»   » ನೀರಿನಲ್ಲಿ ಮುಳುಗಿ ಇಬ್ಬರು ನಟಿಯರು ದುರಂತ ಸಾವು

ನೀರಿನಲ್ಲಿ ಮುಳುಗಿ ಇಬ್ಬರು ನಟಿಯರು ದುರಂತ ಸಾವು

By: ಶಂಕರ್, ಚೆನ್ನೈ
Subscribe to Filmibeat Kannada
Actor Dhanush
ಶೂಟಿಂಗ್ ನಲ್ಲಿ ಆಗಾಗ ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇವೆ. ರಜನಿಕಾಂತ್ ಅವರ ಅಳಿಮಯ್ಯ ಹಾಗೂ ನಟ ಧನುಷ್ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ಈ ರೀತಿಯ ದುರಂತವೊಂದು ಸಂಭವಿಸಿದೆ. ಇಬ್ಬರು ನಟಿಯರು ನೀರಿನಲ್ಲಿ ಮುಳುಗಿ ಸಾವಪ್ಪಿದ್ದಾರೆ.

ಧನುಷ್ ಅಭಿನಯಿಸುತ್ತಿರುವ ತಮಿಳಿನ 'ನಯ್ಯಾಂಡಿ' ಚಿತ್ರೀಕರಣ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರದ ಶೂಟಿಂಗ್ ತಿರುವಾರೂರಿನಲ್ಲಿ ನಡೆಯುತ್ತಿದೆ. ಈ ಚಿತ್ರದ ಸಹ ನಟಿಯರಾದ ಸರಸ್ವತಿ (24), ಸುಕನ್ಯಾ (22) ಹಾಗೂ ವಿಜಿ (21) ಎಂಬುವವರು ಕೊಳವೊಂದರಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಮೂವರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಆಳವಿಲ್ಲದ ಸ್ಥಳದಲ್ಲಿ ಇವರು ಸ್ನಾನ ಮಾಡುತ್ತಿದ್ದರು. ಇನ್ನೂ ಮುಂದೆ ಆಳಕ್ಕೆ ಇಳಿದಾಗ ನೀರಿನಲ್ಲಿನಲ್ಲಿರುವ ಗಿಡಗಂಟೆಗಳು ಇವರ ಕಾಲಿಗೆ ಸುತ್ತಿಕೊಂಡಿವೆ. ಇವರು ಅಲ್ಲಿಂದ ಹೊರಬರಲು ಸಾಧ್ಯವಾಗದೆ ನೀರಿನಲ್ಲಿ ಸಿಲುಕಿ ಸಾವಪ್ಪಿದ್ದಾರೆ.

ಸುಕನ್ಯಾ ಅವರನ್ನು ಮಾತ್ರ ಜೀವಂತ ಉಳಿಸಲು ಸಾಧ್ಯವಾಗಿದೆ. ಉಳಿದ ಇಬ್ಬರು ಮುಳುಗಿ ಸಾವಪ್ಪಿದ್ದಾರೆ. ಮೃತರ ದೇಹಗಳನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಸುಕನ್ಯಾ ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಕಳೆದ ಒಂದು ವಾರದಿಂದ ತಿರುವಾರೂರು ಜಿಲ್ಲೆಯಲ್ಲಿ 'ನಯ್ಯಾಂಡಿ' ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಈ ದುರಂತ ಸಂಭವಿಸಿದ ಮೇಲೆ ಚಿತ್ರತಂಡ ಅಲ್ಲಿಂದ ಸ್ಥಳಾಂತರವಾಗಿದೆ. ಚಿತ್ರದ ನಿರ್ದೇಶಕ ಸರ್ಕೂನಂ ಅವರು ಚೆನ್ನೈಗೆ ವಾಪಸಾಗಿದ್ದಾರೆ.

English summary
Dhanush, who is basking with the positive response for the trailer of his debut film Raanjhnaa, could has a shocking news to bear with, as his two of his co-stars in forthcoming Tamil film Naiyaandi were drowned earlier today.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada