Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಣ್ಣನನ್ನು ಕಳೆದುಕೊಂಡು ಖಿನ್ನತೆಗೆ ಜಾರಿದರೇ ಧ್ರುವ ಸರ್ಜಾ?
ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಪರಸ್ಪರ ಪ್ರೀತಿ ಎಲ್ಲರಿಗೂ ಗೊತ್ತಿರುವುದೇ. ಅಣ್ಣನನ್ನು ಕಳೆದುಕೊಂಡು ಒಂಟಿಯಾಗಿರುವ ಧ್ರುವ ಸರ್ಜಾ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.
ಹೌದು, ಚಿರಂಜೀವಿ ಸರ್ಜಾ ಅಕಾಲಿಕ ಮರಣ ಕುಟುಂಬ ಸದಸ್ಯರನ್ನು, ಅಭಿಮಾನಿಗಳನ್ನು, ಗೆಳೆಯರನ್ನು ವಿಪರೀತವಾಗಿ ಕಾಡಿದೆ. ಅತ್ಯಂತ ಆಪ್ತವಾಗಿದ್ದ ಚಿರಂಜೀವಿ ಸರ್ಜಾ ಅವರನ್ನೂ ಸಹ ಚಿರು ಸಾವು ಅತೀವವಾಗಿ ಕಾಡಿದೆ.
ಅಣ್ಣನನ್ನು ಕಳೆದುಕೊಂಡ ನೆನಪಲ್ಲಿ ಚಿರಂಜೀವಿ ಸರ್ಜಾ ಖಿನ್ನತೆಗೆ ಜಾರಿದ್ದಾರೆ ಎನ್ನಲಾಗುತ್ತಿದೆ. ಎರಡು ದಿನದ ಹಿಂದೆ ಧ್ರುವ ಸರ್ಜಾ ಮತ್ತು ಅವರ ತಂದೆ-ತಾಯಿ ಸಹ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಈಗ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ.
ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ?
ಖಿನ್ನತೆಗೆ ಒಳಗಾಗಿರುವ ಸುದ್ದಿ ನಿಜವೂ ಆಗಿದೆ ಆದರೆ ಧ್ರುವ ಸರ್ಜಾ ಅಭಿಮಾನಿಗಳು ಆತಂಕ ಪಡುವಂತಹುದ್ದು ಏನೂ ಆಗಿಲ್ಲವೆಂದು ಸ್ವತಃ ಅವರೇ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಖಿನ್ನತೆಗೆ ಒಳಗಾಗಿರುವ ಧ್ರುವ ಸರ್ಜಾ?
ಧ್ರುವ ಸರ್ಜಾ ಖಿನ್ನತೆಗೆ ಒಳಗಾಗಿದ್ದು, ಸರಿಯಾಗಿ ಊಟ-ತಿಂಡಿ ಮಾಡದೆ ಬೇಸರದಲ್ಲಿದ್ದರು, ಹಾಗಾಗಿಯೇ ಆಸ್ಪತ್ರೆಗೆ ಸಹ ಭೇಟಿ ನೀಡಿ ಆಪ್ತಸಲಹೆ ಪಡೆದಿದ್ದಾರೆ. ಚಿಕಿತ್ಸೆ ಸಹ ಪಡೆದಿದ್ದಾರೆ. ಶೀಘ್ರದಲ್ಲಿಯೇ ಗೆಲುವಾಗಿ ಎಲ್ಲರೆದುರು ಧ್ರುವ ಬರಲಿದ್ದಾರೆ.

ಮಾಧ್ಯಮದೊಟ್ಟಿಗೆ ಧ್ರುವ ಸರ್ಜಾ ಮಾತು
ಈ ಬಗ್ಗೆ ಮಾಧ್ಯಮದ ಒಟ್ಟಿಗೆ ಮಾತನಾಡಿರುವ ಧ್ರುವ ಸರ್ಜಾ, ಆಘಾತದಿಂದ ಹೊರಬರಲು ಆಗಿತ್ತಿಲ್ಲ. ಕಾಲಕ್ರಮೇಣ ಸರಿ ಹೋಗುತ್ತದೆ. ಯಾರಿಗೂ ಭಯ ಬೇಡ. ನನ್ನನ್ನು ನಾನು ಸಂಭಾಳಿಸಿಕೊಳ್ತೀನಿ, ಚೇತರಿಸಿಕೊಂಡು ಎಲ್ಲರ ಮುಂದೆ ಶೀಘ್ರವೇ ಬರ್ತೀನಿ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಫನ್ ಗಾಗಿ ಮಾಡಿದ್ದು, ಆದರೀಗ ಅಮೂಲ್ಯವಾದ ವಿಡಿಯೋವಾಗಿದೆ: ಧ್ರುವ ಸರ್ಜಾ ಪತ್ನಿ

ಮೊದಲಿನ ಲಯಕ್ಕೆ ಮರಳಲು ಸಮಯ ಬೇಕು
ಸರ್ಜಾ ಕುಟುಂಬಕ್ಕೆ ಆಪ್ತವಾಗಿರುವ ಪ್ರಶಾಂತ್ ಸಂಬರ್ಗಿ ಸಹ ಮಾತನಾಡಿ, ಧ್ರುವ ಸರ್ಜಾ ಆಘಾತಕ್ಕೆ ಒಳಗಾಗಿದ್ದಾರೆ, ಆದರೆ ಹತ್ತು ದಿನದಲ್ಲಿ ಅವರು ಮೊದಲಿನಂತೆ ಎಲ್ಲರೆದುರು ಬರಲಿದ್ದಾರೆ. ಆದರೆ ಅವರಿಗೆ ಮತ್ತೆ ಮೊದಲಿನ ಲಯಕ್ಕೆ ಮರಳಲು ಸ್ವಲ್ಪ ಖಾಸಗಿ ಸಮಯ ಬೇಕು' ಎಂದು ಅವರು ಹೇಳಿದ್ದಾರೆ.

ಅಭಿಮಾನಿಗಳು ಮನೆಯ ಬಳಿ ಬಂದಿದ್ದಾರೆ
ಈ ನಡುವೆ ಕೆಲವು ಅಭಿಮಾನಿಗಳು ಧ್ರುವ ಸರ್ಜಾ ಅವರ ಮನೆಯ ಮುಂದೆ ಬಂದು ಅವರ ಹೆಸರು ಕರೆದು ಹೊರಗೆ ಬರುವಂತೆ ದುಂಬಾಲು ಬಿದ್ದಿದ್ದಾರಂತೆ. ಹೀಗೆ ಮಾಡುವುದು ಬೇಡ, ಧ್ರುವ ಸರ್ಜಾ ಗೆ ಸ್ವಲ್ಪ ಸಮಯ ಕೊಡಿ ಎಂದು ಕುಟುಂಬ ಆಪ್ತರು ಮನವಿ ಮಾಡಿದ್ದಾರೆ.
'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ