For Quick Alerts
  ALLOW NOTIFICATIONS  
  For Daily Alerts

  'ರಥಾವರ' ಚಂದ್ರಶೇಖರ್ ರ ಜೊತೆ ಶಿವರಾಜ್ ಕುಮಾರ್ ಕಮಾಲ್

  By Suneetha
  |

  'ಉಗ್ರಂ' ಖ್ಯಾತಿಯ ನಟ ಶ್ರೀಮುರಳಿ ಅವರು ಮಿಂಚಿದ್ದ 'ರಥವಾರ' ಚಿತ್ರ 100 ದಿನಗಳನ್ನು ಪೂರ್ಣಗೊಳಿಸಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ 'ರಥಾವರ' ಚಿತ್ರಕ್ಕೆ ನಿರ್ದೇಶನ ಮಾಡಿದ್ದ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರು ಶಿವಣ್ಣ ಅವರಿಗೆ ಸಿನಿಮಾ ಮಾಡಲು ತಯಾರಾಗಿದ್ದಾರೆ.

  'ಆನೆ ಪಟಾಕಿ' ಚಿತ್ರದ ನಂತರ 'ರಥಾವರ' [ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!] ಚಿತ್ರದಲ್ಲಿ ಯಶಸ್ವಿಯಾದ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರು ತಮ್ಮ ಮೂರನೇ ಚಿತ್ರವನ್ನು ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಮಾಡಲು ಸಜ್ಜಾಗುತ್ತಿದ್ದಾರೆ.

  "ಈಗಾಗಲೇ ಶಿವಣ್ಣ ಅವರು ಕಥೆಯನ್ನು ಇಷ್ಟಪಟ್ಟಿದ್ದು, ಅವರು ಉತ್ತಮ ಕಥೆಗಳ ಬಗ್ಗೆ ಆಸಕ್ತಿ ತೋರುತ್ತಾರೆ, ಅದಕ್ಕಾಗಿಯೇ ಅವರು ಈ ಸಿನಿಮಾದಲ್ಲಿ ಕೆಲಸ ಮಾಡಲು ಆಸಕ್ತಿ ತೋರಿದ್ದು, ಈ ಕಥೆ ಅವರಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ, ಆದ್ದರಿಂದ ನಾನು ಕಥೆ ಹೇಳಿದ ತಕ್ಷಣ ಒಪ್ಪಿಕೊಂಡರು' ಎಂದು ಸ್ಟಾರ್ ನಟನಿಗೆ ನಿರ್ದೇಶನ ಮಾಡುವ ಖುಷಿಯಲ್ಲಿ ನುಡಿಯುತ್ತಾರೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ.[ಸಲ್ಮಾನ್, ಕರೀನಾ, ಕತ್ರೀನಾ ಇರ್ಲಿ.! ನಮ್ಮ ರಾಜಣ್ಣ ಏನ್ ಪಾಪ ಮಾಡಿದ್ರು?]

  ಅಂದಹಾಗೆ ಈ ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲ್ ಅವರನ್ನು ಕರೆತರಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದು, ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.[ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇರುವ ಮಹಾದಾಸೆ ಏನು?]

  ಸದ್ಯಕ್ಕೆ ಸೆಂಚುರಿ ಸ್ಟಾರ್ ಶಿವಣ್ಣ ಅವರು 'ಶ್ರೀಕಂಠ' ಚಿತ್ರೀಕರಣ ಮುಗಿಸಿ, ಯೋಗಿ ಜಿ ರಾವ್ ಅವರ 'ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತದನಂತರ ಸಹನಾ ಮೂರ್ತಿ ಅವರ 'ಮಾಸ್ ಲೀಡರ್' ಚಿತ್ರದ ಶೂಟಿಂಗ್ ಮುಗಿಸಿ ಆಗಸ್ಟ್ ನಲ್ಲಿ ಚಂದ್ರಶೇಖರ್ ಅವರ ಜೊತೆ ಸೆಟ್ ಗೆ ಹಾಜರಾಗಲಿದ್ದಾರೆ.

  English summary
  Kannada Director Chandrashekar Bandiyappa of 'Rathaavara' fame starring Actor Sriimurali, is overwhelmed by an opportunity to work with a star like Shiva Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X