವನ್ನು ಮಳೆಯಲ್ಲೇ ಶೂಟ್ ಮಾಡಲಾಗಿದೆ. ಇನ್ನು ಗುರು ಕಶ್ಯಪ್ ಚಿತ್ರಕ್ಕೆ ಸೊಗಸಾದ ಸಂಭಾಷಣೆ ಬರೆದಿದ್ದು, ಕೆಲ ದಿನಗಳ ಹಿಂದೆ ಅವರು ಕೊನೆಯುಸಿರೆಳಿದಿದ್ದರು.

  English summary
  Dhananjaya And Rachita Ram's Upcoming Movie Monsoon Raaga Trailer Released. know More.
  Sunday, August 7, 2022, 16:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X