»   » ನಿರ್ದೇಶನ, ನಟನೆ ಬಗ್ಗೆ ಪ್ರಶ್ನೆಗಳಿದ್ದರೆ ಈ ಕಾರ್ಯಾಗಾರಕ್ಕೆ ಬನ್ನಿ

ನಿರ್ದೇಶನ, ನಟನೆ ಬಗ್ಗೆ ಪ್ರಶ್ನೆಗಳಿದ್ದರೆ ಈ ಕಾರ್ಯಾಗಾರಕ್ಕೆ ಬನ್ನಿ

Posted By:
Subscribe to Filmibeat Kannada

ಆರ್ಟ್ ಸಿನಿಮಾ, ಕಮರ್ಷಿಯಲ್ ಸಿನಿಮಾ, ಪ್ಯಾರಲಲ್ ಸಿನಿಮಾ ಹೀಗೆ ಚಲನಚಿತ್ರವನ್ನು ಕೆಟಗರಿ ಮಾಡಿ ನೋಡುವ ಬದಲು ಸದಭಿರುಚಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಜನರ ಮುಂದಿಡುವುದು ನಮ್ಮ ಕೆಲಸ ಎಂಬುದನ್ನು ನಂಬಿರುವ ನಿರ್ದೇಶಕ ಕೇಸರಿ ಅವರು ಸಿನಿಮಾ ಕುರಿತ ಶಾಲೆ ಉಸ್ತುವಾರಿ ನೋಡಿಕೊಳ್ಳುವುದು ಎಲ್ಲರಿಗೂ ಗೊತ್ತೇ ಇದೆ.

ಭೂಮಿ ಗೀತ ಎಂಬ ಸದಭಿರುಚಿ ಚಿತ್ರವನ್ನು ಕನ್ನಡ ಸಿನಿಮಾ ರಂಗಕ್ಕೆ ನೀಡಿದ ಪ್ರಬುದ್ಧ ನಿರ್ದೇಶಕ ಕೇಸರಿ ಹರವೂ ಅವರು ನಂತರ ಉತ್ತಮ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಜನಪರ ಕಾಳಜಿಯನ್ನು ಮುಂದುವರೆಸಿದ್ದರು. ಈಗ ಹೊಸ ಸಾಹಸಕ್ಕೆ ಕೇಸರಿ ಅವರು ಕೈ ಹಾಕಿದ್ದಾರೆ. ಟೈಮ್ ಅಂಡ್ ಸ್ಪೇಸ್ ಎಂಬ ಹೆಸರಿನ ಚಲನಚಿತ್ರ ಶಾಲೆಯನ್ನು ಇತ್ತೀಚೆಗೆ ಆರಂಭಿಸಿದ್ದಾರೆ. [ಸಿನಿಮಾ ಫೀಲ್ಡ್ ಸೇರುವ ಆಸಕ್ತರಿಗಾಗಿ ಶಾಲೆ]

ಈಗ ಕೇಸರಿ ಅವರ ಟೈಮ್ ಅಂಡ್ ಸ್ಪೇಸ್ ಫಿಲಂ ಸ್ಕೂಲ್ ಹಾಗೂ ಜೈನ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಒಂದು ದಿನದ ಫಿಲಂ ಮೇಕಿಂಗ್ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

Director Kesari Haravoo Direction and Acting School Workshop Jayanagar

ಸ್ಥಳ: ಜೈನ್ ಕಾಲೇಜ್, ಜಯನಗರ 9ನೇ ಬ್ಲಾಕ್
ದಿನಾಂಕ: ಜ.11, ಭಾನುವಾರ
ಅವಧಿ: ಬೆಳಗ್ಗೆ 9.30-6.00 PM

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ www.timenspacefilmschool.in ವೆಬ್ ತಾಣಕ್ಕೆ ಭೇಟಿ ಕೊಡಿ

ಸಂಪರ್ಕ ಸಂಖ್ಯೆ: 99453 42433

'ಟೈಂ&ಸ್ಪೇಸ್' ಚಲನಚಿತ್ರ ಶಾಲೆ: ಅಕ್ಟೋಬರ್ 4ರಿಂದ 'ಟೈಂ&ಸ್ಪೇಸ್' ಚಲನಚಿತ್ರ ಶಾಲೆಯ ಮೊಟ್ಟಮೊದಲ ವಾರಾಂತ್ಯದ ಚಿತ್ರ ನಿರ್ದೇಶನದ ಬ್ಯಾಚ್ ಆರಂಭವಾಗಿದೆ. ಚಿತ್ರ ನಿರ್ದೇಶನ ಹಾಗೂ ಅಭಿನಯ ರೆಗ್ಯುಲರ್ ಕೋರ್ಸ್ ಗಳು ಅಕ್ಟೋಬರ್ 27ರಿಂದ ಶುರುವಾಗಿತ್ತು.

ಹೆಚ್ಚು ಹೆಚ್ಚು ಮಹಿಳೆಯರು ಚಿತ್ರ ನಿರ್ದೇಶನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲೆಂಬ ಆಶಯದೊಂದಿಗೆ ಮಹಿಳಾ ವಿದ್ಯಾಕಾಂಕ್ಷಿಯರಿಗೆ ಕೋರ್ಸ್ ಫೀಸಿನಲ್ಲಿ 20% ವಿನಾಯ್ತಿ...

* ಸಂಪರ್ಕ ವಿಳಾಸ :  #15, 1st Floor, Above HDFC ATM, 1 C Main, Shakti Garden, Kalyananagara, Nagarabhavi 2nd Stage, Bengaluru 560072. 

English summary
Director Kesari Haravoo led Time&Space Film School in association with Jain University is organizing a One-Day Introductory Workshop on Basics of Film making Jain College, Jayanagar 9th Block on Sunday, Jan 11th. 9.30am to 6.00pm Visit www.timenspacefilmschool.in for details and registration.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada