»   » ಎಂಗೇಜ್ ಆದ ಪವನ್: ಬಾಗಲಕೋಟೆ ಹುಡುಗಿಯನ್ನ ಮದುವೆ ಆಗುವ ಹಿಂದಿದೆ ಸೀಕ್ರೆಟ್.!

ಎಂಗೇಜ್ ಆದ ಪವನ್: ಬಾಗಲಕೋಟೆ ಹುಡುಗಿಯನ್ನ ಮದುವೆ ಆಗುವ ಹಿಂದಿದೆ ಸೀಕ್ರೆಟ್.!

Posted By:
Subscribe to Filmibeat Kannada
ಕನ್ನಡ ಸಿನಿಮಾ ನಿರ್ದೇಶಕ ಪವನ್ ವಡೆಯರ್ ಮದುವೆ ಫಿಕ್ಸ್ | Filmibeat Kannada

'ಗೋವಿಂದಾಯ ನಮಃ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪ್ರತಿಭಾನ್ವಿತ ನಿರ್ದೇಶಕ ಹಾಗೂ ನಟ ಪವನ್ ಒಡೆಯರ್ ನಿಶ್ಚಿತಾರ್ಥ ಇಂದು (ಡಿಸೆಂಬರ್ 7) ನಡೆದಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟಿ ಆಗಿ ಗುರುತಿಸಿಕೊಂಡಿರುವ ಅಪೇಕ್ಷಾ ಪುರೋಹಿತ್ ರ ಜೊತೆ ಪವನ್ ಒಡೆಯರ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ, ಪವನ್ ಒಡೆಯರ್ ಉತ್ತರ ಕರ್ನಾಟಕದ ಅಪೇಕ್ಷಾ ಪುರೋಹಿತ್ ರನ್ನ ಮದುವೆಯಾಗಲು ಒಪ್ಪಿರುವುದರ ಹಿಂದೆ ಒಂದು ಇಂಟ್ರೆಸ್ಟಿಂಗ್ ವಿಚಾರ ಇದೆ. ಪಕ್ಕಾ ಅರೇಂಜ್ ಮ್ಯಾರೇಜ್ ಆಗಿರುವ ಇವರಿಬ್ಬರ ನಿಶ್ಚಿತಾರ್ಥ ಹೇಗಾಯ್ತು.? ನಿಶ್ಚಿತಾರ್ಥದಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ...

ನಿಶ್ಚಿತಾರ್ಥ ಮಾಡಿಕೊಂಡ ಪವನ್ ಒಡೆಯರ್

ನಟ ಹಾಗೂ ನಿರ್ದೇಶಕ ಪವನ್ ಒಡೆಯರ್ ರ ನಿಶ್ಚಿತಾರ್ಥ ಇಂದು ಬಾಗಲಕೋಟೆಯಲ್ಲಿ ನಡೆದಿದೆ. ಪವನ್ ಒಡೆಯರ್ ಮನೆಯವರು ಹಾಗೂ ಅಪೇಕ್ಷಾ ಮನೆಯವರ ಸಮ್ಮುಖದಲ್ಲಿ ಸಿಂಪಲ್ ಆಗಿ ಶಾಸ್ತ್ರೋಕ್ತವಾಗಿ ಎಂಗೇಜ್ ಮೆಂಟ್ ಆಗಿದೆ.

ಬ್ರಾಹ್ಮಣರ ಸಂಪ್ರದಾಯದಂತೆ ನಿಶ್ಚಿತಾರ್ಥ

ನಟಿ ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಹುಡುಗಿ. ಅನುಷಾ ಪುರೋಹಿತ್ ಹಾಗೂ ಆನಂದ್ ಪುರೋಹಿತ್ ರ ಮಗಳಾಗಿರುವ ಅಪೇಕ್ಷಾ ಬೆಂಗಳೂರಿನಲ್ಲಿ ವಾಸವಿದ್ದಾರೆ. 'ಕಾಫಿ ತೋಟ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅಪೇಕ್ಷಾ ಪುರೋಹಿತ್ ಅನೇಕ ಧಾರಾವಾಹಿಗಳಲ್ಲೂ ಆಕ್ಟ್ ಮಾಡಿದ್ದಾರೆ.

ಅಪೇಕ್ಷಾ ಮೇಲೆ 'ಗೂಗ್ಲಿ' ಪವನ್ ಒಡೆಯರ್ ಗೆ ಪ್ಯಾರ್ ಗೆ ಆಗ್ಬಿಟೈತೆ.!

ಪವನ್ ಕೂಡ ಉತ್ತರ ಕರ್ನಾಟಕದವರೇ.!

ನಿರ್ದೇಶಕ ಪವನ್ ಒಡೆಯರ್ ಉತ್ತರ ಕರ್ನಾಟಕದ ಹುಡುಗಿಯನ್ನೇ ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಮನೆಯಲ್ಲೂ ಕೂಡ ಅದರಂತೆಯೇ ಬಾಗಲಕೋಟೆಯ ಹುಡುಗಿಯನ್ನ ಸೊಸೆ ಮಾಡಿಕೊಂಡಿದ್ದಾರೆ. ಪವನ್ ಒಡೆಯರ್ ಬೆಂಗಳೂರಿನವರು ಎಂದು ಅದೆಷ್ಟೋ ಜನರು ಅಂದುಕೊಂಡಿದ್ದರು. ಆದರೆ ಪವನ್ ಮೂಲತಃ ಬೆಳಗಾವಿಯವರು. ಇದೇ ಕಾರಣದಿಂದ ಉತ್ತರಕರ್ನಾಟಕದ ಹುಡುಗಿಯನ್ನ ಮದುವೆಯಾಗಲು ಸಮ್ಮತಿ ನೀಡಿದ್ದಾರೆ.

ಸಿಂಪಲ್ ಆಗಿತ್ತು ನಿಶ್ಚಿತಾರ್ಥ

ಪವನ್ ಹಾಗೂ ಅಪೇಕ್ಷಾ ಎಂಗೇಜ್ ಮೆಂಟ್ ನಲ್ಲಿ ಇಬ್ಬರ ಮನೆಯ ಸಂಬಂಧಿಕರು ಹಾಗೂ ಸ್ನೇಹಿತರಷ್ಟೇ ಭಾಗಿಯಾಗಿದ್ದರು. ಆಗಸ್ಟ್ ನಲ್ಲಿ (2018) ಬೆಂಗಳೂರಿನಲ್ಲಿ ಈ ಜೋಡಿ ಮದುವೆ ಆಗಲಿದೆ.

English summary
Kannada Director Pawan Wadeyar got engaged to Kannada Actress Apeksha. ಬಾಗಲಕೋಟೆಯಲ್ಲಿ ಅಪೇಕ್ಷಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಗೂಗ್ಲಿ ಸಿನಿಮಾ ನಿರ್ದೇಶಕ ಪವನ್ ಒಡೆಯರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada