»   » ದರ್ಶನ್, ಸುದೀಪ್ ಸಮಕ್ಕೆ ಬಂದು ನಿಂತ ಧ್ರುವ ಸರ್ಜಾ ಸಂಭಾವನೆ!

ದರ್ಶನ್, ಸುದೀಪ್ ಸಮಕ್ಕೆ ಬಂದು ನಿಂತ ಧ್ರುವ ಸರ್ಜಾ ಸಂಭಾವನೆ!

Posted By:
Subscribe to Filmibeat Kannada

'ಭರ್ಜರಿ' ಹುಡುಗ ಧ್ರುವ ಸರ್ಜಾ ಈಗ ಸ್ಯಾಂಡಲ್ ವುಡ್ ನ ಓಡುವ ಕುದುರೆ. 'ಅದ್ದೂರಿ', 'ಬಹದ್ದೂರ್' ಇದೀಗ 'ಭರ್ಜರಿ' ಮೂರು ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾ ನೀಡಿರುವ ಧ್ರುವ ಸಂಭಾವನೆ ಈಗ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ.

ಅಚ್ಚರಿ ಎಂದರೆ ದಶಕದ ಕಾಲ ಚಿತ್ರರಂಗದಲ್ಲಿ ಇರುವ ನಟ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಪಡೆಯುವ ಸಂಭಾವನೆಗೆ ಹತ್ತಿರವಾಗುತ್ತಿದೆ ಧ್ರುವ ಸರ್ಜಾ ಸಂಭಾವನೆ. ಒಂದು ಕಡೆ ಆಕ್ಷನ್ ಪ್ರಿನ್ಸ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಚಿಂದಿಯಾದರೆ, ಇತ್ತ ಅವರ ಸಂಭಾವನೆ ಬರೋಬ್ಬರಿ ಆರು ಕೋಟಿ. ಮುಂದೆ ಓದಿ...

6 ಕೋಟಿ

ಧ್ರುವ ಸರ್ಜಾ ಒಂದು ಸಿನಿಮಾಗೆ ಎಷ್ಟು ಹಣ ತೆಗೆದುಕೊಳ್ಳಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಧ್ರುವ ಸಂಭಾವನೆ ಆರು ಕೋಟಿ ಅಂತೆ.

'ಭರ್ಜರಿ' ಮಾತು

'ಭರ್ಜರಿ' ಸಿನಿಮಾದ 50ನೇ ದಿನದ ಸಂಭ್ರಮದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧ್ರುವ ತಮ್ಮ ಸಂಭಾವನೆ ಬಗ್ಗೆ ಕೂಡ ಮಾತನಾಡಿದ್ದಾರೆ.

ವಿಡಿಯೋ ನೋಡಿ ಕೇಳಿದ್ದರು!

ಮೊದಲು 'ಭರ್ಜರಿ' ಚಿತ್ರಕ್ಕೆ ಧ್ರುವ ಮೂರು ಕೋಟಿ ಕೂಡ ತೆಗೆದುಕೊಂಡಿರಲಿಲ್ಲವಂತೆ. ಬಳಿಕ ಯೂಟ್ಯೂಬ್ ನ ಒಂದು ವಿಡಿಯೋದಲ್ಲಿ 'ಧ್ರುವ ಸರ್ಜಾ ಸಂಭಾವನೆ 6 ಕೋಟಿಗೆ ಏರಿದೆ' ಎಂದು ನೋಡಿದ ಧ್ರುವ, ನಿರ್ಮಾಪಕರ ಬಳಿ ಆರು ಕೋಟಿ ಕೇಳಿ ಅಷ್ಟೇ ಹಣವನ್ನು ಪಡೆದರಂತೆ.

ಮಾಧ್ಯಮಗಳು ಫಿಕ್ಸ್ ಮಾಡಿತ್ತು

''ನನ್ನ ಸಂಭಾವನೆ ನನಗಿಂತ ಮೊದಲೇ ಮಾಧ್ಯಮಗಳು ಫಿಕ್ಸ್ ಮಾಡುತ್ತಿವೆ. ಮುಂದೆ ಅದೇ ರೀತಿ 7 ಕೋಟಿ ಸಂಭಾವನೆ ಅಂತ ಸುದ್ದಿ ಹಬ್ಬಿದರೆ ಅಷ್ಟೇ ಕೇಳುತ್ತೇನೆ'' ಎಂದಿದ್ದಾರೆ ಧ್ರುವ ಸರ್ಜಾ.

ಸ್ಟಾರ್ ನಟರ ಸಂಭಾವನೆಗೆ ಸಮ

ಕನ್ನಡದ ಸ್ಟಾರ್ ನಟರಾದ ದರ್ಶನ್, ಸುದೀಪ್, ಯಶ್, ಪುನೀತ್ ಅವರ ಸಂಭಾವನೆ ಕೂಡ 6 ಕೋಟಿ ಗಡಿ ದಾಟಿದೆ. ಇದೀಗ ಧ್ರುವ ಕೂಡ ಹೆಚ್ಚು ಕಮ್ಮಿ ಅದೇ ರೇಂಜ್ ಗೆ ಬಂದು ನಿಂತಿದ್ದಾರೆ.

ಧ್ರುವ ಸರ್ಜಾಗಾಗಿ ಕಥೆ ಬರೆಯುತ್ತಾರಂತೆ ಬಾಲಿವುಡ್ ಸ್ಟಾರ್ ರೈಟರ್ ಶಗುಫ್ತಾ ರಫೀಕ್!

50 ಕೋಟಿ ಕಲೆಕ್ಷನ್

50 ದಿನ ಪೂರೈಸಿರುವ 'ಭರ್ಜರಿ' ಸಿನಿಮಾ ಸದ್ಯ 50 ಕೋಟಿ ಕಲೆಕ್ಷನ್ ಮಾಡಿದೆಯಂತೆ.

ಅರ್ಧ ಶತಕ ಬಾರಿಸಿದ 'ಭರ್ಜರಿ' ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ?

ಸಾಲು ಸಾಲು ಸಿನಿಮಾಗಳು

'ಭರ್ಜರಿ' ಚಿತ್ರದ ನಂತರ ಸ್ವಮೇಕ್ ಕಥೆಯೊಂದಿಗೆ 'ಪೊಗರು' ಚಿತ್ರವನ್ನು ಧ್ರುವ ಕೈಗೆತ್ತಿಕೊಂಡಿದ್ದಾರೆ. ಆ ಬಳಿಯ ಉದಯ್ ಮೆಹ್ತಾ ಮತ್ತು ಅರ್ಜುನ್ ಸರ್ಜಾ ಜೊತೆ ಒಂದೊಂದು ಸಿನಿಮಾ ಮಾಡುವ ಪ್ಲಾನ್ ನಲ್ಲಿ ಧ್ರುವ ಇದ್ದಾರೆ.

English summary
Dhruva Sarja's Remuneration for 'Bharjari' movie was 6 crore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada