twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಫೀಲ್ಡ್ ಸೇರುವ ಆಸಕ್ತರಿಗಾಗಿ ಶಾಲೆ

    By ಮಹೇಶ್ ಮಲ್ನಾಡ್
    |

    ಭೂಮಿ ಗೀತ ಎಂಬ ಸದಭಿರುಚಿ ಚಿತ್ರವನ್ನು ಕನ್ನಡ ಸಿನಿಮಾ ರಂಗಕ್ಕೆ ನೀಡಿದ ಪ್ರಬುದ್ಧ ನಿರ್ದೇಶಕ ಕೇಸರಿ ಹರವೂ ಅವರು ನಂತರ ಉತ್ತಮ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಜನಪರ ಕಾಳಜಿಯನ್ನು ಮುಂದುವರೆಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸಾಹಸಕ್ಕೆ ಕೇಸರಿ ಅವರು ಕೈ ಹಾಕಿದ್ದಾರೆ. ಟೈಮ್ ಅಂಡ್ ಸ್ಪೇಸ್ ಎಂಬ ಹೆಸರಿನ ಚಲನಚಿತ್ರ ಶಾಲೆಯನ್ನು ಇತ್ತೀಚೆಗೆ ಆರಂಭಿಸಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಉತ್ತಮ ಪ್ರತಿಭಾವಂತರನ್ನು ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಈ ಹಿಂದೆ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ನೇತೃತ್ವ ವಹಿಸಿದ್ದ ನಿರ್ದೇಶಕ ಕೇಸರಿ ಹರವೂ ಅವರು ಚಲನಚಿತ್ರಗಳನ್ನು ವೀಕ್ಷಿಸಿ, ಸಮರ್ಥವಾಗಿ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಆದರೆ, ಕೆಲ ಆಪ್ತ ಸ್ನೇಹಿತರಿಂದಲೇ ಕೇಸರಿ ಅವರ ಆಯ್ಕೆ ಮಾನದಂಡದ ಬಗ್ಗೆ ಅಪಸ್ವರ ಕೇಳಿ ಬಂದಾಗ ಮಾನಸಿಕವಾಗಿ ಘಾಸಿಗೊಂಡಿದ್ದರು. [ಗುಂಡ್ಯಾ ನೀರುಕರೆಂಟು ಕುರಿತ ಸಿನಿಮಾ]

    ಆರ್ಟ್ ಸಿನಿಮಾ, ಕಮರ್ಷಿಯಲ್ ಸಿನಿಮಾ, ಪ್ಯಾರಲಲ್ ಸಿನಿಮಾ ಹೀಗೆ ಚಲನಚಿತ್ರವನ್ನು ಕೆಟಗರಿ ಮಾಡಿ ನೋಡುವ ಬದಲು ಸದಭಿರುಚಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಜನರ ಮುಂದಿಡುವುದು ನಮ್ಮ ಕೆಲಸ ಎಂಬುದನ್ನು ನಂಬಿರುವ ಕೇಸರಿ ಅವರು ಈಗ ಅದೆಲ್ಲವನ್ನು ಮರೆತು ಮತ್ತೆ ಸಿನಿಮಾ ಕುರಿತ ಶಾಲೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಶಾಲೆ ಉದ್ಘಾಟನೆ ಚಿತ್ರಗಳು ಹಾಗೂ ಇನ್ನಿತರ ವಿವರಗಳು ಮುಂದಿದೆ

    ಭೂಮಿಗೀತ ಚಲನಚಿತ್ರದ ನಂತರ ಕೇಸರಿ ಹರವೂ

    ಭೂಮಿಗೀತ ಚಲನಚಿತ್ರದ ನಂತರ ಕೇಸರಿ ಹರವೂ

    ಭೂಮಿಗೀತ ಚಲನಚಿತ್ರದ ನಂತರ ಕೇಸರಿ ಹರವೂ ಅವರು ಅಘನಾಶಿನಿ, ಸರೋಜಿನಿ, ಗರ ಮತ್ತು ನದಿಕಣಿವೆ ಮುಂತಾದ ಸಾಕ್ಷ್ಯಚಿತ್ರಗಳನ್ನು ರೂಪಿಸಿದ್ದರು. ಸಾಹಿತಿ ದೇ ಜವರೇಗೌಡ ಅವರ ಬದುಕು-ಬರಹ ಕುರಿತ ಸಾಕ್ಷ್ಯಚಿತ್ರವನ್ನು ವಾರ್ತಾ ಇಲಾಖೆಗಾಗಿ ಮಾಡಿಕೊಟ್ಟಿದ್ದಾರೆ.

    ಕೇಸರಿ ಅವರು .ಬಿ. ವಿಜಯ್ ರೆಡ್ಡಿ, ಡಿ .ರಾಜೇಂದ್ರ ಬಾಬು ಹಾಗೂ ವಿ. ರವಿಚಂದ್ರನ್ ಮುಂತಾದ ಹಿರಿಯ ನಿರ್ದೇಶಕರ ಜೊತೆ ಚಿತ್ರಕಥೆಗಾರರಾಗಿ, ಸಹಾಯಕರಾಗಿ ದುಡಿದ ಅನುಭವವನ್ನು ಮುಂದಿನ ಪೀಳಿಗೆಯ ಜೊತೆ ಹಂಚಿಕೊಳ್ಳಲು ಚಲನ ಚಿತ್ರ ಶಾಲೆ ಆರಂಭಿಸಿದ್ದಾರೆ.

    ಹೊಸ ಸಂಭ್ರಮದ ಬಗ್ಗೆ ಹರವೂ ಹೇಳಿದ್ದೇನು

    ಹೊಸ ಸಂಭ್ರಮದ ಬಗ್ಗೆ ಹರವೂ ಹೇಳಿದ್ದೇನು

    ಈ ಸಂಭ್ರಮದ ಬಗ್ಗೆ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದು ಹೀಗೆ
    ನಮ್ಮ 'ಟೈಂ&ಸ್ಪೇಸ್' ಚಲನಚಿತ್ರ ಶಾಲೆಯನ್ನು ನನ್ನ ಒಂದನೇ ತರಗತಿಯ ಮೊದಲ ಮೇಷ್ಟ್ರು ಶಿರಾಳಕೊಪ್ಪದ ಎನ್. ಎಸ್. ಶಿವಾನಂದಪ್ಪ ಸರಳ ಸಮಾರಂಭದಲ್ಲಿ ಉದ್ಘಾಟಿಸಿದರು.

    ಅವರು ನನಗೆ ಅಚ್ಚುಮೆಚ್ಚಿನ ಮೇಷ್ತ್ರು. ನಾನು ಅವರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿ. ಜೊತೆಗೆ ಗೆಳೆಯರಾದ ಗುಂಡಣ್ಣ, ಸುಚೇಂದ್ರಪ್ರಸಾದ್, ಪವಿತ್ರಾ ಲೋಕೇಶ್, ತಗಡೂರು ಶಿವಾನಂದ್, ಕವೀಶ, ನನ್ನ ತಾಯಿ, ತಮ್ಮ, ಹೆಂಡತಿ, ಮಗಳು, ಬಂಧು ಬಳಗ ಎಲ್ಲರೂ ಇದ್ದಾರೆ. ನಿಮ್ಮೆಲ್ಲರಿಗೂ ಸುಸ್ವಾಗತ. ಸಮಯ ಸಿಕ್ಕಾಗ ಬನ್ನಿ, ಬರುತ್ತಿರಿ...

     ವಾರಾಂತ್ಯದ ಕೋರ್ಸ್ ಆರಂಭವಾಗಿದೆ

    ವಾರಾಂತ್ಯದ ಕೋರ್ಸ್ ಆರಂಭವಾಗಿದೆ

    * ಅಕ್ಟೋಬರ್ 4ರಿಂದ ನಮ್ಮ 'ಟೈಂ&ಸ್ಪೇಸ್' ಚಲನಚಿತ್ರ ಶಾಲೆಯ ಮೊಟ್ಟಮೊದಲ ವಾರಾಂತ್ಯದ ಚಿತ್ರ ನಿರ್ದೇಶನದ ಬ್ಯಾಚ್ ಆರಂಭವಾಗಿದೆ.
    * ಚಿತ್ರ ನಿರ್ದೇಶನ ಹಾಗೂ ಅಭಿನಯ ರೆಗ್ಯುಲರ್ ಕೋರ್ಸ್ ಗಳು ಅಕ್ಟೋಬರ್ 27ರಿಂದ ಆರಂಭವಾಗಲಿವೆ.
    * ಪ್ರವೇಶ ಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 20.

    ಮಹಿಳೆಯರಿಗೆ ವಿನಾಯತಿ

    ಮಹಿಳೆಯರಿಗೆ ವಿನಾಯತಿ

    ಹೆಚ್ಚು ಹೆಚ್ಚು ಮಹಿಳೆಯರು ಚಿತ್ರ ನಿರ್ದೇಶನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲೆಂಬ ಆಶಯದೊಂದಿಗೆ ಮಹಿಳಾ ವಿದ್ಯಾಕಾಂಕ್ಷಿಯರಿಗೆ ಕೋರ್ಸ್ ಫೀಸಿನಲ್ಲಿ 20% ವಿನಾಯ್ತಿ...

    * ಸಂಪರ್ಕ ವಿಳಾಸ #15, 1st Floor, Above HDFC ATM, 1 C Main, Shakti Garden, Kalyananagara, Nagarabhavi 2nd Stage, Bengaluru 560072. Tel: 9945342433

    ಕೇಸರಿ ಹರವೂ ಅವರ ಫೇಸ್ ಬುಕ್ ಪುಟಕ್ಕೆ ಕ್ಲಿಕ್ ಮಾಡಿ

    English summary
    Filmfare and State award winner director Kesari Haravoo venturing in to new arena by guiding and training young talents of Kannada cinema. He recently opened a school named 'Time and Space' institute which offers Film Direction and Acting courses in Bengaluru.
    Monday, October 13, 2014, 18:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X